Advertisement

ವದ್ದಿಕೆರೆ ಗ್ರಾಮದಲ್ಲಿ ಗಡಿ ಉತ್ಸವ

02:35 PM Dec 10, 2019 | Suhan S |

ಹಿರಿಯೂರು: ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸ್ಫೂರ್ತಿ ರೂರಲ್‌ ಆ್ಯಂಡ್‌ ಅರ್ಬನ್‌ ಡೆವಲಪ್‌ಮೆಂಟ್‌ ಆರ್ಗನೈಜೇಷನ್‌ ಹಿರಿಯೂರು ಸಹಯೋಗದಲ್ಲಿ ಗಡಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಅನ್ನಪೂರ್ಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಡಿ ಉತ್ಸವ ಆಯೋಜನೆ ಮಾಡುವುದರಿಂದ ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿ. ಗ್ರಾಮೀಣ ಕಲೆಗಳಾದ ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಛದ್ಮವೇಷ, ಬೀದಿ ನಾಟಕದಂತಹ ಕಲೆಗಳು ಇನ್ನೂ ಜೀವಂತವಾಗಿರುವುದಕ್ಕೆ ಗ್ರಾಮೀಣ ಕಲೆಗಳ ಗಟ್ಟಿತನವೇ ಕಾರಣ ಎಂದರು. ಕಂದಾಯಾಧಿಕಾರಿ ಕರಿಯಪ್ಪ ಮಾತನಾಡಿ, ಸಾಂಸ್ಕೃತಿಕ ಕಲೆಗಳ ಅನಾವರಣಕ್ಕೆ ಗಡಿ ಉತ್ಸವಗಳು ಸಹಾಯಕವಾಗಿವೆ. ಕಲೆ ನಾಡಿನ ಇತಿಹಾಸ, ಪರಂಪರೆ, ಸಂಸ್ಕೃತಿಯ ಪ್ರತೀಕ ಎಂದು ತಿಳಿಸಿದರು.

ನಾಡ ಕಚೇರಿ ಉಪ ತಹಶೀಲ್ದಾರ್‌ ಮಂಜಣ್ಣ, ಗ್ರಾಮದ ಮುಖಂಡರಾದ ಮಹೇಶ್‌, ಚಂದ್ರಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್‌, ಐಮಂಗಲ ಪಿಎಸ್‌ಐ ಮಲ್ಲಿಕಾರ್ಜುನಯ್ಯ, ಸಾಯಿ ಮೇಘನ ಮಹಿಳಾ ಮಂಡಳಿ ಕಾರ್ಯದರ್ಶಿ ಜಯಂತಿ, ಸ್ಫೂರ್ತಿ ರೂರಲ್‌ ಆ್ಯಂಡ್‌ ಅರ್ಬನ್‌ ಡೆವಲಪ್‌ಮೆಂಟ್‌ ಆರ್ಗನೈಜೇಷನ್‌ ಕಾರ್ಯದರ್ಶಿ ನಾಜಿಯಾ ಬೇಗಂ, ಕಾರ್ಯಕ್ರಮ ಸಂಘಟಕಿ ಎಚ್‌.. ಚಂದ್ರಮ್ಮ ಉಪಸ್ಥಿತರಿದ್ದರು. ಗಡಿ ಉತ್ಸವದ ಅಂಗವಾಗಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next