ಬೆಂಗಳೂರು: ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಸರಕಾರ ಸರ್ವಪಕ್ಷ ಸಭೆ ಕರೆಯುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿ ಸರಕಾರ ಸರ್ವ ಪಕ್ಷಗಳ ಸಭೆ ಕರೆಯಲಿ ಎಂದು ಆಗ್ರಹಿಸಿದರು.
ಗಡಿ ವಿವಾದಕ್ಕೆ ಒಳ್ಳೆಯ ವಕೀಲರನ್ನಿಟ್ಟು ನಡೆಸಬೇಕು. ನಿವೃತ್ತ ನ್ಯಾಯಾಧೀಶ ಮಂಜುನಾಥ್ ಅವರು ನಿಧನದರಾಗಿ ಹತ್ತು ತಿಂಗಳು ಆಗಿದೆ.ಆದರೆ ಇಲ್ಲಿಯವರೆಗೆ ಗಡಿ ಆಯೋಗದ ಅಧ್ಯಕ್ಷರನ್ನು ಮಾಡಿರಲಿಲ್ಲ. ಇದೀಗ ಶಿವರಾಜ್ ಪಾಟೀಲ್ ಅವರನ್ನ ನೇಮಕ ಮಾಡಿದ್ದಾರೆ ಮೊದಲು ಸರ್ವಪಕ್ಷ ಸಭೆ ಕರೆಯಲಿ ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ ಡಬಲ್ ಎಂಜಿನ್ ಸರ್ಕಾರ ಮೊದಲು ಮಹಾರಾಷ್ಟ್ರದ ಪುಂಡಾಟ ನಿಲ್ಲಿಸುವ ಕೆಲಸ ಮಾಡಲಿ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಜತೆ ಈ ಬಗ್ಗೆ ಮಾತುಕತೆ ನಡೆಸಬೇಕು ಎಂದರು.