Advertisement
ಪ್ರಮುಖ ಗಡಿವಿವಾದಗಳು1. ಕರ್ನಾಟಕ-ಮಹಾರಾಷ್ಟ್ರ (ಬೆಳಗಾವಿ ವಿವಾದ)
2. ಅಸ್ಸಾಂ-ಮೆಘಾಲಯ
3. ಅಸ್ಸಾಂ- ಮೀಜೋರಾಂ
4. ಅಸ್ಸಾಂ- ಅರುಣಾಚಲ ಪ್ರದೇಶ
5. ಅಸ್ಸಾಂ- ನಾಗಾಲ್ಯಾಂಡ್
1972ರಲ್ಲಿ ಅಸ್ಸಾಂನಿಂದ ಬೇರ್ಪಟ್ಟು ಮಿಜೋರಾಂ ಕೇಂದ್ರಾಡಳಿತ ಪ್ರದೇಶವಾಗಿದ್ದು, 1987ರಲ್ಲಿ ಪೂರ್ಣ ರಾಜ್ಯವಾಯಿತು. 1972ರಿಂದಲೇ ಇಲ್ಲಿ ಗಡಿ ವಿವಾದವಿದೆ. ಈ ಎರಡೂ ರಾಜ್ಯಗಳ ಗಡಿಯಲ್ಲಿ ಈಗ ಸಂಘರ್ಷ ಉಲ್ಬಣಗೊಂಡಿದ್ದು ಹೆಚ್ಚಿನ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಕ್ರಮಣ, ಶಿಬಿರ ನಿರ್ಮಾಣ ಹೆಸರಲ್ಲಿ ಘರ್ಷಣೆ ನಡೆಯುತ್ತಿದೆ. ಉಭಯ ರಾಜ್ಯಗಳ ರಾಜಕೀಯ ನಾಯಕರ ನಡುವೆ ಮಾತುಕತೆ ನಡೆಯುತ್ತಿದ್ದರೂ ಈವರೆಗೂ ವಿವಾದ ತಾರ್ಕಿಕ ಅಂತ್ಯ ಕಂಡಿಲ್ಲ. ವಿವಾದ
– 169 ಕಿ.ಮೀ.ಅಂತಾರಾಜ್ಯ ಗಡಿ ವಿವಾದ
-ಉಭಯ ರಾಜ್ಯಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಫಲ ಸಿಕ್ಕಿಲ್ಲ
-2021ರ ಜು.26ರಂದು ಮಿಜೋರಾಂ ಪೊಲೀಸರಿಂದ 6 ಮಂದಿ ಅಸ್ಸಾಂ ಪೊಲೀಸರ ಹತ್ಯೆ, 40ಕ್ಕೂ ಹೆಚ್ಚು ಮಂದಿಗೆ ಗಾಯ
Related Articles
1963ರಲ್ಲಿ ನಾಗಾಲ್ಯಾಂಡ್ ರಾಜ್ಯವನ್ನು ಸ್ಥಾಪಿಸಲಾಗಿದೆ. ಆದರೆ, ಕೆಲವೊಂದು ಪ್ರದೇಶಗಳು ತಮ್ಮ ಕಡೆಗೆ ಬಂದಿಲ್ಲ ಎಂಬ ಕಾರಣದಿಂದಾಗಿ ಇದುವರೆಗೆ ನಾಗಾಲ್ಯಾಂಡ್ ರಾಜ್ಯ ರಚನೆ ಕಾಯ್ದೆಯನ್ನು ಒಪ್ಪಿಕೊಂಡಿಲ್ಲ. ಅಸ್ಸಾಂನ ಮೆರಾಪಾನಿ ಎಂಬ ಗ್ರಾಮ ಸೇರಿದಂತೆ ನಾಗಾಲ್ಯಾಂಡ್‌ನ ಡೋಯಿಂಗ್ ಮೀಸಲು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ಉಲ್ಬಣಿಸಿದೆ. ಆಗಾಗ ಗಡಿಯಲ್ಲಿ ಸಣ್ಣ-ಪುಟ್ಟ ಘರ್ಷಣೆ ನಡೆಯುತ್ತಲೇ ಇರುತ್ತವೆ. 1988ರಿಂದಲೂ ಸುಪ್ರೀಂಕೋರ್ಟ್‌ನಲ್ಲಿ ವಿವಾದ ವಿಚಾರಣೆಯ ಹಂತದಲ್ಲಿದೆ. 2014ರಲ್ಲಿ ನಾಗಾ ಪ್ರತ್ಯೇಕತಾವಾದಿಗಳು ಅಸ್ಸಾಂನ ಶಿವಸಾಗರ್, ಜೋರ್ಹಾತ್, ಗಾಲಾಘಾಟ್, ಉರಿಯಾಮ್‌ಘಾಟ್, ಕಾರ್ಬಿ, ಆಂಗ್ಲೋಂಗ್ ಸೇರಿದಂತೆ ಕೆಲವೆಡೆ 200ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಾಕಿದ್ದರು. ಇದರಿಂದಾಗಿ 10 ಸಾವಿರ ಮಂದಿ ನಿರಾಶ್ರಿತ ಶಿಬಿರಗಳಿಗೆ ಹೋಗಿದ್ದರು.
Advertisement
ವಿವಾದ– 512 ಕಿ.ಮೀ. ಅಂತಾರಾಜ್ಯ ಗಡಿವಿವಾದ
-ನಾಗಾಲ್ಯಾಂಡ್‌ನ ದಿಮಾಪುರ್, ವೋಖಾ, ಮೋಕೋಕ್‌ಛುಂಗ್ ಮತ್ತು ಮಾನ್ ಜಿಲ್ಲೆ
-ಅಸ್ಸಾಂನ ಗೋಲಘಾಟ್, ಜೋರ್‌ಹಾಟ್, ದಿಬ್ರುಗರ್ì, ಟಿನ್‌ಸುಖೀಯಾ, ಮತ್ತು ಚರೈಡಿಯೋ ಜಿಲ್ಲೆಗಳು
-1985ರಲ್ಲಿ ನಡೆದ ಘರ್ಷಣೆಯಲ್ಲಿ 50 ಮಂದಿ ಸಾವು
-1988ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಗಡಿವಿವಾದ ವಿಚಾರಣೆ ಹಂತದಲ್ಲಿದೆ
– ವಿವಾದ ಇತ್ಯರ್ಥಕ್ಕೆ ಉಭಯ ರಾಜ್ಯಗಳಿಂದ ಮಾತುಕತೆ
-2021ರ ಮೇ 28ರಂದು ನಾಗಾಲ್ಯಾಂಡ್- ಅಸ್ಸಾಂನ ಮೇರಾಪಾಣಿಯಲ್ಲಿಯಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದರು. ಅಸ್ಸಾಂ-ಮೆಘಾಲಯ
ಅಪ್ಪರ್ ತರಾಬಾರಿ, ಗಾಜಾಂಗ್ ಸಂರಕ್ಷಿತ ಅರಣ್ಯ, ಹಾಹಿಮ್, ಲಾಂಗ್‌ಪಿಹ್, ಬೋರ್ಡೂರ್, ಬೋಕ್ಲಾಪಾರಾ, ನಾಂಗ್‌ವಾಹ್, ಮತಮುರ್, ಖಾನಾಪಾರ-ಪಿಲಿಂಗ್‌ಕತ, ದೇಶೊªàಮೋರೋಹ್ ಬ್ಲಾಕ್ 1 ಮತ್ತು ಬ್ಲಾಕ್ 2, ಖಾಂಡುಲಿ ಮತ್ತು ರತಾಚೇರಾ ಪ್ರದೇಶಗಳ ಸಂಬಂಧ ಗಡಿ ವಿವಾದವಿದೆ. ಈ ಸಂಬಂಧ ಅಸ್ಸಾಂ ಹಾಗೂ ಮೆಘಾಲಯಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದು, ವಿಚಾರಣೆ ನಡೆಯುತ್ತಿದೆ. ಎರಡೂ ರಾಜ್ಯಗಳ ರಾಜಕೀಯ ಮುಖಂಡರು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಹಂತದಲ್ಲಿದ್ದಾರೆ. ಆದರೆ, ನವೆಂಬರ್‌ನಲ್ಲಿ ಅಸ್ಸಾಂ ಪೊಲೀಸರು ಮೆಘಾಲಯ ಗಾಮೀಣ ಭಾಗದ 22 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೆಘಾಲಯ ಮುಖ್ಯಮಂತ್ರಿ ಕರ್ನಾಡ್ ಕೆ.ಸನ್ಮಾ ಆರೋಪಿಸಿದ್ದಾರೆ. 1972ರಲ್ಲಿ ಮೆಘಾಲಯ ರಾಜ್ಯ ಸ್ಥಾಪನೆಯಾದ ನಂತರವೂ ಗಡಿ ವಿವಾದ ಮುಂದುವರಿದಿದೆ. ಅಸ್ಸಾಮಿನ ರಾಜಧಾನಿ ಗುವಾಹಟಿಯು ಮೆಘಾಲಯದ ರಿಬೋಯಿ ಜತೆ ಗಡಿ ಹಂಚಿಕೊಂಡಿದೆ. ಇವೆರಡೂ ರಾಜ್ಯಗಳ ವ್ಯಾಪಾರಿಗಳು, ಗುತ್ತಿಗೆದಾರರ ನಡುವೆ ಆಗಾಗ ಗಲಾಟೆ ನಡೆಯುವುದು ಸಾಮಾನ್ಯವಾಗಿದೆ. ವಿವಾದ
– 884 ಕಿ.ಮೀ ವ್ಯಾಪ್ತಿಯ 12 ನಗರಗಳಲ್ಲಿನ ಗಡಿಗಳ ವಿವಾದ
-2022ರ ಮಾರ್ಚ್‌ನಲ್ಲಿ 36.79 ಚ.ಕಿ.ಮೀ ಸಮನಾಗಿ ಹಂಚಿಕೆಗೆ ಸಮ್ಮತಿ
– 2022ರ ನ.22ರಂದು ಅಸ್ಸಾಂ ಪೊಲೀಸರಿಂದ ಮೆಘಾಲಯದ ಮುಖೊÅàದಲ್ಲಿನ ಐವರು ನಾಗರಿಕರ ಹತ್ಯೆ ಅಸ್ಸಾಂ- ಅರುಣಾಚಲ ಪ್ರದೇಶ
1987ರಲ್ಲಿ ಅರುಣಾಚಲ ಪ್ರದೇಶ ರಾಜ್ಯವನ್ನು ರಚಿಸಲಾಗಿದ್ದು, ಆಗಿನಿಂದಲೂ ಅಸ್ಸಾಂ ಜತೆಗೆ ಗಡಿ ವಿವಾದ ನಡೆದುಕೊಂಡು ಬಂದಿದೆ. ಅಸ್ಸಾಂನ ಕೆಲವೊಂದು ಪ್ರದೇಶಗಳನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಬೇಕು ಎಂಬುದು ಅರುಣಾಚಲ ಪ್ರದೇಶದವರ ಬೇಡಿಕೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಇಲ್ಲಿ 2014ರಿಂದೀಚೆಗೆ ಯಾವುದೇ ಘರ್ಷಣೆ ನಡೆದಿಲ್ಲ. 804 ಕಿ.ಮೀ.ವ್ಯಾಪ್ತಿಯ ಗಡಿಯು ವಿವಾದಕ್ಕೆ ಸಿಲುಕಿದೆ. 1989ರಿಂದಲೂ ಈ ಗಡಿ ವಿವಾದವು ಸುಪ್ರೀಂಕೋರ್ಟ್‌ನಲ್ಲಿದೆ. ಈವರೆಗೂ ಯಾವುದೇ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. – 804 ಕಿ.ಮೀ. ಅಂತಾರಾಜ್ಯ ಗಡಿ ವಿವಾದ
-123 ಹಳ್ಳಿಗಳ ಜನತೆಗೆ ಸಮಸ್ಯೆ ಸೃಷ್ಟಿಸಿದೆ.
– 1989ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಕೇಸು ವಿಚಾರಣೆ ಹಂತದಲ್ಲಿದೆ
-2014ರ ಜ.29ರಂದು ಅಂತಾರಾಜ್ಯ ಗಡಿಯಲ್ಲಿ ಘರ್ಷಣೆ ಸಂಭವಿಸಿ 10 ಮಂದಿ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದರು. ಇತರೆ ಅಂತಾರಾಜ್ಯ ಗಡಿವಿವಾದಗಳು
-ಆಂಧ್ರಪ್ರದೇಶ- ಒಡಿಶಾ
-ಹಿಮಾಚಲ ಪ್ರದೇಶ- ಲಡಾಖ್
-ಹಿಮಾಚಲ ಪ್ರದೇಶ- ಹರಿಯಾಣ -ಹರೀಶ್ ಹಾಡೋನಹಳ್ಳಿ