Advertisement

ಬೂತ್‌ ವಿಜಯ ಅಭಿಯಾನ ಯಶಸ್ವಿ: ಸಚಿವ ಕೋಟ

12:24 AM Jan 15, 2023 | Team Udayavani |

ಬೆಂಗಳೂರು: ಬೂತ್‌ ವಿಜಯ ಅಭಿಯಾನವನ್ನು ಅತ್ಯಂತ ಆತ್ಮ ವಿಶ್ವಾಸದಿಂದ ಪೂರ್ಣಗೊಳಿ ಸಲಾಗಿದ್ದು, ಜ.2ರಿಂದ 12ರ ವರೆಗೆ ಆಯೋಜಿಸಿದ್ದ ಈ ಅಭಿಯಾನದ ಯಶಸ್ಸಿನ ಮೂಲಕ ರಾಜ್ಯದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ಬೂತ್‌ ವಿಜಯ ಅಭಿಯಾನದ ಸಂಚಾಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಮನೆಯಲ್ಲಿ ಬಿಜೆಪಿ ಧ್ವಜ ಹಾರಿಸಲಾಗಿದೆ. ಪೇಜ್‌ ಪ್ರಮುಖರನ್ನು ನಿಯುಕ್ತಿ ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಾಜಿನಗರದಲ್ಲಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಂಗಳೂರಿನಲ್ಲಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಬೂತ್‌ ವಿಜಯ ಅಭಿಯಾನ ಪ್ರಾರಂಭಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಗದಗದಲ್ಲಿ ಜರಗಿದ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಚಿವರು, ಸಂಸದರು, ಶಾಸಕರು ಸಹಿತ ಅಭಿಯಾನ ನಡೆಸಿದ್ದು, ಕಟ್ಟಕಡೆಯ ಕಾರ್ಯಕರ್ತರಲ್ಲಿ ಇದು ಸಂಚಲನ ಮೂಡಿಸಿದೆ. ಬೂತ್‌ ಗೆಲುವಿನ ಮೂಲಕ ರಾಜ್ಯದಲ್ಲಿ ಬಿಜೆಪಿ ಗೆಲುವು ಖಂಡಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

51,872 ಬೂತ್‌ ಸಮಿತಿ ರಚನೆ ಮಾಡಿ ದ್ದೇವೆ. 13,21,792 ಪೇಜ್‌ ಪ್ರಮುಖರ ನೇಮಕ ಮಾಡಲಾಗಿದೆ. ಪ್ರತಿ ಪುಟವೂ 30 ಮತದಾರರನ್ನು ಒಳಗೊಂಡಿರುತ್ತದೆ. ಕಾರ್ಯಕರ್ತರಿಗಾಗಿ 50,260 ವಾಟ್ಸಾéಪ್‌ ಗ್ರೂಪ್‌ ರಚಿಸಲಾಗಿದೆ. 32 ಲಕ್ಷದ 883 ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿದ್ದೇವೆ. ಗಲ್ಲಿಗಲ್ಲಿ, ಮನೆಮನೆಗಳ ಮೇಲೆ ಬಿಜೆಪಿ ಬಾವುಟ ಹಾರುತ್ತಿದೆ. 15,93,848 ಕಾರ್ಯಕರ್ತರ ಶ್ರಮ ಇದರಲ್ಲಿತ್ತು ಎಂದರು.

ಗುರಿ ನೀಡಿರುವ ಅಮಿತ್‌ ಶಾ
ಸಹ ಸಂಚಾಲಕ ಮಹೇಶ್‌ ಟೆಂಗಿನಕಾಯಿ ಮಾತನಾಡಿ, ಕೇಂದ್ರ ಸಚಿವ ಅಮಿತ್‌ ಶಾ ಅವರು ಬೂತ್‌ ಗೆಲುವಿನ ಮೂಲಕ ರಾಜ್ಯದಲ್ಲಿ ಗೆಲುವಿನ ಗುರಿ ನೀಡಿ¨ªಾರೆ. ಪಕ್ಷದ ಎಲ್ಲ ನಾಯಕರು ಒಂದು ಬೂತ್‌ ಗೆ ಹೋಗಿ ಅಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರೂ ಇದರಲ್ಲಿ ಭಾಗವಹಿಸಿದ್ದು ವಿಶೇಷ. ಬೂತ್‌ ಅಭಿಯಾನ ಯಶಸ್ಸಿಗಾಗಿ 65,320 ಸಭೆಗಳನ್ನು ಮಾಡಿದ್ದೇವೆ. 615 ವೆಬೆಕ್ಸ್‌ ಸಭೆಗಳನ್ನೂ ನಡೆಸಲಾಗಿತ್ತು. ಈ ಮೂಲಕ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಳ್ಳುವಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next