Advertisement

ನಾಳೆಯಿಂದ ಬೂಸ್ಟರ್‌ ಡೋಸ್‌; 4.91ಲಕ್ಷ ಮಂದಿಗೆ ಹೆಚ್ಚುವರಿ ಚುಚ್ಚುಮದ್ದು ವಿತರಣೆಗೆ ಸಿದ್ಧತೆ

11:26 PM Jan 08, 2022 | Team Udayavani |

ಬೆಂಗಳೂರು: ಆರೋಗ್ಯ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆಯುಳ್ಳ 4.91 ಲಕ್ಷ ಮಂದಿಗೆ ಜ. 10ರಿಂದ ಬೂಸ್ಟರ್‌ ಡೋಸ್‌ ಅಥವಾ ಮುನ್ನೆಚ್ಚರಿಕೆ ಡೋಸ್‌ ನೀಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುನ್ನೆಚ್ಚರಿಕೆ ಡೋಸ್‌ ಪಡೆದವರಿಗೆ ಮತ್ತೊಂದು ಡೋಸ್‌ ನೀಡುವ ಚಿಂತನೆಯೂ ಇದೆ.

Advertisement

60 ವರ್ಷ ಮೇಲ್ಪಟ್ಟ 75.65 ಲಕ್ಷ ಫ‌ಲಾನುಭವಿ ಗಳಿದ್ದು ಆರೋಗ್ಯ ಸಮಸ್ಯೆಯುಳ್ಳ 10,962 ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್‌ ಪಡೆಯುವ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿದಂತೆ 7,20,033 ಆರೋಗ್ಯ
ಕಾರ್ಯಕರ್ತರು ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ.

ಇದರಲ್ಲಿ 9 ತಿಂಗಳು ಪೂರ್ಣಗೊಳಿಸಿದ 3,76,243 ಮಂದಿ ಮುನ್ನೆಚ್ಚರಿಕೆಯ ಮೂರನೇ ಡೋಸ್‌ ಪಡೆ ಯುವ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿದಂತೆ 8,91,831 ಮುಂಚೂಣಿ ಕಾರ್ಯಕರ್ತರು ಎರಡೂ ಡೋಸ್‌ ಪಡೆದಿದ್ದು, ಅವರಲ್ಲಿ 1,03,796 ಮಂದಿ ಮಾತ್ರ 3ನೇ ಡೋಸ್‌ ಪಡೆಯುವ ಅರ್ಹತೆ ಹೊಂದಿದ್ದಾರೆ.

ಈ ಮೊದಲು ಯಾವ ಲಸಿಕೆ ಪಡೆದಿರುತ್ತಾರೋ ಅದೇ ಲಸಿಕೆಯನ್ನು ಬೂಸ್ಟರ್‌ ಅಥವಾ ಮುನ್ನೆಚ್ಚರಿಕೆ ಡೋಸ್‌ ಆಗಿ ನೀಡಲಾಗುತ್ತದೆ.

ಇದನ್ನೂ ಓದಿ:ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕರೇ ಬದಲು; 100 ದಿನಗಳಲ್ಲಿ 3ನೇ ಡಿಜಿಪಿ

Advertisement

ಮತ್ತೊಂದು ಡೋಸ್‌ ಲಸಿಕೆ?
ಮುನ್ನಚ್ಚರಿಕೆ ಡೋಸ್‌ ಪಡೆದವರಿಗೆ ಇನ್ನೊಂದು ಡೋಸ್‌ ಪಡೆಯುವ ಅವಕಾಶವೂ ಇದೆ. ಆದರೆ ಒಮ್ಮೆ ಬೂಸ್ಟರ್‌ ಡೋಸ್‌ ಪಡೆದರೆ ಮತ್ತೆ ಇತರ ಲಸಿಕೆ ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪಾಸಿಟಿವಿಟಿ ದರ ಶೇ. 5.43ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಶನಿವಾರ 8,906 ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಪಾಸಿಟಿವಿಟಿ ದರ ಶೇ. 5.42ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣ ಸಂಖ್ಯೆ 38,366ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 7,113 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ಪಾಸಿಟಿವಿಟಿ ದರ ಶೇ. 10ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ 295, ಮೈಸೂರು 203, ಉಡುಪಿ 186, ಮಂಡ್ಯ 183,ಹಾಸನ 139, ಬೆಂಗಳೂರು ಗ್ರಾಮಾಂತರ 111 ಮಂದಿಗೆ ಸೋಂದಿಗೆ ಸೋಂಕು ತಗಲಿದೆ. ಉಳಿದಂತೆ ಬೆಂಗಳೂರಿನಲ್ಲಿ ಮೂರು, ಕಲಬುರಗಿಯಲ್ಲಿ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದೇಶದಲ್ಲಿ 1.41 ಲಕ್ಷ ಪ್ರಕರಣ
ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನ ವರೆಗೆ ದೇಶದಲ್ಲಿ ಕೊರೊನಾ ಸಂಖ್ಯೆ 1.41 ಲಕ್ಷಕ್ಕೆ ಏರಿಕೆಯಾಗಿದೆ.

ಶುಕ್ರವಾರಕ್ಕೆ ಹೋಲಿಸಿದರೆ ಶೇ. 21ರಷ್ಟು ಹೆಚ್ಚಳವಾಗಿದೆ. ಪಾಸಿಟಿವಿಟಿ ದರ ಶೇ. 9ಕ್ಕೆ ತಲುಪಿದೆ. ಕಳೆದ ವಾರವಷ್ಟೇ 10 ಸಾವಿರ ಸುಮಾರಿಗೆ ಬರುತ್ತಿದ್ದ ಪ್ರಕರಣಗಳ ಸಂಖ್ಯೆ ಈಗ 1.41 ಲಕ್ಷಕ್ಕೆ ಏರಿಕೆಯಾಗಿದೆ.

ವಾರಾಂತ್ಯ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
ಬೆಂಗಳೂರು/ಮಂಗಳೂರು/ಉಡುಪಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂಗೆ ಬೆಂಗಳೂರು, ಕರಾವಳಿ ಜಿಲ್ಲೆಗಳ ಸಹಿತ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಜನಜೀವನ ಬಹುತೇಕ ಸ್ತಬ್ಧಗೊಂಡಿತ್ತು.

ವಿವಾಹ ಸಹಿತ ಪೂರ್ವನಿಗದಿತ ಕಾರ್ಯಕ್ರಮ ಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದ.ಕ. ದಲ್ಲಿ ನಿಯಮ ಉಲ್ಲಂ ಸಿದ 120ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next