ನವದೆಹಲಿ: ಬೂಮ್ ಮೋಟಾರ್ ಸಂಸ್ಥೆಯು ಹೊಸ ಕಾರ್ಬೆಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.
ಇದರಲ್ಲಿ 2.3ಕಿಲೋ ವ್ಯಾಟ್ ಮತ್ತು 4.6 ಕಿಲೋ ವ್ಯಾಟ್ ಬ್ಯಾಟರಿ ಎಂಬ ಎರಡು ಆಯ್ಕೆಗಳಿವೆ.
2.3 ಕಿಲೋ ವ್ಯಾಟ್ ಬ್ಯಾಟರಿ ಹೊಂದಿರುವ ಸ್ಕೂಟರ್ ಒಮ್ಮೆ ಪೂರ್ತಿ ಚಾರ್ಜ್ ಆದರೆ 200 ಕಿ.ಮೀವರೆಗೆ ಚಲಿಸುವುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಸ್ಕೂಟರ್ ಬೆಲೆ 89,999 ರೂ. ಈ ಸ್ಕೂಟರ್ ಅನ್ನು ಮನೆಯ ಯಾವುದೇ ಚಾರ್ಜಿಂಗ್ ಸ್ಲಾಟ್ ಮೂಲಕ ಚಾರ್ಜ್ ಮಾಡಬಹುದು ಎಂದೂ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಪದ್ಮಶ್ರೀ ಹಿಂಪಡೆಯಿರಿ : ಕಂಗನಾ ಸ್ವಾತಂತ್ರ್ಯದ ಹೇಳಿಕೆ ‘ದೇಶದ್ರೋಹ’ ಎಂದ ಕಾಂಗ್ರೆಸ್
ಈ ಸ್ಕೂಟರ್‌ಗೆ ವಿಶೇಷವಾಗಿ ಐದು ವರ್ಷಗಳ ಇಎಂಐ ಸೌಲಭ್ಯವನ್ನೂ ನೀಡಲಾಗುತ್ತಿದೆ. ಶುಕ್ರವಾರದಿಂದ ಸ್ಕೂಟರ್‌ನ ಬುಕ್ಕಿಂಗ್ ಆರಂಭವಾಗಲಿದೆ.