Advertisement

ಪುಸ್ತಕಗಳು ಸುಲಭವಾಗಿ ದೊರೆಯಲಿ

12:33 PM Dec 12, 2018 | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಪ್ರಕಟಿಸುವ ಪುಸ್ತಕಗಳು ಓದುಗರಿಗೆ ಸುಲಭವಾಗಿ ದೊರೆಯುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದು ಇತಿಹಾಸ ಸಂಶೋಧಕರಾದ ಪ್ರೊ.ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ನಡೆದ ಕಾರ್ಯಕ್ರಮದಲ್ಲಿ “ಅಭಿನವ’ ಪುಸ್ತಕ ಪ್ರಕಾಶನಕ್ಕೆ “ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿದ ಅವರು, ಸಾಹಿತ್ಯಸಕ್ತರ ಕೈಗೆ ಪುಸ್ತಕಗಳು ಸುಲಭವಾಗಿ ದೊರೆಯಲು ಮಾರಾಟಕ್ಕೆ “ಫ್ರಾಂಚೈಸಿ’ ವ್ಯವಸ್ಥೆಯನ್ನು ತರಬೇಕು ಎಂದು ಸಲಹೆ ನೀಡಿದರು.

ಹಂಪಿ ವಿವಿ, ಕರ್ನಾಟಕದ ಧಾರವಾಡ ವಿವಿ ಮತ್ತಿತರ ಹಲವು ವಿವಿಗಳು ಅತ್ಯುತ್ತಮ ಪುಸ್ತಕಗಳನ್ನು ಪ್ರಕಟಿಸುತ್ತವೆ. ಆದರೆ ಅವು ವಿಮರ್ಶೆಗೆ ಬಾರದ ಕಾರಣ 5-6 ವರ್ಷಗಳ ನಂತರ ಆ ಪುಸ್ತಕಗಳು ಓದುಗರ ಕಣ್ಣಿಗೆ ಬೀಳುತ್ತವೆ. ಹಾಗೆ ಗೊತ್ತಾದ ಪುಸ್ತಕಗಳನ್ನು ಖರೀದಿಸಲು ಸಾಕಷ್ಟು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.

ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಮಾತನಾಡಿ, ರಾಜ್ಯದ 18 ಕಡೆಗಳಲ್ಲಿ ಕಸಾಪ ವತಿಯಿಂದ ಪುಸ್ತಕಗಳ ಮಾರಾಟ, ಲೈಬ್ರರಿ ಸೇರಿದಂತೆ ಕನ್ನಡ ಭವನಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಡಿ.ಎಸ್‌.ಕರ್ಕಿ, ಚಂದ್ರಶೇಖರ ಪಾಟೀಲ್‌, ಶಂಭಾ ಜೋಶಿಯವರ ಹೆಸರಿನಲ್ಲಿ ಭವನಗಳನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿಯೂ ಆರಂಭವಾಗಿದೆ ಎಂದರು. 

ಅಭಿನವ ಪ್ರಕಾಶನದ ನ.ರವಿಕುಮಾರ್‌ ಪ್ರಶಸ್ತಿ ಸ್ವೀಕರಿಸಿದರು. ಅಂಕಿತ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾ ಧಿಕಾರಿಗಳಾದ ಪಿ. ಮಲ್ಲಿಕಾರ್ಜುನಪ್ಪ, ವ.ಚ. ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next