ಮುಂಬಯಿ : ತನ್ನ ತಂದೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರಿಗೆ ಡಿಸೈನರ್ ಎಂದು ಪೋಸ್ ನೀಡಿ ಒಂದು ಕೋಟಿ ರೂ. ಲಂಚವನ್ನು ನೀಡುವುದಾಗಿ ಹೇಳಿದ್ದ ವಾಂಟೆಡ್ ಬುಕ್ಕಿಯ ಮಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿತಳಾಗಿರುವ ಅನಿಕ್ಷಾ ಜೈಸಿಂಘಾನಿ ವಾಂಟೆಡ್ ಬುಕ್ಕಿ ಅನಿಲ್ ಜೈಸಿಂಘಾನಿ ಪುತ್ರಿಯಾಗಿದ್ದಾಳೆ.
ಅಮೃತಾ ಫಡ್ನವಿಸ್ ಅವರು ಸ್ವಯಂಘೋಷಿತ ಡಿಸೈನರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು, ಅವರು ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ತನಗೆ 1 ಕೋಟಿ ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಅನಿಕ್ಷಾ ಕಾನೂನು ಪದವೀಧರರಾಗಿದ್ದು, ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ನಿವಾಸಿಯಾಗಿದ್ದಾರೆ. ಆಕೆಯ ತಂದೆ ಅನಿಲ್ ಜೈನ್‌ಸಿಂಘಾನಿ ಅವರು ಮಹಾರಾಷ್ಟ್ರ, ಗೋವಾ ಮತ್ತು ಅಸ್ಸಾಂನಲ್ಲಿ ಬೆಟ್ಟಿಂಗ್, ಬೆದರಿಕೆ, ವಂಚನೆ ಮತ್ತು ಸರ್ಕಾರಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಅನೇಕ ಪ್ರಕರಣಗಳನ್ನು ಹೊಂದಿದ್ದು, ಪರಾರಿಯಾಗಿದ್ದಳು.