Advertisement
ಈ ಊರು ಇಷ್ಟವಾಗುವುದು ಅಲ್ಲಿರುವ ಶಬ್ದದೊಳಗಿನ ನಿಶ್ಯಬ್ದತೆಗೆ, ಜೀವನ ಪ್ರೀತಿಗೆ. ಮೈಸೂರಿನ ಅರಮನೆ, ಕೆ. ಆರ್.ಎಸ್ ಕಾರಂಜಿ, ಅಲ್ಲಿನ ಹಬ್ಬ, ಅದರ ಸಂಭ್ರಮ, ತಿಂಡಿಗಳು ಇವೆಲ್ಲವೂ ನನಗೆ ಪ್ರತಿಬಾರಿಯೂ ಹೊಸತಾಗೇ ಕಾಣಿಸುತ್ತದೆ.
Related Articles
Advertisement
ಮೈಸೂರಿನ ಗುರುತಾದ ಮೈಸೂರು ಪಾಕ್ ನ ಹುಟ್ಟು, ಜೋರು ಮಳೆಯ ಚಳಿ ಹುಟ್ಟಿಸುವ ಸಮಯದಲ್ಲಿ ನಾಲಿಗೆ ಬಯಸುವ ಹುರುಳಿ ಕಟ್ಟಿನ ಸಾರು ಮಹರಾಜರಿಗೆ ರುಚಿ ಹಿಡಿಸಿದ್ದು, ಮಹಾರಾಜರ ವಂಶಕ್ಕೆ ಶಾಪ ನೀಡಿ ಕಾವೇರಿಯಲ್ಲಿ ವಿಲೀನಳಾದ ಅಲಮೇಲಮ್ಮನ ಕಥೆ, ನಾಲ್ವಡಿ ಕೃಷ್ಣರಾಜರ ಸಂಗೀತ ವಿದ್ವತ್ತ್, ಶಿವಮೊಗ್ಗದ ಮೆಗಾನ್ ಆಸ್ಪತ್ರೆ, ಬೆಂಗಳೂರಿನ ಲಾಲ್ ಬಾಗ್, ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಹೆಸರುಗಳ ನಾಂದಿಯ ಹಿಂದಿನ ಕಾರಣವನ್ನು ಈ ಕೃತಿ ಎಳೆಎಳೆಯಾಗಿ ತಿಳಿಸುತ್ತದೆ.
ಇವೆಲ್ಲದರ ಜೊತೆಗೆ ವೀಣೆಯ ಬೆಡಗಾದ ಮೈಸೂರಿನ ಸಯ್ಯಾಜಿ ರಾವ್ ರಸ್ತೆ, ಅಲ್ಲಿನ ಅರಮನೆ ಬ್ಯಾಂಡ್ ನ ನಾದ ದಿಲ್ಲಿಯವರೆಗೂ ಕೇಳಿಸಿದ್ದು, ಝಾನ್ಸೀ ರಾಣಿಗೆ ಸಹಾಯ ಹಸ್ತ ಚಾಚಿದ್ದು, ಮೈಸೂರಿನಲ್ಲಿ ಎದ್ದು ನಿಂದಿರುವ ಅಂಚೆ ಬಸಪ್ಪ, ಜೇಮ್ಸ್ ಗೋರ್ಡಾನ್ ಹಾಗೂ ದೊಡ್ಡ – ಚಿಕ್ಕ ಗಡಿಯಾರದ ನಡುವೆ ಇರುವ ಅಪ್ಪ – ಮಗನ ನಂಟು, ಮಹಾರಾಣಿ ಕಾಲೇಜಿನ ಸ್ಥಾಪನೆಗೆ ಕಾರಣರಾದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ತಮ್ಮ ತೊಂಭತ್ತರ ಇಳಿ ವಯಸ್ಸಿನಲ್ಲೂ ಸರಳತೆಯನ್ನು ತೋರಿದ ಸರ್.ಎಮ್. ವಿಶ್ವೇಶ್ವರಯ್ಯನವರು ಮತ್ತು ಕೊನೆಯುಸಿರವರೆಗೂ ರಾಜನಿಷ್ಠೆ ಪಾಲಿಸಿದ ನರ್ತಕಿ.
ಇಂತಹದ್ದೇ ಸೋಜಿಗದಿಂದ ಕೂಡಿದ ಮೈಸೂರಿನ ಪುಟಗಳನ್ನು ಈ ಪುಸ್ತಕದಲ್ಲಿ ತೆರೆದಷ್ಟು ಖುಷಿ ಕೊಡುತ್ತದೆ. ಮೈಸೂರೇ ಸುಂದರ ಅದರ ಇತಿಹಾಸವೂ ಅಷ್ಟೇ ವೈಭವಯುತವಾಗಿದೆ.