Advertisement
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ “ಸಾಮಾನ್ಯರಲ್ಲಿ ಅಸಾ ಮಾನ್ಯರು’ ಎಂಬ ವಿಶಿಷ್ಟ ಹೆಸರಿನ ಕೃತಿ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡಿನೊಂದಿಗೆ ನಮ್ಮ ಮನಸ್ಸನ್ನು ಸೆಳೆಯುತ್ತದೆ. ಇದೊಂದು ಲೇಖನಗಳ ಸಂಕಲನವಾಗಿದ್ದು, ಹಲವು ಕಾರಣಗಳಿಂದ ಮನಸ್ಪರ್ಶಿಯಾಗುತ್ತದೆ. ಇದರಲ್ಲಿ ಉತ್ತರ ಕರ್ನಾಟಕದ ಜನರ ಪ್ರೇಮ, ಪರೋಪಕಾರ, ಅಂತಃಕರಣ ಮತ್ತು ವಾತ್ಸಲ್ಯವನ್ನು ಮನಸ್ಸಿಗೆ ತಟ್ಟುವಂತೆ, ಕಣ್ಣೆ ದುರು ನಿಲ್ಲುವಂತೆ ಓದು ಗರಿಗೆ ನೀಡುವಲ್ಲಿ ಲೇಖಕಿ ಸಫಲರಾಗಿದ್ದಾರೆ.
Related Articles
Advertisement
ಲೇಖಕಿ ಬಿಂದಪ್ಪನ ಬಗ್ಗೆ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಬಿಂದಪ್ಪ ಯಾವಾಗಲೂ ಸುಳ್ಳುಗಾರನಾಗಿದ್ದರಿಂದಲೇ ಆತನ ಹೆಸರಿನ ಜತೆಗೆ ಬಂಡಲ್ ಸೇರಿದೆ. ಆದರೆ ಅವನ ಬಾಯಿಯಿಂದ ಯಾವ ತ್ತಿಗೂ ನಕಾರಾತ್ಮಕ ಉತ್ತರ ಬಂದೇ ಇಲ್ಲ. ಅವನ ಮಾತುಗಳನ್ನು ನಂಬುವಂತಿ ರಲಿಲ್ಲ. ಆದರೂ ಸುಂದರ ವಾಗಿ ಇತಿಹಾಸ ಜೋಡಿಸಿ ಹೇಳುವ ಮಾತು ಮತ್ತೆ ಮತ್ತೆ ಕೇಳಬೇಕು ಎಂದನ್ನಿಸು ವುದು ಲೇಖನದಲ್ಲಿ ಪ್ರತಿ ಬಿಂಬಿತವಾಗಿದೆ.
“ಎಳೆಯರು ಎತ್ತಲ್ಲ ದಳವಾಯಿ ದೊರೆಯಲ್ಲ, ಮನೆಗೆ ಬಂದ ಅಳಿಯ ಮಗನಲ್ಲ, ಅಳಿಯ ಎಂದೂ ಮಗನಾಗು ವುದಿಲ್ಲ’ ಮುಂತಾದ ಆತನ ಮಾತುಗಳಿಂದ ಲೇಖಕಿ ಬಹಳ ಪ್ರಭಾವಿತರಾಗಿದ್ದನ್ನು ಲೇಖನದಲ್ಲಿ ಬಣ್ಣಿಸಿದ್ದಾರೆ. ಬಂಡಲ್ ಬಿಂದಪ್ಪನ ಕನ್ನಡಪ್ರೇಮದ ಬಗ್ಗೆಯೂ ಲೇಖಕಿ ಹಾಡಿ ಹೊಗಳಿದ್ದಾರೆ. ಬಿಂದಪ್ಪ ಮನೆ ಕಟ್ಟಲಿಲ್ಲ, ಆಸ್ತಿ ಮಾಡಿಲ್ಲ, ಯಾವುದೇ ಸಮ್ಮಾನ – ಪ್ರಶಸ್ತಿ ಸ್ವೀಕರಿಸಿಲ್ಲ. ಕೇವಲ ಕನ್ನಡಕ್ಕಾಗಿಯೇ ದುಡಿದು ಕಾನನದಲ್ಲಿ ಅರಳಿದ ಹೂವಿನಂತಿದ್ದ.
ಲೇಖಕಿ ಎಲ್ಲಿಯೇ ಇದ್ದರೂ “ಹಚ್ಚೇವು ಕನ್ನಡದ ದೀಪ’ ಹಾಡು ಕೇಳಿದಾಗ ಬಿಂದಪ್ಪನನ್ನು ಸ್ಮರಿಸುತ್ತಾರೆ. ಇದರ ಜತೆಗೆ ಕಂಡಕ್ಟರ್ ಭೀಮಣ್ಣ, ಅಂಗಡಿ ಜಯಣ್ಣ, ಸಿರಿವಂತ ಸೀತಾಬಾಯಿ ಮುಂತಾದ ಹಲವಾರು ಪಾತ್ರಗಳು ಈ ಸಂಕಲನದಲ್ಲಿವೆ. ಇವೆಲ್ಲವೂ ಬೇರೆ ಬೇರೆ ಕಾರಣಗಳಿಂದ ನೆನಪಿನ ಪಟಲದಲ್ಲುಳಿಯುತ್ತವೆ.
ಮಲಿಕ್ ಎಲ್. ಜಮಾದಾರ್, ವಿಜಯಪುರ