ತೀರ್ಥಹಳ್ಳಿ: ದೇವಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳಗಟ್ಟೆ ಗ್ರೀನ್ ಹೌಸ್ ನಲ್ಲಿ ಎಂ ಎಂ ನಟರಾಜ್, ಸಹಾಯಕ ಪೋಲಿಸ್ ಆಯುಕ್ತರು, ಮಂಗಳೂರು ಇವರ ಸಹೋದರ, ಎಂ ಎ ಪ್ರಭಾಕರ್ ಅವರು ತಾಯಿಯ ಕುರಿತು ಬರೆದ ಭಾವನೆಗಳ ನೆನಪಿನ ಗುಚ್ಚ ” ಅಮ್ಮನ ನೆನಪು” ಕಮಲಮ್ಮ” ಪುಸ್ತಕ ವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಬಿಡುಗಡೆ ಮಾಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ತಾಯಿ ನಮ್ಮ ನಿಜವಾದ ದೇವರು, ಅವರ ಸೇವೆ ಮಾಡುವುದು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿ ಮಕ್ಕಳ ಕರ್ತವ್ಯ, ಪ್ರಸ್ತುತ ಸಮಯದಲ್ಲಿ, ವೃದ್ದಾಶ್ರಮಗಳು ಆರಂಭಗೊಳ್ಳುತ್ತಿರುವುದು ಅತ್ಯಂತ ಆಂತಕಕಾರಿ ವಿಚಾರ ಎಂದು ಅಭಿಪ್ರಾಯ ಪಟ್ಟರು ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ IAS ಮಾತಾನಾಡಿ, ನಟರಾಜ್ ಅವರ ಈ ಆಲೋಚನೆಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾತಾಡಿದ ಗೌರಿ ಗದ್ದೆ ಅವಧೂತ ವಿನಯ್ ಗುರೂಜೀ.. ಅಮ್ಮನ ನೆನಪು_ಕಮಲಮ್ಮ ಪುಸ್ತಕ ಬಿಡುಗಡೆ ಸಮಾರಂಭದ ಕ್ಷಣಗಳು ನನ್ನ ಜೀವನದಲ್ಲಿ ಅತ್ಯಂತ ಅವಿಸ್ಮರಣೀಯ ಜೊತೆಗೆ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಮಾರಂಭದಲ್ಲಿ, ಮಲೆನಾಡು ಪ್ರಾಧಿಕಾರದ ಕಾರ್ಯದರ್ಶಿ, ಕೆ ಎಸ್ ಮಣಿ, ದೇವಂಗಿ ಕುಟುಂಬದ ಅಮರೇಂದ್ರ ಕಿರೀಟಿ, ಮನುದೇವ್, ಕಬ್ಬನ್ ಪಾರ್ಕ್ ಎ ಸಿ ಪಿ ರಾಜೇಂದ್ರ, ನ್ಯಾಷನಲ್ ಷರೀಪ್, ಶ್ರೀಧರ, ಸುಧಾಕರ, ಮೋಹನ, ಶ್ರೀಕಂಠ ಹಾಗೂ ಮಂಗಳ ಕುಟುಂಬಸ್ಥರು, ಸ್ನೇಹಿತರು ಇದ್ದರು.
ಈ ಕಾರ್ಯಕ್ರಮದ ರೂವಾರಿಗಳಾದ ಎಂ ಎ ನಟರಾಜ್ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ನೇರವೇರಿಸಿದರು.