Advertisement

ನಾಯಕ ಸಮಾಜಕ್ಕೆ ತಿಪ್ಪೇಸ್ವಾಮಿ ಕೊಡುಗೆ ಅಪಾರ

03:39 PM Oct 18, 2021 | Team Udayavani |

ಚಳ್ಳಕೆರೆ: ಜಿಲ್ಲೆಯೂ ಸೇರಿದಂತೆ ರಾಜ್ಯದ ನಾಯಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಮಾಜಿ ಸಚಿವ ದಿ| ತಿಪ್ಪೇಸ್ವಾಮಿಯವರ ಕೊಡುಗೆಯನ್ನುಸಮಾಜ ಸದಾ ಸ್ಮರಿಸುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ಭಾನುವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಚಿನ್ನಹಗರಿ ಪ್ರಕಾಶನ ಮತ್ತು ಗ್ರಾಮೀಣ ಸಾಹಿತ್ಯ ಪರಿಷತ್‌ ಮತ್ತು ಜಗಲೂರು ಪಾಪನಾಯಕ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ| ವಿರೂಪಾಕ್ಷಿ ಪೂಜಾರಹಳ್ಳಿಯವರ”ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾಧಕರು’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಹಳೆಯ ಬುಡಕಟ್ಟುಸಮುದಾಯಗಳಲ್ಲಿ ಒಂದಾದ ನಾಯಕ ಸಮಾಜ ಬುಡಕಟ್ಟು ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿಕೊಂಡು ಬಂದಿದೆ. ಜೊತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಕಳೆದ ಹಲವಾರು ವರ್ಷಗಳಿಂದ ತಮ್ಮದೇಯಾದ ಸಂಪ್ರದಾಯಗಳನ್ನು ಆಚರಣೆ ಮಾಡಿಕೊಂಡು ಬಂದಿವೆ. ಎರಡೂ ಸಮಾಜಗಳು ಒಂದಕ್ಕೊಂದುಪೂರಕವಾಗಿ ಸಮಾಜದ ಹಿತಕ್ಕಾಗಿಕಾರ್ಯ ನಿರ್ವಹಿಸುತ್ತಿವೆ. ಡಾ| ವಿರೂಪಾಕ್ಷಿ ಪೂಜಾರಿಹಳ್ಳಿಯವರು ಎರಡೂ ಸಮುದಾಯದ ಸಾಧಕರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪುಸ್ತಕ ರೂಪದಲ್ಲಿ ನೀಡುವ ಮೂಲಕ ಮುಂಬರುವ ಯುವ ಪೀಳಿಗೆ ಇವುಗಳನ್ನು ನಿರಂತರ ಅಭ್ಯಾಸಮಾಡಿ ಸಮುದಾಯದ ಕೊಡುಗೆಗಳನ್ನುನೆನಪಿಸಿಕೊಳ್ಳುವ ಕಾರ್ಯ ಮಾಡಿದ್ದು ಸಂತಸ ತಂದಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಡಾ.ವಿರೂಪಾಕ್ಷಿ ಪೂಜಾರಿಹಳ್ಳಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎರಡೂ ಸಮುದಾಯಗಳುಅನೇಕ ರೀತಿಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಪ್ರಗತಿಯತ್ತ ಹೆಜ್ಜೆ ಇಡಲು ಇನ್ನೂ ಸಾಧ್ಯವಾಗಿಲ್ಲ.ಎರಡೂ ಸಮುದಾಯಗಳು ಸಮಾಜಕ್ಕೆಅಪಾರವಾದ ಕೊಡುಗೆ ನೀಡಿದ್ದರೂ ಯಾರೂ ಸಹ ಪರಿಗಣಿಸಿಲ್ಲ. ಕಡೇ ಪಕ್ಷ ಎರಡೂ ಸಮುದಾಯದಹಿರಿಯರು ನೀಡಿದ ಕೊಡುಗೆಯನ್ನು ಇಂದಿನಪೀಳಿಗೆ ನೆನಪಿಸಿಕೊಳ್ಳಲಿ ಎಂಬ ಉದ್ದೇಶದಿಂದಪುಸ್ತಕ ರೂಪದಲ್ಲಿ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಸಹಪ್ರಾಧ್ಯಾಪಕ ಡಾ| ಎಂ. ಮಂಜಣ್ಣ ಮಾತನಾಡಿ, ಎರಡೂ ಸಮುದಾಯಗಳಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲ ಆಧಾರ. ಅಂದಿನ ದಿನಗಳಲ್ಲಿ ಯಾವುದೇ ರೀತಿಯಸೌಲಭ್ಯವಿಲ್ಲದೇ ಇದ್ದರೂ ಎರಡೂ ಸಮುದಾಯದ ನೇತಾರರು ಹಲವಾರು ನೆನಪಿಸಿಕೊಳ್ಳುವ ಕೊಡುಗೆಯನ್ನು ಈ ಸಮಾಜಕ್ಕೆನೀಡಿದ್ದಾರೆ. ಸಮಾಜದಲ್ಲಿ ಹಲವಾರು ಬಲಿಷ್ಠ ಪಂಗಡಗಳಿದ್ದು, ಅವುಗಳ ಜೊತೆಯಲ್ಲಿನಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಿದೆ ಎಂದರು.

Advertisement

ಬಿ. ತಿಪ್ಪಣ್ಣ ಮರಿಕುಂಟೆ, ಪ್ರೊ| ಅನ್ನಪೂರ್ಣಮ್ಮ,ಪಶುವೈದ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ| ಗೌಡಗೆರೆ ತಿಪ್ಪೇಸ್ವಾಮಿ ಮಾತನಾಡಿದರು.

ಸಂಗೀತ ನಿರ್ದೇಶಕ ಪಿ. ತಿಪ್ಪೇಸ್ವಾಮಿ, ಜಿ.ಟಿ. ವೀರಭದ್ರಸ್ವಾಮಿ, ಸಿ.ಟಿ. ವೀರೇಶ್‌,ಸೂರನಾಯಕ, ಡಾ| ಕಾಟಮಲಿಂಗಯ್ಯ, ಓಬಣ್ಣ,ಅಜ್ಜಪ್ಪ, ಟಿ.ಜೆ. ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಸ್ತುತ ನಾಯಕ ಸಮುದಾಯಕ್ಕೆ ಶೇ. 7.5 ಮೀಸಲಾತಿ ನೀಡಬೇಕೆಂದು ಶ್ರೀ ವಾಲ್ಮೀಕಿಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿತ್ತು.ಆದರೆ ಸರ್ಕಾರ ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಾಗಾಗಿಮೀಸಲಾತಿ ಪಡೆಯಲು ಇನ್ನೂ ಹೆಚ್ಚು ಸಂಘಟನಾತ್ಮಕವಾಗಿ ಹೋರಾಟ ನಡೆಸಬೇಕಿದೆ. ಟಿ. ರಘುಮೂರ್ತಿ, ಶಾಸಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next