ನವ ದೆಹಲಿ : ಹೌದು, ಮತ್ತೆ ಬಂದಿದೆ ವಿಶ್ವ ಪುಸ್ತಕ ದಿನಾಚರಣೆ. ನೀವು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತೀರಾ? ನಿಮಗಾಗಿ ಒಳ್ಳೆಯ ಸುದ್ದಿಯೊಂದು ಅಮೇಜಾನಗ ನೀಡುತ್ತಿದೆ. ಏಪ್ರಿಲ್ 23 ರಂದು ನಡೆಯುವ ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಅಮೆಜಾನ್ 10 ಪ್ರಮುಖ ಪುಸ್ತಕಗಳನ್ನು ಕಿಂಡಲ್ ಬಳಕೆದಾರರಿಗೆ ಉಚಿತವಾಗಿ ನೀಡುತ್ತಿದೆ.
ಹೌದು, ಅಮೆಜಾನ್ ನೀಡುತ್ತಿರುವ ಈ ಕೊಡುಗೆ ಕೊಡುಗೆ ಏಪ್ರಿಲ್ 23 ರ ತನಕ ಮಾತ್ರ ನಿಮಗೆ ಲಭ್ಯವಿರಲಿದೆ. ಏಪ್ರಿಲ್ 24 ರಂದು ಇದು ಮುಕ್ತಾಯಗೊಳ್ಳುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಕಿಂಡಲ್, ಅಮೆಜಾನ್ ಫೈರ್ ಟ್ಯಾಬ್ಲರ್ ಅಥವಾ ಕಿಂಡಲ್ ಅಪ್ಲಿಕೇಶನ್ ಬಳಕೆದಾರರು ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಓದಿ : ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್
10 ಇ-ಪುಸ್ತಕಗಳನ್ನು ಉಚಿತವಾಗಿ ಪಡೆಯಲು ಬಳಕೆದಾರರು ತಮ್ಮ ಅಮೆಜಾನ್ ಖಾತೆಯಿಂದ ಸೈನ್ ಇನ್ ಮಾಡಬೇಕಾಗುತ್ತದೆ.
ಇನ್ನು, ಅಮೆಜಾನ್ ಇತ್ತೀಚೆಗೆ ‘ಡಿಸ್ಪ್ಲೇ ಕವರ್’ಹೊಸ ವೈಷಿಷ್ಟ್ಯವೊಂದನ್ನು ಬಿಡುಗಡೆ ಮಾಡಿದೆ, ಇದು ಬಳಕೆದಾರರು ತಾವು ಓದುತ್ತಿರುವ ಪುಸ್ತಕದ ಮುಖಪುಟವನ್ನು ತಮ್ಮ ಡಿವೈಸ್ ನ ಲಾಕ್ ಸ್ಕ್ರೀನ್ ವಾಲ್ ಪೇಪರ್ ಆಗಿ ಹೊಂದಿಸಲು ಅನುವು ಮಾಡಿಕೊಡುತ್ತದೆ. ಎಲ್ಲಾ ಕಿಂಡಲ್ ಬಳಕೆದಾರರಿಗಾಗಿ ಜಾಗತಿಕವಾಗಿ ಹೊರಹೊಮ್ಮುತ್ತಿರುವ ವೈಶಿಷ್ಟ್ಯವು ಹೆಚ್ಚಿನ ಪುಸ್ತಕಗಳು, ನಿಯತಕಾಲಿಕೆಗಳು, ಕಾಮಿಕ್ಸ್ ಮತ್ತು ಹೆಚ್ಚಿನವುಗಳ ಕವರ್‌ಗಳನ್ನು ನಿಮ್ಮ ಲಾಕ್ ಸ್ಕ್ರೀನ್ ವಾಲ್ ಪೇಪರ್ ನಂತೆ ಹೊಂದಿಸಲು ಅನುಮತಿಸುತ್ತದೆ.
ಓದಿ : ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ