ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಕಾರ್ಯಕ್ರಮದಡಿ ತಾಲೂಕು ಮಟ್ಟದ ಓದುವ ಬೆಳಕು, ಪುಸ್ತಕ ಜೋಳಿಗೆ, ಗ್ರಾಮ ಸಭೆ, ಸಾರ್ವಜನಿಕ ಇ-ಗ್ರಂಥಾಲಯ ಅಳವಡಿಸಿಕೊಳ್ಳುವಿಕೆ, ಪೌಷ್ಟಿಕ ಆಹಾರ ಪ್ರದರ್ಶನ, ಎಟಿಎಲ್ ಫೆಸ್ಟಿವಲ್, ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಹಿರಿಯ ಮುಖಂಡ ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಅವರು ಗ್ರಾಮದಲ್ಲಿ ನಡೆದಪುಸ್ತಕ ಜೋಳಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ,ಶಿಕ್ಷಣವೇ ಶಕ್ತಿಯಾಗಿದ್ದು, ಎಲ್ಲಕ್ಕಿಂತ ಮಿಗಿಲಾದ ಜ್ಞಾನಸಂಪತ್ತಿನ ಕಾರ್ಯಕ್ಕಾಗಿ ಮಕ್ಕಳೆಲ್ಲರೂ ಪುಸ್ತಕ ಸಂಗ್ರಹಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಶಿಕ್ಷಕರ ಕಾರ್ಯಕ್ಕೆಸಮುದಾಯದ ಸಹಭಾಗಿತ್ವ ಅವಶ್ಯವಾಗಿದೆ ಎಂದರು.
ಮಕ್ಕಳ ರಕ್ಷಣಾ ಘಟಕದ ಪಿ.ಎಂ. ವಾಲಿ, ಲಕ್ಷ್ಮೀ ಪಾಟೀಲ, ರಿಜ್ವಾನ್ ರಜಾಕ್ ಆನಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನೀಲವ್ವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಶೀಲವ್ವ ತಳವಾರ, ಸದಸ್ಯರಾದ ಮಹಾಂತಗೌಡ ಪಾಟೀಲ, ನೀಲಪ್ಪ ಗುಡ್ಡಣ್ಣವರ, ಮಂಜುನಾಥ ಚಲವಾದಿ, ಗಂಗಾಧರ ಕರಿನಿಂಗಣ್ಣವರ ಸೇರಿ ಗ್ರಾಪಂ ಸದಸ್ಯರು, ಕ್ಷೇತ್ರ ಸಮನ್ವಯ ಕಾರಿಗಳಾದ ವೈ.ಎಚ್. ನದಾಫ, ಗ್ರಾಪಂ ಪಿಡಿಒ ಶಿವಾನಂದ ಮಾಳವಾಡ, ಬಿಆರ್‌ಪಿ ಎಂ.ಎನ್.ಭರಮಗೌಡರ, ಸಿಆರ್‌ಪಿ ಜಿ.ಆರ್. ಪಾಟೀಲ, ಶಂಭಣ್ಣ ಸೊರಟೂರ ಇದ್ದರು.
ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ ಜಾನಪದ ಗೀತೆಗಳ ಸ್ಪರ್ಧೆಯಲ್ಲಿ ಅಡರಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭಾವನಾ ಮೆನಸಿನಕಾಯಿ ಪ್ರಥಮ, ಗೊಜನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಚೈತ್ರಾ ಮೂಲಿಮನಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಸೂರಣಗಿ ಕೆಬಿಎಸ್ ಶಾಲೆಯ ಮಹಮ್ಮದ್ ತೌಸೀಫ್ ಕರ್ನಾಚಿ ಪಡೆದರು.
ಪ್ರೌಢಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಬಟ್ಟೂರಿನ ಸರ್ಕಾರಿ ಪ್ರೌಢಶಾಲೆಯ ಭಾವನಾ ಪಾಟೀಲ ಪ್ರಥಮ, ಕುಂದ್ರಳ್ಳಿಯ ನಾಗರತ್ನ ಮೇಟಿ ದ್ವಿತೀಯ, ಗೊಜನೂರಿನ ಸರ್ಕಾರಿ ಪ್ರೌಢ ಶಾಲೆಯ ಕೀರ್ತನಾಪಾಟೀಲ ತೃತೀಯ ಸ್ಥಾನ ಪಡೆದರು. ಎಂ.ಡಿ. ತಳ್ಳಳ್ಳಿ, ಎಂ.ಕೆ. ಮೇಲಿನಮನಿ, ಸಿ.ಎಫ್. ಜೋಗಿನ ನಿರ್ವಹಿಸಿದರು.