Advertisement

ಟ್ರೇಲರ್ ನಲ್ಲಿ ಮಿಂಚಿದ ‘ಬಾಂಡ್ ರವಿ’: ಡಿ.9ಕ್ಕೆ ಪ್ರಮೋದ್ ಹೊಸಚಿತ್ರ ರಿಲೀಸ್

01:17 PM Dec 05, 2022 | Team Udayavani |

ಪ್ರಮೋದ್‌ ನಾಯಕ ನಟನಾಗಿ ನಟಿಸಿರುವ “ಬಾಂಡ್‌ ರವಿ’ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಂದಹಾಗೆ, “ಬಾಂಡ್‌ ರವಿ’ ಇದೇ ಡಿ. 9ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ “ಬಾಂಡ್‌ ರವಿ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬಿಡುಗಡೆಯಾಗಿರುವ ಚಿತ್ರತಂಡ, ಇತ್ತೀಚೆಗೆ “ಬಾಂಡ್‌ ರವಿ’ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ

Advertisement

ಇದೇ ವೇಳೆ ಮಾತನಾಡಿದ ನಟ ಪ್ರಮೋದ್‌, “ನಮ್ಮ “ಬಾಂಡ್‌ ರವಿ’ ದೊಡ್ಡ ಬ್ರಾಂಡ್‌ ಆಗಿ ಎಲ್ಲರ ಮನಸ್ಸಲ್ಲೂ ಹತ್ತಾರು ವರ್ಷ ಉಳಿದುಕೊಳ್ಳುತ್ತಾನೆ. ಸಿನಿಮಾದಲ್ಲೇನೋ ವಿಷಯ ಇದೆ. ಹಾಗಾಗಿ ಇಷ್ಟು ಕಾನ್ಫಿಡೆಂಟ್‌ ಆಗಿ ಈ ಮಾತು ಹೇಳ್ತಿದ್ದೀನಿ. “ರತ್ನನ್‌ ಪ್ರಪಂಚ’ ಸಿನಿಮಾದ ನಂತರ ಒಂದು ಒಳ್ಳೆ ಕಥೆ ಹುಡುಕುತ್ತಿದ್ದೆ. ಆ ವೇಳೆ ಸಿಕ್ಕ ಕಥೆ “ಬಾಂಡ್‌ ರವಿ’. ಈ ಕಥೆ ತುಂಬ ಇಷ್ಟವಾಯ್ತು. ಅದರಲ್ಲಿರುವ “ಬಾಂಡ್‌ ರವಿ’ ಪಾತ್ರ ಕೂಡ ನನ್ನನ್ನು ತುಂಬ ಕಾಡಿತ್ತು. ಈ ಸಿನಿಮಾ ನನ್ನ ಲೈಫ್ ಟೈಂ ಮೆಮೋರಿ ಆಗಿ ಉಳಿಯಲಿದೆ. ಒಳ್ಳೆಯ ಕಂಟೆಂಟ್‌, ಒಳ್ಳೆಯ ಪಾತ್ರ ಎರಡೂ ನನಗೆ ಈ ಸಿನಿಮಾ ಮೂಲಕ ಸಿಕ್ಕಿದೆ. ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

“ಮೊದಲ ಸಲ ನಿರ್ದೇಶಕರು ಕಥೆ ಹೇಳುವಾಗ ಎಷ್ಟು ಎಕ್ಸೆ„ಟ್‌ ಮೆಂಟ್‌ ಇತ್ತೋ, ಈಗಲೂ ಅಷ್ಟೇ ಎಕ್ಸೆ„ಟ್‌ಮೆಂಟ್‌ ಇದೆ. ಈ ಸಿನಿಮಾದಲ್ಲಿ ಮಾಸ್‌, ಕ್ಲಾಸ್‌ ಎಲ್ಲವೂ ಇದೆ. ಥಿಯೇಟರ್‌ನೊಳಗೆ ಹೋದ್ರೆ ಒಂದು ಸೆಕೆಂಡ್‌ ಕೂಡ ಸಿನಿಮಾ ಬೋರ್‌ ಆಗೋದಿಲ್ಲ. ಅಷ್ಟು ಚೆನ್ನಾಗಿ ಸಿನಿಮಾ ಬಂದಿದೆ’ ಎಂಬುದು ನಾಯಕಿ ಕಾಜಲ್‌ ಕುಂದರ್‌ ಮಾತು

ಪ್ರಜ್ವಲ್‌ ಎಸ್‌. ಪಿ “ಬಾಂಡ್‌ ರವಿ’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. “ಈ ಸಿನಿಮಾದ ಕಥೆಯ ಮೇಲೆ ಇಡೀ ತಂಡಕ್ಕೆ ನಂಬಿಕೆಯಿದೆ. ಅಷ್ಟು ವಿಭಿನ್ನವಾದ ಕಥೆಯನ್ನು, ಅಷ್ಟೇ ವಿಭಿನ್ನವಾಗಿ ತೆರೆಮೇಲೆ ಹೇಳಿದ್ದೇವೆ. ನಮ್ಮ ಪ್ರಯತ್ನ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ನಂಬಿಕೆಯಿದೆ’ ಎಂಬುದು ಸಿನಿಮಾದ ಬಗ್ಗೆ ನಿರ್ದೇಶಕ ಪ್ರಜ್ವಲ್‌ ಎಸ್‌. ಪಿ ಮಾತು.

ಸಂಗೀತ ನಿರ್ದೇಶಕ ಮನೋಮೂರ್ತಿ, ನಿರ್ಮಾಪಕ ನರಸಿಂಹಮೂರ್ತಿ. ವಿ ಸೇರಿದಂತೆ ಚಿತ್ರದ ತಂತ್ರಜ್ಞರು ಮತ್ತು ಕಲಾವಿದರು “ಬಾಂಡ್‌ ರವಿ’ಯ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು.

Advertisement

“ಲೈಫ್ ಲೈನ್‌ ಫಿಲಂಸ್‌’ ಬ್ಯಾನರ್‌ನಡಿ ನಿರ್ಮಾಣವಾಗಿರುವ “ಬಾಂಡ್‌ ರವಿ’ ಸಿನಿಮಾಕ್ಕೆ ಮಲ್ಲಿಕಾರ್ಜುನ್‌ ಕಾಶಿ ಹಾಗೂ ಕ್ಸೇವಿಯರ್‌ ಫ‌ರ್ನಾಂಡಿಸ್‌ ಸಹ ನಿರ್ಮಾಣವಿದೆ. ರವಿಕಾಳೆ, ಧರ್ಮ, ವಿಜಯ್‌ ಚೆಂಡೂರ್‌, ಶೋಭರಾಜ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೆ. ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ, ಸುನೀಲ್‌ ಮತ್ತು ದೇವ್‌ ಎನ್‌, ರಾಜ್‌ ಸಂಭಾಷಣೆಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next