Advertisement

ಅಪ್ಪು ನೆನಪಲ್ಲಿ ‘ಬಾಂಡ್ ರವಿ’; ಪ್ರಮೋದ್ ಚಿತ್ರದ ಟೀಸರ್ ಗೆ ಮೆಚ್ಚುಗೆ

12:04 PM Sep 27, 2022 | Team Udayavani |

“ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಈ ಹಿಂದೆ ನನ್ನ ಸಿನಿಮಾವನ್ನು ನೋಡಿ ತುಂಬ ಖುಷಿ ಪಟ್ಟಿದ್ದರು. ಸ್ವತಃ ಅವರೇ ಪೋನ್‌ ಮಾಡಿ ನನ್ನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಶೀಘ್ರದಲ್ಲಿಯೇ ಭೇಟಿಯಾಗೋಣ ಎಂದೂ ಹೇಳಿದ್ದರು. ಆದರೆ, ಅಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ಅವರನ್ನು ಭೇಟಿಯಾಗುವಷ್ಟರಲ್ಲಿ ಅವರು ನಮ್ಮಿಂದ ದೂರವಾದರು. ಈಗ ಅವರ ನೆನಪಿನಲ್ಲಿಯೇ, ಅವರದ್ದೇ ಪಾತ್ರದ ಹೆಸರನ್ನು ನಮ್ಮ ಸಿನಿಮಾದ ಟೈಟಲ್‌ ಆಗಿಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ಪುನೀತ್‌ ರಾಜಕುಮಾರ್‌ ಅವರಿದ್ದರೆ, ಖಂಡಿತವಾಗಿಯೂ ನಮ್ಮ ಪ್ರಯತ್ನವನ್ನು ನೋಡಿ ಬೆನ್ನುತಟ್ಟುತ್ತಿದ್ದರು’ ಹೀಗೆ ಹೇಳುತ್ತ “ಬಾಂಡ್‌ ರವಿ’ ಸಿನಿಮಾದ ಬಗ್ಗೆ ಮಾತಿಗಿಳಿದರು ನಟ ಪ್ರಮೋದ್‌.

Advertisement

“ಬಾಂಡ್‌ ರವಿ’ ಸಿನಿಮಾದ ಟೈಟಲ್‌ಗೆ ಸ್ಫೂರ್ತಿಯಾಗಿದ್ದು ಪುನೀತ್‌ ರಾಜಕುಮಾರ್‌ ಅಭಿನಯದ “ಅಣ್ಣಾಬಾಂಡ್‌’ ಸಿನಿಮಾದಲ್ಲಿ ಬರುವ “ಬಾಂಡ್‌ ರವಿ’ ಪಾತ್ರವಂತೆ. ಇತ್ತೀಚೆಗಷ್ಟೇ “ಬಾಂಡ್‌ ರವಿ’ ಸಿನಿಮಾದ ಮೊದಲ ಟೀಸರ್‌ ಬಿಡುಗಡೆಯಾಗಿದ್ದು, ಇದೇ ವೇಳೆ ಪುನೀತ್‌ ಅವರನ್ನು ನೆನಪು ಮಾಡಿಕೊಂಡ ನಟ ಪ್ರಮೋದ್‌,

“ಬಾಂಡ್‌ ರವಿ’ ಅಂದ್ರೆ, ಎಲ್ಲರಿಗೂ ಪುನೀತ್‌ ರಾಜಕುಮಾರ್‌ ನೆನಪಾಗುತ್ತಾರೆ. ನಮ್ಮ ಸಿನಿಮಾದ ಟೈಟಲ್‌ಗ‌ೂ ಅವರ ಪಾತ್ರವೇ ಸ್ಫೂರ್ತಿ. ನಮ್ಮ ಸಿನಿಮಾಕ್ಕೂ ಅವರ ಹಾರೈಕೆ, ಆಶೀರ್ವಾದ ಇರುತ್ತದೆ’ ಎಂದು ಪುನೀತ್‌ ರಾಜಕುಮಾರ್‌ ಮತ್ತು “ಬಾಂಡ್‌ ರವಿ’ ಬಾಂಡಿಂಗ್‌ ಬಗ್ಗೆ ಮಾತನಾಡಿದರು.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಪಿಎಫ್ಐ- ಎಸ್ ಡಿಪಿಐ ವಿರುದ್ಧ ಎನ್ಐಎ ಸಮರ: ರಾಜ್ಯದಲ್ಲಿ 75 ಮಂದಿ ವಶಕ್ಕೆ

“ಈ ಸಿನಿಮಾದ ಕಥೆ ಎಲ್ಲರಿಗೂ ಕನೆಕ್ಟ್ ಆಗುವಂತಿದೆ. “ಬಾಂಡ್‌ ರವಿ’ ಸಿನಿಮಾದ ಜೊತೆ ಎಲ್ಲರಿಗೂ ಒಂದು ಬಾಂಡಿಂಗ್‌ ಇದೆ. ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಮೇಲ್ನೋಟಕ್ಕೆ ಮಾಸ್‌ ಸಿನಿಮಾದಂತೆ ಕಂಡರೂ, ಒಳಗೆ ಬೇರೆಯದ್ದೇ ವಿಷಯವಿದೆ. ಆದಷ್ಟು ಬೇಗ ಜನರಿಗೆ ಸಿನಿಮಾ ತೋರಿಸಬೇಕೆಂಬ ಉತ್ಸಾಹದಲ್ಲಿದ್ದೇವೆ’ ಎಂಬುದು “ಬಾಂಡ್‌ ರವಿ’ ಬಳಗದ ಮಾತು.

Advertisement

“ಬಾಂಡ್‌ ರವಿ’ ಸಿನಿಮಾದಲ್ಲಿ ನಾಯಕ ಪ್ರಮೋದ್‌ ಅವರಿಗೆ ನಾಯಕಿಯಾಗಿ ಕಾಜಲ್‌ ಕುಂದರ್‌ ಜೋಡಿಯಾಗಿದ್ದಾರೆ. ಉಳಿದಂತೆ ಪ್ರಸನ್ನ, ಗೋವಿಂದೇ ಗೌಡ, ವಿಜಯ ಚೆಂಡೂರ್‌, ಪವನ್‌, ಮಿಮಿಕ್ರಿ ಗೋಪಿ, ಧರ್ಮ, ಸಂತೂ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಜ್ವಲ್‌ ಎಸ್‌. ಪಿ ಕಥೆ, ಚಿತ್ರಕಥೆ ಬರೆದು “ಬಾಂಡ್‌ ರವಿ’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದು, “ಲೈಫ್ ಲೈನ್‌ ಫಿಲಂಸ್‌’ ಬ್ಯಾನರಿನಲ್ಲಿ ನರಸಿಂಹ ಮೂರ್ತಿ ವಿ. ನಿರ್ಮಿಸಿರುವ ಈ ಸಿನಿಮಾಕ್ಕೆ ಮಲ್ಲಿಕಾರ್ಜುನ ಕಾಶಿ ಮತ್ತು ಕ್ಸೇವಿಯರ್‌ ಫ‌ರ್ನಾಂಡಿಸ್‌ ಸಹ ನಿರ್ಮಾಣವಿದೆ. ಚಿತ್ರಕ್ಕೆ ಕೆ. ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಅರ್ಜುನ್‌ ಸಂಕಲನವಿದೆ.

“ಬಾಂಡ್‌ ರವಿ’ ಸಿನಿಮಾದ ಐದು ಹಾಡುಗಳಿಗೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್‌ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್‌, ಚಿನ್ಮಯ್‌ ಭಾವಿಕೆರೆ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಬಿ. ಧನಂಜಯ್‌ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next