Advertisement

ಅಲ್‌ ಕಾಯಿದಾ ವೀಡಿಯೋ ಖಚಿತತೆ ಬಗ್ಗೆ ವಿಚಾರಣೆ: ಸಿಎಂ ಬೊಮ್ಮಾಯಿ

10:15 PM Apr 07, 2022 | Team Udayavani |

ಮೈಸೂರು: ಹಿಜಾಬ್‌ ಪರ ಅಲ್‌ ಕಾಯಿದಾ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಅಯ್ಮನ್‌ ಜವಾಹಿರಿ ನೀಡಿರುವ ಹೇಳಿಕೆಯ ವೀಡಿಯೋ ಹಾಗೂ ಮತ್ತಿತರ ಸಂಗತಿಗಳ ಖಚಿತತೆ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಗುರುವಾರ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಹಿಜಾಬ್‌ ಬಗ್ಗೆ ಅಲ್‌ ಕಾಯಿದಾ ಪ್ರತಿಕ್ರಿಯೆಯಲ್ಲಿ ಆಶ್ಚರ್ಯವೇನೂ ಇಲ್ಲ. ಈ ದೇಶದ ನೆಲದ ಕಾನೂನಿನ ವಿರುದ್ಧ ನಡವಳಿಕೆ ಪ್ರಾರಂಭ ಮಾಡಿ ಅದನ್ನು ವಿವಾದ ಮಾಡುವ ಮೂಲಕ ಜನರಲ್ಲಿ ಅಶಾಂತಿ, ಗೊಂದಲ ಮೂಡಿಸುವ ಪ್ರಯತ್ನಗಳೂ ನಡೆದಿವೆ. ಇದರ ಒಂದು ಭಾಗವಾಗಿ  ಅಲ್‌ ಕಾಯಿದಾ  ಎಂದು ಹೇಳಿಕೊಂಡಿರುವ ವೀಡಿಯೋ ಇದೆ. ಇದರ ಖಚಿತತೆ ಬಗ್ಗೆ ವಿಚಾರಣೆ ಮಾಡಲು ಪೊಲೀಸ್‌ ವರಿಷ್ಠರಿಗೆ ಸೂಚಿಸಿದ್ದೇನೆ ಎಂದರು.

ಅಲ್‌ ಕಾಯಿದಾ  ಹೇಳಿಕೆ ಹಿಂದೆ ಆರೆಸ್ಸೆಸ್‌ ಕೈವಾಡವಿದೆ ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಇದರಲ್ಲಿ ಲಾಜಿಕ್‌ ಇಲ್ಲ. ಯಾವುದೇ ಆಧಾರವೂ ಇಲ್ಲ. ಅಲ್‌ ಕಾಯಿದಾ ಹೇಳಿಕೆ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಗೊಳ್ಳುತ್ತಾರೆ ಎಂಬುದೇ ಆಶ್ಚರ್ಯದ ಸಂಗತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next