ಮುಂಬಯಿ : ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಲೆಕ್ಕ ಚುಕ್ತಾ ದಿನವಾದ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 28.26 ಅಂಕಗಳ ಮುನ್ನಡೆಯನ್ನುಸಾಧಿಸಿದ ದಿನದ ವಹಿವಾಟನ್ನು 28,892.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.60 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 8,939.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ ಸಾಧಿಸಿರುವ ಇಂದಿನ ಮುನ್ನಡೆಯು ನಿರಂತರ ಆರನೇ ದಿನದ ಏರಿಕೆಯಾಗಿದೆ. ಹಾಗಿದ್ದರೂ ಬ್ಯಾಂಕ್ ಹಾಗೂ ರಿಲಯನ್ಸ್ ಶೇರುಗಳಲ್ಲಿನ ಲಾಭ ನಗದೀಕರಣದ ಒತ್ತಡಕ್ಕೆ ಗುರಿಯಾದ ಶೇರು ಮಾರುಕಟ್ಟೆ ದಿನಾಂತ್ಯದಲ್ಲಿ ಹಿನ್ನಡೆಗೆ ಗುರಿಯಾಗದಿದ್ದುದೇ ವಿಶೇಷವೆನಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,518 ಶೇರುಗಳು ಹಿನ್ನಡೆಗೆ ಗುರಿಯಾದರೆ 1,233ಶೇರುಗಳು ಮುನ್ನಡೆ ಕಂಡವು.
ದಿನದ ವಹಿವಾಟಿನ ನಡುವೆ ಶೇ.1ರ ಏರಿಕೆಯನ್ನು ಸಾಧಿಸಿದ ಹೀರೋ ಮೋಟೋ ಕಾರ್ಪ್, ಹೊಸದಾಗಿ ಹಣ ಎತ್ತುವ ತನ್ನ ಯೋಜನೆಗಳನ್ನು ಪ್ರಕಟಿಸಿತು.