Advertisement

ಮುಂಬಯಿ ಶೇರು ಎರಡನೇ ದಿನವೂ ಮುನ್ನಡೆ, 50 ಅಂಕ ಏರಿಕೆ

04:28 PM Jan 19, 2017 | udayavani editorial |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರ, ನಿರಂತರ ಎರಡನೇ ದಿನವೂ ಮುನ್ನಡೆ ಸಾಧಿಸಿದ್ದು 50.96 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 27,308.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 18.10 ಅಂಕಗಳ ಏರಿಕೆಯನ್ನು ಸಾಧಿಸಿ ದಿನದ ವಹಿವಾಟನ್ನು 8,435.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಗೇಲ್‌, ಓಎನ್‌ಜಿಸಿ, ಟಾಟಾ ಮೋಟರ್‌, ಐಟಿಸಿ ಮತ್ತು ಭಾರ್ತಿ ಏರ್‌ಟೆಲ್‌ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು. ಇದೇ ವೇಳೆ ಲೂಪಿನ್‌, ಎಕ್ಸಿಸ್‌ ಬ್ಯಾಂಕ್‌, ಸನ್‌ ಫಾರ್ಮಾ, ವಿಪ್ರೋ ಮತ್ತು ಎಚ್‌ ಡಿ ಎಫ್ ಸಿ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,417 ಶೇರುಗಳು ಮುನ್ನಡೆ ಸಾಧಿಸಿದರೆ 1,322 ಶೇರುಗಳು ಹಿನ್ನಡೆಗೆ ಗುರಿಯಾದವು; 303 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next