Advertisement

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

10:16 PM Apr 18, 2024 | Suhan S |

ಮುಂಬೈ: ಆರತಕ್ಷತೆಯು ಮದುವೆಯ ಭಾಗ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ವಿಚ್ಛೇದನ ಅರ್ಜಿಗಳ ನ್ಯಾಯವ್ಯಾಪ್ತಿಗೆ ಸಂಬಂಧಿಸಿ ತೀರ್ಪು ನೀಡುವ ವೇಳೆ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಜೋಧಪುರದಲ್ಲಿ ವಿವಾಹ ನಡೆದು, ಮುಂಬೈನಲ್ಲಿ ಆರತಕ್ಷತೆ ನಡೆದಿದ್ದರೆ, ಪತಿಯು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಲು ಬರುವುದಿಲ್ಲ. ಬದಲಾಗಿ ಜೋಧಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದಿರುವ ಕೋರ್ಟ್‌, ಆರತಕ್ಷತೆ ಸಮಾರಂಭವನ್ನು ಮದುವೆ ಭಾಗ ಎಂದು ಪರಿಗಣಿಸಲಾಗದು ಎಂದಿದೆ.

ಜೋಡಿಯೊಂದು 2015ರ ಜೂನ್‌ನಲ್ಲಿ ಜೋಧಪುರದಲ್ಲಿ ಮದುವೆ ಆಯಿತು. ಬಳಿಕ ಮುಂಬೈನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ದಂಪತಿ 10 ದಿನಗಳ ಕಾಲ ಜೋಧ್‌ಪುರದಲ್ಲಿದ್ದು, ನಂತರ ಅಮೆರಿಕಕ್ಕೆ ಹೋಗಿ ನೆಲೆಸಿತ್ತು. 2019ರಲ್ಲಿ ಇಬ್ಬರು ಪ್ರತ್ಯೇಕಗೊಂಡು, ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. 2020ರ ಆಗಸ್ಟ್‌ನಲ್ಲಿ ಪತಿ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಿದರು. ನ್ಯಾಯವ್ಯಾಪ್ತಿ ಕುರಿತು ಕೋರ್ಟ್‌ನಲ್ಲಿ ಪತ್ನಿ ಪ್ರಶ್ನಿಸಿದ್ದರು. ಜೋಧಪುರದಲ್ಲಿ ವಿವಾಹ ಆಗಿರುವುದರಿಂದ, ಆರತಕ್ಷತೆ ಆದ ಮಾತ್ರಕ್ಕೆ ಮುಂಬೈನಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಪತ್ನಿ ಪರ ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಈ ರೀತಿ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next