Advertisement
2 ಲಕ್ಷ ಶ್ಯೂರಿಟಿ ಮೇರೆಗೆ ಪಾರ್ಥೋ ಗುಪ್ತಾ ಅವರಿಗೆ ಬಾಂಬೆ ಕೋರ್ಟ್ ಜಾಮೀನು ನೀಡಿದ್ದು, ಆರು ತಿಂಗಳುಗಳ ಕಾಲ ಪ್ರತಿ ಶನಿವಾರ ಮುಂಬೈ ಪೊಲೀಸರ ಅಪರಾಧ ಶಾಖೆಗೆ ವಿಚಾರಣೆಗಾಗಿ ಭೇಟಿ ನೀಡಬೇಕು ಎಂದು ಹೇಳಿದೆ.
Related Articles
Advertisement
ಜಾಮೀನು ವಿಚಾರಣೆಯ ವೇಳೆ ಹಿರಿಯ ವಕೀಲ ಆಬಾದ್ ಪಾಂಡಾ ಮತ್ತು ವಕೀಲ ಶಾರ್ದುಲ್ ಸಿಂಗ್ ಅವರು ದಾಸ್ ಗುಪ್ತಾ ಪರವಾಗಿ ಕೋರ್ಟಿಗೆ ಜಾಮೀನು ಕೋರಿ ಸಲ್ಲಿಕೆ ಮಾಡಿದರು. ಸಿ ಆರ್ ಪಿ ಸಿ ಯ ನಿಬಂಧನೆಗಳ ಪ್ರಕಾರ ನಿರ್ದಿಷ್ಟಪಡಿಸಿದಂತೆ 60 ದಿನಗಳ ಅವಧಿಯಲ್ಲಿ ದಾಸ್ ಗುಪ್ತಾ ವಿರುದ್ಧ ದೊಡ್ಡ ಪ್ರಮಾಣದ ಚಾರ್ಜ್ ಶೀಟ್ ದಾಖಲಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಿಚಾರಣೆ ಮತ್ತು ತನಿಖೆ ಪೂರ್ಣಗೊಳ್ಳದಿದ್ದರೆ, ಅವರ ವಿರುದ್ಧದ ಆರೋಪಪಟ್ಟಿಯನ್ನು ಸಲ್ಲಿಸಬಾರದು ಎಂಬುದು ಅವರ ವಾದವಾಗಿತ್ತು.
ಜನವರಿ 22 ರಂದು ದಾಸ್ ಗುಪ್ತಾ ಪರ ವಕೀಲ ಅರ್ಜುನ್ ಸಿಂಗ್ ಠಾಕೂರ್ ಅವರು ತಮ್ಮ ಕ್ಲೈಂಟ್ ನನ್ನು ಮುಂಬೈನ ಜೆಜೆ ಆಸ್ಪತ್ರೆಯಿಂದ ವರ್ಗಾವಣೆ ಮಾಡಿದ ನಂತರ ತಲೋಜಾ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡುವಲ್ಲಿ ತುರ್ತು ಮಧ್ಯಪ್ರವೇಶ ಕೋರಿ ಕೋರ್ಟ್ ಗೆ ಕೇಳಿಕೊಂಡಿದ್ದರು.
ಟಿ ಆರ್ ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 24 ರಂದು ಪಾರ್ಥೋ ದಾಸ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು.
ಓದಿ : ಕೋವ್ಯಾಕ್ಸಿನ್ ಪಡೆದ ನಟ ಕಮಲ್ ಹಾಸನ್, ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ!