ಮುಂಬೈ: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ತಾನೇ ಪೂರ್ಣ ರೀತಿಯಲ್ಲಿ ಹೊಣೆ ಹೊತ್ತುಕೊಂಡು ಬೇಬಿ ಪೌಡರ್ ಉತ್ಪಾದನೆಯನ್ನು ಮತ್ತೆ ಆರಂಭಿಸಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಹೊಸ ಪೌಡರ್ ಉತ್ಪಾದನೆಯಾದ ಮೂರೇ ದಿನಗಳೊಳಗೆ ಅದನ್ನು ಪರಿಶೀಲನೆ ಮಾಡಬೇಕು, ಒಂದು ವಾರದೊಳಗೆ ವರದಿ ನೀಡಬೇಕು ಎಂದು ಸೂಚಿಸಿದೆ.
ಕಂಪನಿಗೆ ಪೌಡರ್ ಉತ್ಪಾದಿಸಲು ಅವಕಾಶ ನೀಡಿದ್ದರೂ, ನ.30ರವರೆಗೆ ಆ ಉತ್ಪನ್ನದ ಮಾರಾಟ ಮತ್ತು ಹಂಚಿಕೆಗೆ ಈ ಹಿಂದೆಯೇ ಹೇರಲಾಗಿದ್ದ ನಿಷೇಧ ಮುಂದುವರಿಯಲಿದೆ.
ಎಫ್ಡಿಎ (ಆಹಾರ ಮತ್ತು ಔಷಧಾಡಳಿತ) ಸಂಸ್ಥೆಯು ಮಕ್ಕಳ ಆರೋಗ್ಯಕ್ಕೆ ಪೂರಕವಾಗಿಲ್ಲ ಎಂಬ ಕಾರಣ ನೀಡಿ ಜಾನ್ಸನ್ ಸಂಸ್ಥೆಯ ಪರವಾನಗಿ ರದ್ದು ಮಾಡಿತ್ತು. ಹಾಗೆಯೇ ಮಾರಾಟಕ್ಕೂ ನಿರ್ಬಂಧ ಹೇರಿತ್ತು.