Advertisement
ಕಚೇರಿಯಲ್ಲಿ ತಮ್ಮ ಕೊನೆಯ ದಿನದಂದು ನ್ಯಾ| ಚೆಲ್ಲೂರ್ ಅವರು ನ್ಯಾಯಪೀಠದಲ್ಲಿ ಉಪಸ್ಥಿತರಿದ್ದ ಎಲ್ಲಾ ವಾದಿಗಳು ಹಾಗೂ ಪ್ರತಿವಾದಿಗಳಿಗೆ ಆಭಾರ ವ್ಯಕ್ತಪಡಿಸಿದರು. “ನಾನು ಇಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ, ಕಿರಿಯರು ಆಗಲಿ ಅಥವಾ ಹಿರಿಯರು ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇನೆ…ನಿಮಗೆಲ್ಲರಿಗೂ ನನ್ನ ಧನ್ಯವಾದಗಳು’ ಎಂದು ನ್ಯಾ| ಮಂಜುಳಾ ಚೆಲ್ಲೂರ್ ಅವರು ನುಡಿದರು.
Related Articles
ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಓರ್ವ ಕನ್ನಡಿಗ ಮಹಿಳೆಯಾಗಿದ್ದು, 1955ರ ಡಿ.5ರಂದು ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಅವರ ಜನನವಾಗಿತ್ತು. ಬಳ್ಳಾರಿಯ ಮೊದಲ ಮಹಿಳಾ ವಕೀಲ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. 2000ದ ಫೆ.21ರಂದು ಕರ್ನಾಟಕ ಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡ ಚೆಲ್ಲೂರ್ ಅವರನ್ನು 2012ರಲ್ಲಿ ಚೆಲ್ಲೂರ್ ಕೇರಳ ಹೈ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನೇಮಿಸಲಾಯಿತು. ತದನಂತರ, ಕೋಲ್ಕತ್ತಾ ಹೈಕೋರ್ಟ್‌ಗೆ ಅವರನ್ನು ವರ್ಗಾವಣೆ ಮಾಡಲಾಯಿತು. ಕೋಲ್ಕತ್ತಾ ಹೈಕೋರ್ಟ್‌ನಲ್ಲೂ ಇವರು ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರ ಆಗಸ್ಟ್‌ನಲ್ಲಿ ಮಂಜುಳಾ ಅವರು ಬಾಂಬೆ ಹೈಕೋರ್ಟ್‌ನಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು.
Advertisement