ಬೆಂಗಳೂರು: ನಗರದ ಖಾಸಗಿ ಶಾಲೆಗಳ ಇ-ಮೇಲ್‌ಗಳಿಗೆ ಹುಸಿ ಬಾಂಬ್ ಸಂದೇಶ ಬರುವುದು ಮತ್ತೆ ಮುಂದುವರಿದಿದೆ.
ನಾಗವಾರದ ಖಾಸಗಿ ಶಾಲೆಯೊಂದಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳಿಸಿದ್ದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಕೆಲಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು.
ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ಮುಂಭಾ ಗದಲ್ಲಿರುವ ದಿ ನ್ಯೂ ಇಂಡಿ ಯನ್ ಪಬ್ಲಿಕ್ ಶಾಲೆಗೆ ದುಷ್ಕರ್ಮಿಗಳು ಗುರುವಾರ ಮುಂಜಾನೆ 6.57ಕ್ಕೆ ಇ- ಮೇಲ… ಮೂಲಕ ಶಾಲೆ ಆವರಣದಲ್ಲಿ 5 ಪೈಪ್‌ಲೈನ್ ಬಾಂಬ್‌ಗಳನ್ನು ಇಡಲಾಗಿದೆ. ಅವುಗಳ ಮಧ್ಯಾಹ್ನ 1.30ಕ್ಕೆ ಸ್ಫೋಟಗೊಳಲಿದೆ ಎಂದು ಫಾದರ್ ಕೊಡಾಚಿ ಹೆಸರಿನ coldghost456@gmail.com ಹಾಗೂ askbirnorth@tipsglobal.net ಎಂಬ ಇ-ಮೇಲ್ ವಿಳಾಸದಿಂದ ಬೆದರಿಕೆ ಸಂದೇಶ ಕಳುಹಿಸಿದ್ದರು.
ಅದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿಯು ಕೂಡಲೇ ಮಕ್ಕ ಳಿಗೆ ರಜೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸಿಬ್ಬಂದಿ ಶಾಲೆ ಒಳಭಾಗ ಹಾಗೂ ಹೊರಭಾಗದ ಪ್ರತಿಯೊಂದು ಜಾಗದಲ್ಲೂ ತಪಾಸಣೆ ನಡೆಸಿದ್ದರು. ಆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಖಚಿತಪಡಿಸಿದ್ದು, ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ನಿಟ್ಟುಸಿರು ಬಿಟ್ಟರು. ಶಾಲೆಯ ಆಡಳಿತಾಧಿಕಾರಿ ಪದ್ಮಿನಿ ರಾಘವೇಂದ್ರ ಎಂಬು ವರು ನೀಡಿದ ದೂರಿನ ಮೇರೆಗೆ ದುಷ್ಕ ರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.