Advertisement
ವಿಶ್ವದ ಖ್ಯಾತ ಓಟಗಾರನ ಪ್ರತಿಮೆಯನ್ನು ಭಾನುವಾರ ಜಮೈಕಾ ಪ್ರಧಾನಿ ಆ್ಯಂಡ್ರಿವ್ ಲೋಕಾರ್ಪಣೆಗೊಳಿಸಿದರು.ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ಉಸೇನ್ ಬೋಲ್ಟ್ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ ತನಗೆ ಗೌರವ ನೀಡಿದಜಮೈಕಾ ಹಾಗೂ ಅಲ್ಲಿನ ಜನತೆಗೆ ಧನ್ಯವಾದಗಳಲ್ಲಿ ಸಲ್ಲಿಸಿದ್ದಾರೆ. ಪ್ರತಿಮೆಯನ್ನು ಜಮೈಕಾದ ಖ್ಯಾತ ಶಿಲ್ಪಿ ಬಾಸಿಲ್ ವಾಟ್ಸನ್ ಕೆತ್ತಿದ್ದಾರೆ. ಉಸೇನ್ ಬೋಲ್ಟ್ 100 ಮೀ., 200 ಮೀ.ನಲ್ಲಿ ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ. ವೇಗದ ಓಟದ ವಿಭಾಗದಲ್ಲಿ ಇದೊಂದು ಐತಿಹಾಸಿಕ ದಾಖಲೆಗಳಾಗಿವೆ. ಎರಡರಲ್ಲೂ ವಿಶ್ವ ದಾಖಲೆ ಇನ್ನೂ ಬೋಲ್ಟ್ ಹೆಸರಲ್ಲೇ ಇದೆ.
ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಪ್ರತಿಮೆಯನ್ನು ದುಷ್ಕರ್ಮಿ ಗಳು ಧ್ವಂಸಗೊಳಿಸಿದ್ದಾರೆ. ಬ್ಯೂನಸ್ ಏರ್ನಲ್ಲಿದ್ದ ಪ್ರತಿಮೆ ನೆಲಕ್ಕುರುಳಿಸಲಾಗಿದೆ. ಈ ವರ್ಷ ಒಟ್ಟಾರೆ 2ನೇ ಸಲ ಮೆಸ್ಸಿ ಪ್ರತಿಮೆಯನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಆರೋಪಿ ಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ದುಷ್ಕರ್ಮಿ ಗಳನ್ನು ಬಂಧಿಸುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೆಸ್ಸಿ ಬಾರ್ಸಿಲೋನಾ ಕ್ಲಬ್ ತಂಡದ ಪರವಾಗಿಯೂ ಹಲವಾರು ವರ್ಷಗಳಿಂದ ಆಡುತ್ತಿದ್ದಾರೆ. ಸಾಕಷ್ಟು ಹೆಸರು, ಕೀರ್ತಿ, ಹಣಗಳಿಸಿ ಕೊಂಡಿದ್ದಾರೆ. ಆದರೆ 2014ರ ವಿಶ್ವಕಪ್ ಫುಟ್‌ಬಾಲ್ ಸೇರಿದಂತೆ ಪ್ರಮುಖ 2 ಕೂಟಗಳನ್ನು ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡ ಬಾರಿ ವೈಫಲ್ಯ ಅನುಭವಿಸಿತ್ತು.