ದಕ್ಷಿಣ ಭಾರತದ ಸಿನೆಮಾಗಳ ಮೇಲೆ ಬಾಲಿವುಡ್ ಮಂದಿಗೆ ಬೆದರಿಕೆ ಹುಟ್ಟಿದೆಯೇ? ಕನ್ನಡ ನಟ ಸುದೀಪ್ ಅವರ ಹೇಳಿಕೆ ಸಂಬಂಧ ಬಾಲಿವುಡ್ ನಟ ಅಜಯ್ ದೇವಗನ್ ಅವರ ಟ್ವೀಟ್ ನೋಡಿದರೆ ಇಂಥದ್ದೊಂದು ಅನುಮಾನ ಬಾರದೇ ಇರದು. ಅಲ್ಲದೆ, ಸಲ್ಮಾನ್ ಖಾನ್, ಶಾರೂಖ್ ಖಾನ್ ಮತ್ತು ಆಮೀರ್ ಖಾನ್ ಅವರ ಚಿತ್ರಗಳೂ ಮರೆಯಾಗಿ ಎಷ್ಟೋ ದಿನಗಳಾಗಿವೆ. ಹೀಗಾಗಿ ಮುಂದೊಂದು ದಿನ ದಕ್ಷಿಣ ಭಾರತದ ಚಿತ್ರಗಳೇ ಬಾಲಿವುಡ್ ಅನ್ನು ಆಳ್ವಿಕೆ ಮಾಡಿದರೆ ಅಚ್ಚರಿಯೇನಲ್ಲ!
ರಜನಿ ದಿ ಗ್ರೇಟ್ :
ಪ್ಯಾನ್ ಇಂಡಿಯಾ ಅಥವಾ ಪ್ಯಾನ್ ವರ್ಲ್ಡ್ ಮೂವಿ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ತಮಿಳುನಾಡಿನ ಸೂಪರ್‌ಸ್ಟಾರ್ ಮತ್ತು ಕರ್ನಾಟಕ ಮೂಲದ ರಜನಿಕಾಂತ್. ಇಡೀ ಜಗತ್ತಿನಲ್ಲೇ ರಜನಿ ಫ್ಯಾನ್ಸ್ ಇದ್ದಾರೆ ಎಂದರೆ ನಂಬಲೇಬೇಕು. ರಜನಿಕಾಂತ್ ಮೂವಿಯಲ್ಲಿ ಬಾಲಿವುಡ್ ಸ್ಟಾರ್‌ಗಳೇ ವಿಲನ್‌ಗಳಾಗುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಉದಾಹರಣೆಗೆ 2.0 ಸಿನೆಮಾದಲ್ಲಿ ರಜನಿ ಹೀರೋ ಆಗಿದ್ದರೆ, ಅಕ್ಷಯ್ ಕುಮಾರ್ ವಿಲನ್ ಆಗಿದ್ದರು. ಹಾಗೆಯೇ ರಜನಿಕಾಂತ್ ಜತೆಯಲ್ಲೇ ಕಮಲ್‌ಹಾಸನ್ ಕೂಡ ಪ್ಯಾನ್ ಇಂಡಿಯಾ ಮೂವಿ ಮಾಡುತ್ತಿದ್ದರು. ಇವರ ಇಂಡಿಯನ್, ದಶವಾತಾರಂನಂಥ ಮೂವಿಗಳಂತೂ ಬಾಲಿವುಡ್‌ನಲ್ಲಿ ಧೂಳನ್ನೇ ಎಬ್ಬಿಸಿತ್ತು. ಇವರಷ್ಟೇ ಅಲ್ಲ ಇಂದಿಗೂ ಬಾಲಿವುಡ್ ಆಳುತ್ತಿರುವ ನಟಿಯರಲ್ಲಿ ದಕ್ಷಿಣದವರೇ ಹೆಚ್ಚು ಎಂಬುದನ್ನು ಹೆಮ್ಮೆಯಿಂದಲೇ ಹೇಳಬಹುದು. ಶ್ರೀದೇವಿ, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಟಬೂ, ಪೂಜಾ ಹೆಗ್ಡೆ ಸೇರಿ ಅನೇಕರು ಈ ಸಾಲಿನಲ್ಲಿ ಇದ್ದಾರೆ.
ಆಗೊಂದು ದಿನ, ರೋಜಾ, ಬಾಂಬೆ :
Related Articles
ಅದೊಂದು ದಿನವಿತ್ತು. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಮತ್ತು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಜೋಡಿ ಬಾಲಿವುಡ್ ಮಂದಿ ಮೆಚ್ಚುವಂಥ ಚಿತ್ರಗಳನ್ನು ಮಾಡಿತ್ತು. ಇದಕ್ಕೆ ಸಾಕ್ಷಿ ತಮಿಳಿನ ರೋಜಾ ಮತ್ತು ಬಾಂಬೆ ಚಿತ್ರಗಳು. ಜತೆಗೆ ಪ್ರಭುದೇವ ನಾಯಕನಾಗಿದ್ದ ಕಾದಲನ್ ಚಿತ್ರ ಕೂಡ ಹಿಂದಿಯಲ್ಲಿಯೂ ಬಂದಿತ್ತು. ಅಂದರೆ ಈ ಚಿತ್ರಗಳು ತಮಿಳು, ತೆಲುಗು ಜತೆಗೆ ಹಿಂದಿಗೂ ಡಬ್ ಆಗಿದ್ದವು. ಇದಾದ ಬಳಿಕ, ಈ ಡಬ್ಬಿಂಗ್ ಹೋಗಿ, ರಿಮೇಕ್ ವ್ಯವಸ್ಥೆ ಬಂದಿತ್ತು. ಆಗ ದಕ್ಷಿಣ ಭಾರತದ ಹಲವಾರು ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡಲಾಗಿತ್ತು.
ಹೊಸ ಶಕೆ ಬರೆದ ಬಾಹುಬಲಿ :
ಈಗ ಕಾಲ ಮತ್ತೆ ಬದಲಾಗಿದೆ. ಬಾಹುಬಲಿ ಮತ್ತು ಬಾಹುಬಲಿ 2 ಸರಣಿಯ ಅನಂತರ ಮತ್ತೆ ಡಬ್ಬಿಂಗ್ ಚಿತ್ರಗಳು ಹಿಂದಿಯಲ್ಲೂ ತೆರೆಕಾಣುತ್ತಿವೆ. ಈಗ ಬಾಹುಬಲಿ ನಿರ್ದೇಶಕ ರಾಜಮೌಳಿ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮದೇ ಆದ ಮೋಡಿ ಮಾಡುತ್ತಿದ್ದಾರೆ. ಪ್ರಭಾಸ್ ನಾಯಕತ್ವದ ಬಾಹುಬಲಿ ಚಿತ್ರಗಳಂತೂ ಹಿಂದಿ ಚಿತ್ರರಂಗದಲ್ಲಿ ಇನ್ನಿಲ್ಲದ ಮೋಡಿ ಮಾಡಿದವು. ಬಾಹುಬಲಿ ಚಿತ್ರ ಒಂದು ರೀತಿಯ ದಾಖಲೆ ನಿರ್ಮಿಸಿದರೆ ಬಾಹುಬಲಿ 2 ಚಿತ್ರ ಮಗದೊಂದು ದಾಖಲೆ ನಿರ್ಮಿಸಿತು. ಈಗಲೂ ಹಿಂದಿ ಮಾರುಕಟ್ಟೆಯಲ್ಲಿ ಬಾಹುಬಲಿ 2 ಚಿತ್ರ 500 ಕೋಟಿ ರೂ. ಗಳಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ಇನ್ನು ಕೆಜಿಎಫ್ ಸರಣಿ ಕೂಡ ಅದೇ ರೀತಿಯ ಮೋಡಿ ಮಾಡಿದ್ದು, ಚಿತ್ರದ ಮೇಕಿಂಗ್ ಬಗ್ಗೆ ಬಾಲಿವುಡ್ ಮಂದಿಯೇ ಅವಕ್ಕಾಗಿದ್ದಾರೆ. ವಿಶೇಷವೆಂದರೆ ಈ ಎರಡೂ ಚಿತ್ರಗಳ ನಿರ್ದೇಶಕರು ಕರ್ನಾಟಕದವರು ಎಂಬುದು ಹೆಗ್ಗಳಿಕೆ!
ಮೂರು ಖಾನ್‌ಗಳ ಕಥೆ ಏನು? :
ನಿಜವಾಗಿಯೂ ಹೇಳಬೇಕು ಎಂದರೆ ಇಂದು ಬಾಲಿವುಡ್ ಚಿತ್ರರಂಗ ದೊಡ್ಡದೊಂದು ಯಶಸ್ಸಿಗೆ ಹುಡುಕಾಟ ನಡೆಸುತ್ತಿದೆ. ಆಮೀರ್ ಖಾನ್, ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಂದಿಗೂ ದೊಡ್ಡದಾದ ಯಶಸ್ಸಿಗೆ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಅಕ್ಷಯ್ ಕುಮಾರ್, ಅಜಯ್ ದೇವಗನ್‌ರಂಥ ನಟರು ಮಾತ್ರ ಅಲ್ಲೊಂದು, ಇಲ್ಲೊಂದು ಚಿತ್ರ ಮಾಡುತ್ತಿದ್ದಾರೆ. ಆದರೆ ಇವ್ಯಾವುದೂ ದೊಡ್ಡ ಯಶಸ್ಸು ಕಾಣುತ್ತಿಲ್ಲ.
ವಿಶೇಷವೆಂದರೆ ಕೆಜಿಎಫ್ 2 ಬಿಡುಗಡೆಯಾದ ದಿನವೇ ಆಮೀರ್ ಖಾನ್ ಅವರ ಬಹುನಿರೀಕ್ಷೆಯ ಲಾಲ್ ಸಿಂಗ್ ಛಡ್ಡಾ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಒಂದಕ್ಕೊಂದು ಘರ್ಷಣೆಗೆ ಕಾರಣವಾಗುವುದು ಬೇಡ ಎಂಬ ಕಾರಣಕ್ಕಾಗಿ ಆಮೀರ್ ಖಾನ್ ಅವರೇ ತಮ್ಮ ಚಿತ್ರದ ಬಿಡುಗಡೆ ಮುಂದೂಡಿದರು. ಆದರೆ ಈ ಹಿಂದೆ ಬಾಲಿವುಡ್ ಚಿತ್ರಗಳು, ದಕ್ಷಿಣ ಭಾರತದ ಚಿತ್ರಗಳು ಬಿಡುಗಡೆಯಾದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಇನ್ನು ಶಾರೂಖ್ ಖಾನ್ ಪಠಾಣ್ ಶೂಟಿಂಗ್‌ನಲ್ಲಿದ್ದಾರೆ. ಅಲ್ಲದೆ 2017ರ ಅನಂತರ ಶಾರೂಖ್ ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ. ಚಿತ್ರಗಳ ಸತತ ಸೋಲಿನ ಬಳಿಕ ಶಾರೂಖ್ ಕೊಂಚ ಕಾಲ ಬಿಡುವುದು ತೆಗೆದುಕೊಂಡಿದ್ದರು. ಅತ್ತ ಸಲ್ಮಾನ್ ಖಾನ್ ಅವರ ಆಂಥಿಮ್ ದಿ ಫೈನಲ್‌ಟ್ರಾಥ್ ಎಂಬ ಚಿತ್ರವನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇಲ್ಲಿವರೆಗೆ ಈ ಚಿತ್ರ ಗಳಿಸಿರುವುದು ಕೇವಲ 39.06 ಕೋಟಿ ರೂ. ಇದಕ್ಕಿಂತ ಹಿಂದೆ ಬಂದ ರಾಧೆ, ದಬಾಂಗ್ 3 ಕೂಡ ಅಷ್ಟೇನೂ ಹೇಳಿಕೊಳ್ಳುವಂತೆ ಓಡಲಿಲ್ಲ.
ಒಟಿಟಿಗೇ ಸೀಮಿತರಾದರೇ ಬಾಲಿವುಡ್ ಮಂದಿ? :
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಾಲಿವುಡ್ ಮಂದಿ ಒಟಿಟಿ ವೇದಿಕೆಯ ಮೊರೆ ಹೋಗುತ್ತಿರುವುದು ಸುಳ್ಳಲ್ಲ. ಅಜಯ್ ದೇವಗನ್, ಸೈಫ್ ಅಲಿ ಖಾನ್, ಕಾಜೋಲ್, ಮನೋಜ್ ಬಾಜ್‌ಪೇಯಿ, ಸುಶ್ಮಿತಾ ಸೇನ್, ಅಭಿಷೇಕ್ ಬಚrನ್, ಕಿಯಾರಾ ಆಡ್ವಾಣಿ, ನಾಸೀರ್‌ದ್ದೀನ್ ಶಾ, ಪರಿಣಿತಿ ಚೋಪ್ರಾ, ಕರೀಷ್ಮಾ ಕಪೂರ್, ವಿದ್ಯಾಬಾಲನ್, ಅರ್ಜುನ್ ಕಪೂರ್, ಸಿದ್ಧಾರ್ಥ ಮಲ್ಹೋತ್ರ, ಕಾರ್ತಿಕ್ ಆರ್ಯನ್, ತಾಪ್ಸಿ ಪನ್ನು ಸೇರಿದಂತೆ ಹಲವರು ಒಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೊಸ ಶಕೆ ಬರೆದ ಬಾಹುಬಲಿ :
ಈಗ ಕಾಲ ಮತ್ತೆ ಬದಲಾಗಿದೆ. ಬಾಹುಬಲಿ ಮತ್ತು ಬಾಹುಬಲಿ 2 ಸರಣಿಯ ಅನಂತರ ಮತ್ತೆ ಡಬ್ಬಿಂಗ್ ಚಿತ್ರಗಳು ಹಿಂದಿಯಲ್ಲೂ ತೆರೆಕಾಣುತ್ತಿವೆ. ಈಗ ಬಾಹುಬಲಿ ನಿರ್ದೇಶಕ ರಾಜಮೌಳಿ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮದೇ ಆದ ಮೋಡಿ ಮಾಡುತ್ತಿದ್ದಾರೆ. ಪ್ರಭಾಸ್ ನಾಯಕತ್ವದ ಬಾಹುಬಲಿ ಚಿತ್ರಗಳಂತೂ ಹಿಂದಿ ಚಿತ್ರರಂಗದಲ್ಲಿ ಇನ್ನಿಲ್ಲದ ಮೋಡಿ ಮಾಡಿದವು. ಬಾಹುಬಲಿ ಚಿತ್ರ ಒಂದು ರೀತಿಯ ದಾಖಲೆ ನಿರ್ಮಿಸಿದರೆ ಬಾಹುಬಲಿ 2 ಚಿತ್ರ ಮಗದೊಂದು ದಾಖಲೆ ನಿರ್ಮಿಸಿತು. ಈಗಲೂ ಹಿಂದಿ ಮಾರುಕಟ್ಟೆಯಲ್ಲಿ ಬಾಹುಬಲಿ 2 ಚಿತ್ರ 500 ಕೋಟಿ ರೂ. ಗಳಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ಇನ್ನು ಕೆಜಿಎಫ್ ಸರಣಿ ಕೂಡ ಅದೇ ರೀತಿಯ ಮೋಡಿ ಮಾಡಿದ್ದು, ಚಿತ್ರದ ಮೇಕಿಂಗ್ ಬಗ್ಗೆ ಬಾಲಿವುಡ್ ಮಂದಿಯೇ ಅವಕ್ಕಾಗಿದ್ದಾರೆ. ವಿಶೇಷವೆಂದರೆ ಈ ಎರಡೂ ಚಿತ್ರಗಳ ನಿರ್ದೇಶಕರು ಕರ್ನಾಟಕದವರು ಎಂಬುದು ಹೆಗ್ಗಳಿಕೆ!
ಅದ್ದೂರಿ ಮೇಕಿಂಗ್ ಕಷ್ಟಸಾಧ್ಯವೇ? :
ಸದ್ಯ ಹಿಂದಿ ಬೆಲ್ಟ್ನಲ್ಲೂ ಅದ್ದೂರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ 2 ಮತ್ತು ಆರ್‌ಆರ್‌ಆರ್ ಸಿನೆಮಾಗಳ ಯಶಸ್ಸಿಗೆ ಕಾರಣವೇನು ಎಂಬ ಹುಡುಕಾಟದಲ್ಲಿ ಸಿಕ್ಕಿದ್ದು, ಅವುಗಳ ಕಥೆ ಮತ್ತು ಅದ್ದೂರಿ ಮೇಕಿಂಗ್. ಆದರೆ ಬಾಲಿವುಡ್‌ನಲ್ಲಿಯೂ ಇಂಥ ಚಿತ್ರಗಳ ನಿರ್ಮಾಣಕ್ಕೆ ಮುಂದಾದರೂ ಅಂಥ ಯಶಸ್ಸು ಸಿಗಲಿಲ್ಲ. ದಕ್ಷಿಣ ಭಾರತದ ಚಿತ್ರಗಳು ಮಾತ್ರ ಈ ವಿಚಾರದಲ್ಲಿ ಒಂದಷ್ಟು ಮುಂದೆಯೇ ಇವೆ. ಜನರಿಗೆ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡು, ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಜನರಿಗೆ ಬೇಕಾದ ಕಂಟೆಂಟ್… :
ದಕ್ಷಿಣದ ಸಿನೆಮಾಗಳ ಮುಂದೆ ಉತ್ತರದ ಸಿನೆಮಾಗಳು ಪೇಲವವಾಗುತ್ತಿರುವುದೇಕೆ ಎಂಬ ಬಗ್ಗೆ ಸಿನಿಮಾ ತಜ್ಞರು ತಮ್ಮದೇ ಆದ ಉದಾಹರಣೆ ಕೊಡುತ್ತಾರೆ. ಸೌತ್‌ನವರಿಗೆ ಜನರಿಗೆ ಏನು ಬೇಕು ಎಂಬುದು ಖಚಿತವಾಗಿ ಗೊತ್ತಿದೆ. ಅದೇ ರೀತಿ ಸಿನಿಮಾ ಮಾಡುತ್ತಾರೆ. ಅಂದರೆ, ಪುಷ್ಪ ಅಥವಾ ಬಿಗಿಲ್ ಸಿನೆಮಾಗಳು ಮಾಸ್ ಆಧರಿತ ಚಿತ್ರಗಳು. ಕೆಜಿಎಫ್ 2 ಮತ್ತು ಆರ್‌ಆರ್‌ಆರ್ ಕೂಡ ಇವೆ. ಆದರೆ, ಉತ್ತರದಲ್ಲಿ ಕ್ಲಾಸಿ ಸಿನೆಮಾಗಳಿಗೆ ಹೆಚ್ಚು ಒತ್ತುಕೊಟ್ಟು, ಮಾಸ್ ಅನ್ನೇ ಮರೆತಿದ್ದಾರೆ ಎಂದು ಹೇಳುತ್ತಾರೆ ಟ್ರೇಡ್ ತಜ್ಞ ರಮೇಶ್ ಬಾಲಾ. ಅಲ್ಲದೆ, ಇವರು ಸಿಂಗಲ್ ಸ್ಕ್ರೀನ್‌ಗಳನ್ನೇ ಮರೆತಿದ್ದಾರೆ. ಬದಲಾಗಿ ಮಲ್ಟಿಪ್ಲೆಕ್ಸ್‌ಗಳಿಗೆ ಬೇಕಾದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೂ ಒಂದು ಕಾರಣ ಎನ್ನುತ್ತಾರೆ. ಅಷ್ಟೇ ಅಲ್ಲ, ಜನರ ಮನೋರಂಜನೆಗಾಗಿ ಸಿನಿಮಾ ಮಾಡಿ. ಆಗ ಎಲ್ಲರೂ ಸಿನಿಮಾ ನೋಡುತ್ತಾರೆ ಎಂಬುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ.
ದಾಖಲೆ ನಿರ್ಮಿಸಿದ ಚಿತ್ರಗಳು :
- ಬಾಹುಬಲಿ 2(ಹಿಂದಿ) – 500 ಕೋಟಿ ರೂ.
- ಕೆಜಿಎಫ್ 2 (ಹಿಂದಿ) – 350 ಕೋಟಿ ರೂ.
- ಆರ್‌ಆರ್‌ಆರ್(ಹಿಂದಿ) – 270 ಕೋಟಿ ರೂ.
- ಪುಷ್ಪ(ಹಿಂದಿ) – 100.85 ಕೋಟಿ ರೂ.
ಗಳಿಕೆಯಲ್ಲಿ ಬಾಲಿವುಡ್ vs ಸೌತ್ :
2019 :
ಬಾಲಿವುಡ್
5,200 ಕೋಟಿ ರೂ.
ಸೌತ್ ಇಂಡಿಯಾ
4, 000 ಕೋಟಿ ರೂ.
ಹಾಲಿವುಡ್
1,500 ಕೋಟಿ ರೂ.
2021 :
ಸೌತ್ ಇಂಡಿಯಾ
2,400 ಕೋಟಿ ರೂ.
ಬಾಲಿವುಡ್
800 ಕೋಟಿ ರೂ.
ಹಾಲಿವುಡ್
500 ಕೋಟಿ ರೂ.
ಉತ್ತರದಲ್ಲಿ ಮಿನುಗುತ್ತಿರುವ ದಕ್ಷಿಣದ ನಟರು :
ರಜನಿಕಾಂತ್, ಕಮಲ್ ಹಾಸನ್, ಪ್ರಭಾಸ್, ಯಶ್, ಸುದೀಪ್, ಅಲ್ಲು ಅರ್ಜುನ್, ರಾಮಚರಣ್ ತೇಜ, ಜೂ| ಎನ್‌ಟಿಆರ್, ದರ್ಶನ್, ರಕ್ಷಿತ್ ಶೆಟ್ಟಿ, ಮೋಹನ್ ಲಾಲ್, ಮುಮ್ಮುಟ್ಟಿ, ಧನುಶ್, ವಿಜಯ್ ದಳಪತಿ, ಸೂರ್ಯ, ವಿಜಯ್ ಸೇತುಪತಿ, ಚಿರಂಜೀವಿ, ಅಜಿತ್.