ಪಠಾಣ್ ಸಿನಿಮಾದ ಭರ್ಜರಿ ಗೆಲುವಿನ ಸಂತಸದಲ್ಲಿರುವ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ, ಶೀಘ್ರದಲ್ಲೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚಲಿದ್ದು, ಪ್ರಾಜೆಕ್ಟ್ ಕೆ ಸಿನಿಮಾಗಾಗಿ ನಟಿಗೆ 10 ಕೋಟಿ ರೂ. ಸಂಭಾವನೆ ನೀಡಲಾಗಿದೆಯಂತೆ. ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ಜತೆಗೆ ದೀಪಿಕಾ ತೆರೆ ಹಂಚಿಕೊಳ್ಳಲಿದ್ದಾರೆ .
Advertisement
ಸದ್ಯಕ್ಕೆ ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ದೀಪಿಕಾ ಖ್ಯಾತಿ ಹೆಚ್ಚುತ್ತಿರುವ ನಡುವೆಯೇ, ಬೇಡಿಕೆ ಜತೆಗೆ ಸಂಭಾವನೆ ಕೂಡ ಹೆಚ್ಚುತ್ತಿದೆ.