Advertisement

ಭಾರತದ ವಿರುದ್ಧ ‘ಬಾಲಿವುಡ್ ಡ್ರಗ್ಸ್ ಜಿಹಾದ್‍’ಷಡ್ಯಂತ್ರ: ಪ್ರಶಾಂತ್ ಸಂಬರಗಿ

05:45 PM Jun 16, 2022 | Team Udayavani |

ಪಣಜಿ : ಭಾರತ ಮತ್ತು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ಬಾಲಿವುಡ್ ಜಿಹಾದ್‍ನ ಷಡ್ಯಂತ್ರವಿದೆ ಎಂದು ಕನ್ನಡ ಚಲನಚಿತ್ರ ವಿತರಕ, ಉದ್ಯಮಿ ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಗೋವಾದ ಪೊಂಡಾದ ಶ್ರೀ ರಾಮನಾಥಿಯಲ್ಲಿ ಆಯೋಜಿಸಿರುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ “ಬಾಲಿವುಡ್‍ನ ಡ್ರಗ್ಸ್ ಜಿಹಾದ್” ಕುರಿತು ಮಾತನಾಡಿ, 18 ರಿಂದ 24 ವರ್ಷ ವಯೋ ಗುಂಪಿನ ಯುವಕರನ್ನು ಅವರು ಹಿಂದೂಗಳಾಗಿದ್ದಾರೆ ಎಂದು ಮರೆತು ಅವರ ಮೇಲೆ ಪಾಶ್ಚಾತ್ಯ, ಮುಸಲ್ಮಾನ ವಿಚಾರಸರಣಿಯ ಪ್ರಭಾವ ಹೇಗೆ ಬೆಳೆಸಬಹುದು ಎಂಬ ಪ್ರಯತ್ನವನ್ನು ಬಾಲಿವುಡ್‍ನ ಚಲನಚಿತ್ರಗಳ ಮಾಧ್ಯಮದಿಂದ ಮಾಡಲಾಗುತ್ತಿದೆ ಎಂದರು.

2019 ರಲ್ಲಿ ಗುಜರಾತ್‍ನಲ್ಲಿ 250 ಚಲನಚಿತ್ರಗಳ ಒಂದು ಸಮೀಕ್ಷೆಯನ್ನು ಮಾಡಲಾಗಿತ್ತು. ಇದಕ್ಕನುಸಾರ ಮುಸಲ್ಮಾನರ ಶೃದ್ಧಾಸ್ಥಾನಗಳು ಶಕ್ತಿಶಾಲಿಯಾಗಿವೆ, ಮುಸಲ್ಮಾನರು ಮಾನವತಾವಾಧಿಗಳಾಗಿದ್ದಾರೆ, ಬದಲಾಗಿ ಬ್ರಾಹ್ಮಣರು ಭ್ರಷ್ಟಾಚಾರಿ ಮತ್ತು ಕೆಟ್ಟವರಿದ್ದಾರೆ ಎಂದು ತೋರಿಸಲಾಗಿದೆ ಎಂದರು.

ಬಾಲಿವುಡ್‍ನಲ್ಲಿ ಪ್ರತಿ ವರ್ಷ ಸುಮಾರು 3000 ಹಾಡುಗಳು ಪ್ರಸಾರವಾಗುತ್ತದೆ. ಇದರಲ್ಲಿ ಶೇ 30 ರಷ್ಟು ಹಾಡುಗಳಲ್ಲಿ ಅಲ್ಲಾನ ಗುಣಗಾನ ಮಾಡುವದು ಕಂಡುಬರುತ್ತದೆ. ತದ್ವಿರುದ್ಧ ಶೇ 4 ರಷ್ಟು ಹಾಡುಗಳಲ್ಲಿ ಹಿಂದೂ ದೇವತೆಗಳ ಸ್ತುತಿ ಇರುತ್ತದೆ. ಇದರ ಹಿಂದೆ ದುಬೈ ಫಂಡಿಂಗ್ ಮತ್ತು ಕರಾಚಿ ವಿತರಕರ ಕೈವಾಡವಿದೆ ಎಂದರು.

ಕುಖ್ಯಾತ ಅಪರಾಧಿಗಳ ಕಪ್ಪುಹಣ ಬಾಲಿವುಡ್ ಚಲನಚಿತ್ರಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಇದರಿಂದ ಲವ್ ಜಿಹಾದ್‍ಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಅಮಲು ಪದಾರ್ಥಗಳು ಪಂಜಾಬ್ ಮಾರ್ಗವಾಗಿ ಭಾರತದಾದ್ಯಂತ ವಿತರಿಸಲಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next