Advertisement

ಜಮೀನು,ಆಸ್ತಿ ಅಡ್ಡವಿಟ್ಟರೂ ತೀರಿಸಲಾಗಲಿಲ್ಲ..ಕಲಾ ನಿರ್ದೇಶಕನ ಬಾಳಿಗೆ ಸಾಲವೇ ಮುಳ್ಳು ಆಯಿತೇ?

04:03 PM Aug 02, 2023 | Team Udayavani |

ಮುಂಬಯಿ: ಬಾಲಿವುಡ್‌ ಗಿಂದು ಕರಾಳ ದಿನ. ಹತ್ತಾರು ಸಿನಿಮಾಗಳಲ್ಲಿ ಕಲಾ ನಿರ್ದೇಶಕರಾಗಿ ಜನಪ್ರಿಯರಾಗಿದ್ದ ನಿತಿನ್‌ ದೇಸಾಯಿ ಅವರ ಆತ್ಮಹತ್ಯೆ ಬಿಟೌನ್‌ ವಲಯಕ್ಕೆ ದೊಡ್ಡ ಶಾಕ್‌ ಕೊಟ್ಟಿದೆ.

Advertisement

ತಮ್ಮದೇ ಎನ್‌ಡಿ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಅವರಿಗೆ ಆರ್ಥಿಕವಾಗಿ ತೊಂದರೆಗಳಿತ್ತು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಇನಷ್ಟು ವಿಚಾರಣೆ ನಡೆಯುತ್ತಿದ್ದು, ನಿತಿನ್‌ ಅವರಿಗೆ ಎಷ್ಟು ಸಾಲವಿತ್ತು ಎನ್ನುವುದರ ಬಗ್ಗೆ ಮೂಲವೊಂದರಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಬುಧವಾರ ಮುಂಜಾನೆ ಮುಂಬಯಿಯ ಕರ್ಜಾತ್ ಬಳಿಯ ಖಲಾಪುರ್ ರಾಯ್‌ಗಢ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅವರ ಸಾವಿನ ಸುದ್ದಿಯ ಕುರಿತು ಬಿಜೆಪಿಯ ಕರ್ಜಾತ್‌ನ ಸ್ಥಳೀಯ ಶಾಸಕ ಮಹೇಶ್ ಬಾಲ್ಡಿ “ನಿತಿನ್ ದೇಸಾಯಿ ಅವರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಆದರೆ ಪೊಲೀಸರು ಬೇರೆ ಆಯಮಾದಲ್ಲೂ ಈ ಕುರಿತು ತನಿಖೆ ಮಾಡಲಾಗುವುದು ಎಂದಿದ್ದಾರೆ.

ನಿತಿನ್‌ ದೇಸಾಯಿ ಅವರು 180 ಕೋಟಿ ರೂಪಾಯಿಯ ಸಾಲವನ್ನು ಹಣಕಾಸು ಕಂಪೆನಿವೊಂದರಿಂದ ಪಡೆದುಕೊಂಡಿದ್ದರು. ಇದಲ್ಲದೇ ಸಾಲದ ಹೊರೆಯಿಂದ ಅವರು ತಮ್ಮ ತಮ್ಮ ಜಮೀನು ಮತ್ತಿತರ ಆಸ್ತಿಗಳನ್ನು ಅಡವಿಟ್ಟಿದ್ದರು. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದ ಇರುವ ಪರಿಣಾಮ  ಅವರು ಮತ್ತಷ್ಟು ಕುಗ್ಗಿ ಹೋಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಕಂಪನಿಯು ಜಿಲ್ಲಾಧಿಕಾರಿಗೆ ಪತ್ರ ಬರೆದು ದೇಸಾಯಿ ಅವರಿಂದ ಪಡೆದ ಹಣವನ್ನು ವಸೂಲಿ ಮಾಡಲು ಮುಂದಾಗಿತ್ತು ಎಂದು ಮೂಲದಿಂದ ತಿಳಿದು ಬಂದಿರುವುದಾಗಿ ʼಇಂಡಿಯಾ ಟುಡೇʼ ವರದಿ ಮಾಡಿದೆ.

Advertisement

ಬಾಲಿವುಡ್‌ ನ ‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಮತ್ತು ‘ಲಗಾನ್’ ಸಿನಿಮಾಗಳಲ್ಲಿ ಅದ್ಧೂರಿ ಸೆಟ್‌ ಗಳ ವಿನ್ಯಾಸವನ್ನು ಮಾಡಿ ಖ್ಯಾತಿಯಾಗಿದ್ದರು. 20 ವರ್ಷದ ತನ್ನ ವೃತ್ತಿ ಜೀವನದಲ್ಲಿ  ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

2002 ರಲ್ಲಿ ಚಂದ್ರಕಾಂತ್ ಪ್ರೊಡಕ್ಷನ್ಸ್‌ನಲ್ಲಿ “ದೇಶ್ ದೇವಿ” ಎನ್ನುವ ಭಕ್ತಿ ಪ್ರಧಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 2005 ರಲ್ಲಿ, ಅವರು ಮುಂಬೈ ಸಮೀಪದ ಕರ್ಜತ್‌ನಲ್ಲಿ 52 ಎಕರೆ ಪ್ರದೇಶದಲ್ಲಿ ತಮ್ಮ ಎನ್‌ ಡಿ ಸ್ಟುಡಿಯೋವನ್ನು ತೆರೆದಿದ್ದರು. ಇವರ ಸ್ಟುಡಿಯೋದ ಪ್ರದೇಶದಲ್ಲಿ  ʼಜೋಧಾ ಅಕ್ಬರ್ʼ, ʼಟ್ರಾಫಿಕ್ ಸಿಗ್ನಲ್ʼ ಶೋ ಬಿಗ್ ಬಾಸ್‌ನಂತಹ ಶೋಗಳ ಶೂಟ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next