Advertisement

ದೆವ್ವವಾಗಿ ತೆರೆಗೆ ಬರಲಿದ್ದಾರೆ ಬಾಲಿವುಡ್‌ ನಟಿ ಸನ್ನಿ ಲಿಯೋನಿ

11:02 PM Sep 10, 2022 | Team Udayavani |

ಬಾಲಿವುಡ್‌ ನಟಿ ಸನ್ನಿ ಲಿಯೋನಿ ತಮಿಳಿನ “ಓ ಮೈ ಗೋಸ್ಟ್‌’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಯಸೇನಾ ಹೆಸರಿನ ದೆವ್ವವಾಗಿ ಅವರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು, ಆ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.

Advertisement

ಈ ಚಿತ್ರದಲ್ಲಿ ದೆವ್ವದ ಭಯದ ಜತೆ ಹಾಸ್ಯವೂ ಸೇರಿರಲಿದೆ ಎಂದಿದ್ದಾರೆ ನಿರ್ದೇಶಕ ಯುವನ್‌. ಈ ಸಿನಿಮಾದಲ್ಲಿ ಸನ್ನಿ ಜತೆಯಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌, ಯೋಗಿ ಬಾಬು, ರಾಜ್‌ಪಾಲ್‌ ಯಾದವ್‌ ಸೇರಿ ಅನೇಕರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮಾಸಾಂತ್ಯಕ್ಕೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next