Advertisement

48 ಕೋಟಿ ರೂ.ಗೆ ಅಪಾರ್ಟ್‌ಮೆಂಟ್‌ ಖರೀದಿಸಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌

08:34 PM Oct 05, 2022 | Team Udayavani |

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಮುಂಬೈನ ವರ್ಲಿಯಲ್ಲಿ 48 ಕೋಟಿ ರೂ. ಮೌಲ್ಯದ ಅದ್ಧೂರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ.

Advertisement

ಇಂಡಿಯಾಬುಲ್ಸ್‌ ಬ್ರೂ ಪ್ರಾಜೆಕ್ಟ್‌ನ 53ನೇ ಮಹಡಿಯಲ್ಲಿರುವ 5,384 ಚದರ ಅಡಿ ವಿಸ್ತಾರದ ಅಪಾರ್ಟ್‌ಮೆಂಟ್‌ ಇದೀಗ ಮಾಧುರಿಯದ್ದಾಗಿದೆ ಎಂದು ವರದಿಯಾಗಿದೆ.

ಈ ಅಪಾರ್ಟ್‌ಮೆಂಟ್‌ಗೆ 7 ಕಾರುಗಳನ್ನು ನಿಲ್ಲಿಸುವುದಕ್ಕೆ ಪಾರ್ಕಿಂಗ್‌ ವ್ಯವಸ್ಥೆ ಸೇರಿ ಅನೇಕ ವಿಶೇಷ ಸೌಲಭ್ಯಗಳಿವೆಯಂತೆ.

ಕಳೆದ ವರ್ಷ ಮಾಧುರಿ ಇದೇ ಪ್ರಾಜೆಕ್ಟ್‌ನ 29ನೇ ಮಹಡಿಯಲ್ಲಿ ಮನೆಯೊಂದನ್ನು ತಿಂಗಳಿಗೆ 12.5 ಲಕ್ಷ ರೂ. ಬಾಡಿಗೆಯಂತೆ, 3 ವರ್ಷಕ್ಕೆ ಲೀಸ್‌ಗೆ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next