ಮುಂಬಯಿ: ಬಾಲಿವುಡ್ ನಟಿ ಕಂಗನಾ ರಣೌತ್ ತಮ್ಮ ಮುಂಬರುವ ಸಿನಿಮಾ “ಎಮರ್ಜೆನ್ಸಿ’ಯ ಚಿತ್ರೀಕರಣವನ್ನು ಸಂಸತ್ ಭವನದೊಳಗೆ ಮಾಡಲು ಅವಕಾಶ ಕೋರಿ ಲೋಕಸಭೆ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಆದರೆ ಖಾಸಗಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಸಿಗುವ ಸಾಧ್ಯತೆ ತೀರ ಕಡಿಮೆ. ದೂರದರ್ಶನ ಮತ್ತು ಸಂಸತ್ ಟಿವಿಗೆ ಮಾತ್ರ ಸಂಸತ್ ಕಲಾಪಗಳು, ಇತರೆ ಕಾರ್ಯಕ್ರಮಗಳನ್ನು ಸೆರೆಹಿಡಿಯಲು ಅನುಮತಿ ಇದೆ. ಕಂಗನಾ ಅವರ ನಿರ್ದೇಶನ, ನಿರ್ಮಾಣ ಮತ್ತು ಕಥೆಯಲ್ಲಿ ಮೂಡಿಬರುತ್ತಿರುವ “ಎಮರ್ಜೆನ್ಸಿ’ ಚಿತ್ರದ ಚಿತ್ರೀಕರಣ ಜೂನ್‌ನಲ್ಲಿ ಆರಂಭವಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದಟ್ಟ ಮಂಜು: ಹರ್ಯಾಣ ಹೆದ್ದಾರಿಯಲ್ಲಿ ಸರಣಿ ಅಪಘಾತ, ನಾಲ್ವರ ಸ್ಥಿತಿ ಗಂಭೀರ