Advertisement
ರಣವೀರ್ ಸಿಂಗ್ ಅವರ ಬದುಕಿನ ಕೆಲ ವಿಶೇಷ ಸಂಗತಿಗಳು ಇಲ್ಲಿವೆ..
- ಇಂದು ರಣ್ವೀರ್ ಸಿಂಗ್ ಬಾಲಿವುಡ್ ನಲ್ಲಿ ಒಬ್ಬ ಸ್ಟಾರ್ ನಟನಾಗಿದ್ದಾರೆ. ರಣವೀರ್ ಸಿಂಗ್ ಪ್ರತಿಷ್ಠಿತ ಇಂಡಿಯಾನಾ ವಿಶ್ವವಿದ್ಯಾನಿಲಯ, ಬ್ಲೂಮಿಂಗ್ಟನ್, ಯುಎಸ್ಎಯಿಂದ ಪದವಿಯನ್ನು ಪಡೆದರು. ಅವರು ಅಲ್ಲಿಂದ ಕಲಾ ಪದವಿಯನ್ನು ಪಡೆದಿದ್ದಾರೆ.
- ರಣ್ ವೀರ್ ಸಿಂಗ್ ಇಂದು ಬಣ್ಣದ ಲೋಕದಲ್ಲಿ ಮಿಂಚುವ ತಾರೆಯಾಗಿದ್ದಾರೆ. ಅವರ ಸಿನಿಮಾಗಳಿಗಾಗಿಯೇ ಕಾದು ಕೂರುವ ಪ್ರೇಕ್ಷಕರಿದ್ದಾರೆ. ಆದರೆ ಅವರು ನಟನೆಗೆ ಬರುವ ಮುನ್ನ ಸ್ಟಾರ್ ಸ್ಟಾರ್‌ಬಕ್ಸ್ ಆಹಾರ ಪರಿಚಾರಕನಾಗಿ (food attendant) ಕೆಲಸವನ್ನು ಮಾಡುತ್ತಿದ್ದರು. ಇದಲ್ಲದೇ ಎಕ್ಸ್ ಟ್ರಾ ಹಣ ಸಂಪಾದಿಸಲು ಬಟರ್ ಚಿಕನ್ ತಯಾರಿಸಿ ಮಾರಾಟ ಮಾಡುತ್ತಿದ್ದರು.ಬಟರ್ ಚಿಕನ್ ಇಂದಿಗೂ ರಣ್ ವೀರ್ ಅವರು ಇಷ್ಟಪಡುವ ಭಕ್ಷ್ಯವಾಗಿದೆ.
- ರಣವೀರ್ ಸಿಂಗ್ ಅವರ ಪೂರ್ಣ ಹೆಸರು ರಣವೀರ್ ಸಿಂಗ್ ಭಾವನಾನಿ. ಬಣ್ಣದ ಲೋಕಕ್ಕೆ ಬಂದ ಬಳಿಕ ಅವರು ತನ್ನ ಹೆಸರಿನಿಂದ ಭಾವನಾನಿ ಎನ್ನುವ ಉಪನಾಮವನ್ನಯ ತೆಗೆದರು.
- ರಣವೀರ್ ಸಿಂಗ್ ‘ಬ್ಯಾಂಡ್ ಬಾಜಾ ಬಾರಾತ್’ಸಿನಿಮಾದಲ್ಲಿ ಬಿಟ್ಟೂ ಶರ್ಮಾ ಪಾತ್ರವನ್ನು ನಿರ್ವಹಿಸಿದರು. ಬಿಟ್ಟೂ ಪಾತ್ರ ಪರ್ಫೆಕ್ಟ್ ಆಗಿ ಮೂಡಿಬರಲು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅವರು ಬಿಟ್ಟೂ ಶರ್ಮಾ ಎಂಬ ಹೆಸರಿನಲ್ಲಿ ತರಗತಿಗಳಿಗೆ ಹಾಜರಾಗಿದ್ದರು.
- ತನ್ನ ಸ್ನೇಹಿತರಿಗಾಗಿ ಸದಾ ಮಿಡಿಯಯುವ ರಣ್ ವೀರ್ ಸಿಂಗ್ ಅವರು ‘ಇಂಕ್‌ಇಂಕ್ ರೆಕಾರ್ಡ್ಸ್’ ಹೆಸರಿನಲ್ಲಿ ತಮ್ಮದೇ ಆದ ಇಂಡಿಪೆಂಡೆಂಟ್ ಮ್ಯೂಸಿಕ್ ಲೇಬಲ್ ನ್ನು ಪ್ರಾರಂಭಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಸ್ನೇಹಿತ ನವ್ಜಾರ್ ಎರಾನಿ ಅವರೊಂದಿಗೆ ಇದನ್ನು ಪ್ರಾರಂಭಿಸಿದ್ದಾರೆ.
- ರಣ್ ವೀರ್ ನಟನಾ ಕ್ಷೇತ್ರಕ್ಕೆ ಕಾಲಿಡುವ ಬಹು ಸಮಯಯದ ಹಿಂದೆ , ಜಾಹೀರಾತು ಏಜೆನ್ಸಿಯಲ್ಲಿ ಕಾಪಿರೈಟರ್ ಆಗಿ ಕೆಲಸ ಮಾಡುತ್ತಿದ್ದರು.
- ಅನುರಾಗ್ ಕಶ್ಯಪ್ ಅವರ ‘ಬಾಂಬೆ ವೆಲ್ವೆಟ್ʼಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ರಣ್ ವೀರ್ ಸಿಂಗ್ ಅವರು. ಆದರೆ ಆ ಬಳಿಕ ರಣ್ಬೀರ್ ಕಪೂರ್ ಅವರನ್ನು ಚಿತ್ರದ ಪ್ರಧಾನ ಪಾತ್ರಕ್ಕೆ ಆಯ್ಕೆ ಮಾಡಲಾಯಿತು.
- ‘ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ’ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ರಣವೀರ್ ಸಿಂಗ್ ಅವರು ವಿಶ್ವ-ಪ್ರಸಿದ್ಧ ಲಾಯ್ಡ್ ಸ್ಟೀವನ್ಸ್ ಅವರೊಂದಿಗೆ 12 ವಾರಗಳ ಸಂಪೂರ್ಣ ರೂಪಾಂತರ ಕಾರ್ಯಕ್ರಮಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
- ‘ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ’ ಚಿತ್ರದ ಸೂಪರ್‌ಹಿಟ್ ಟ್ರ್ಯಾಕ್ ‘ತತ್ತಡ್ ತತ್ತಡ್ ‘. ಚಿತ್ರೀಕರಣದ ಸಮಯದಲ್ಲಿ, ರಣವೀರ್ ಸಿಂಗ್ 30 ‘ಕೆಡಿಯಾಸ್’ (ರಾಜಸ್ಥಾನಿ ಉಡುಗೆ) ಧರಿಸಲು ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ರಣ್ ವೀರ ಅವರಿಗೆ ಒಂದು ಜಾಕೆಟ್ ಮಾತ್ರವಿರಲಿ ಎಂದಿದ್ದರು.
- ರಣ್ ವೀರ್ ಸಿಂಗ್ ಅವರು ಪಾತ್ರಕ್ಕಾಗಿ ಎಂತಹ ಡೆಡಿಕೇಟ್ ಆಗಬಲ್ಲರು ಮಾಡಬಲ್ಲರು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಅವರು ನಟಿಸಿರುವ ʼಪದ್ಮಾವತ್ʼ ಚಿತ್ರ. ಈ ಚಿತ್ರದಲ್ಲಿ ರಣ್ ವೀರ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರ ಪರ್ಫೆಕ್ಟ್ ಆಗಿ ಮೂಡಿಬರಲು ಮೂರು ವಾರಗಳ ಕಾಲ ಅಪಾರ್ಟ್ಮೆಂಟ್ ನಲ್ಲಿ ತನ್ನನ್ನು ತಾನೇ ಲಾಕ್ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಮಾಂಸವನ್ನು ಸೇವಿಸುತ್ತಿದ್ದರು ಎಂದು ವರದಿಗಳು ಹೇಳಿವೆ.
- ಒಂದು ಬಾರಿ ರಣವೀರ್ ಸಿಂಗ್ ಅವರು ತರಗತಿಯಿಂದ ಅಮಾನತುಗೊಂಡಿದ್ದರು. ಅದಕ್ಕೆ ಕಾರಣ ಅವರು ತರಗತಿ ನಡೆಯುತ್ತಿರುವಾಗ ಶಾರುಖ್ ಖಾನ್-ಮನೀಶಾ ಕೊಯಿರಾಲಾ-ಪ್ರೀತಿ ಜಿಂಟಾ ಅಭಿನಯದ ‘ದಿಲ್ ಸೇ’ ಚಿತ್ರದ ‘ಚೈಯಾ ಚೈಯಾ’ ಹಾಡನ್ನು ಕೇಳುತ್ತಿದ್ದರು ಎನ್ನುವುದು.