Advertisement

ಬೊಯಿಸರ್‌ ಸಾರ್ವಜನಿಕ ಗಣೇಶೋತ್ಸವ ಮಂಡಳಿ: ಗಣೇಶೋತ್ಸವ ಸಮಾಪ್ತಿ

04:37 PM Sep 25, 2018 | Team Udayavani |

ಬೊಯಿಸರ್‌: ಬೊಯಿಸರ್‌ ರೈಲ್ವೇ ಸ್ಟೇಷನ್‌ ಪಕ್ಕದಲ್ಲಿನ ಸಾರ್ವಜನಿಕ ಗಣೇಶೋತ್ಸವ ಮಂಡಲದ 94 ನೇ ವಾರ್ಷಿಕ ಗಣೇಶೋತ್ಸವು ಸೆ. 13ರಿಂದ ಸೆ. 23 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.

Advertisement

ಸುತ್ತಮುತ್ತ ದಟ್ಟ ಕಾಡುಗಳಿಂದ ಆವೃತವಾಗಿ ಸಣ್ಣ ಹಳ್ಳಿಯ ಪ್ರದೇಶವಾಗಿದ್ದ ಬೊಯಿಸರ್‌ನಲ್ಲಿ ಸ್ವಾತಂತ್ರÂ ಪೂರ್ವದಲ್ಲಿ ಅಂದರೆ  1925 ರಲ್ಲಿ ಆರಂಭಿಸಲ್ಪಟ್ಟ ಇಲ್ಲಿನ ಗಣೇಶೋತ್ಸವ ಮಂಡಲಕ್ಕೆ ಪ್ರಸ್ತುತ 95 ರ ಸಂಭ್ರಮ. ಆರಂಭದ ಕಾಲದಿಂದ ಇಂದಿನವರೆಗೂ ಸ್ಥಳೀಯ ಮುಸ್ಲಿಂ ಬಾಂಧವರೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು,  ಭಾವೈಕ್ಯದ ವಾತಾವರಣ ಉಳಿದುಕೊಂಡು ಬಂದಿದೆ.

11 ದಿನಗಳ ಕಾಲ  ಜರಗಿದ ಗಣೇಶೋತ್ಸವದಲ್ಲಿ ನಿತ್ಯ ಪೂಜಾಧಿ ಕಾರ್ಯಕ್ರಮಗಳು ಅಸಂಖ್ಯಾತ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು. ಫೆ. 22 ರಂದು ಜರಗಿದ ವಿಶೇಷ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಗಣೇಶೋತ್ಸವ ವ್ಯವಸ್ಥಾಪಕ ಮಂಡಳಿಯ ಬಿಕ್ರಿಗುತ್ತು ಜಗದೀಶ ಶೆಟ್ಟಿ, ಲಯನ್‌ ವಿಜಯ್‌ ಪಾಠಕ್‌, ಅರವಿಂದ್‌,  ಉಪೇಂದ್ರ ಠಾಕುರ್‌, ದಿನೇಶ್‌ ಸಂಖೆ, ಸತ್ಯಾ ಕೋಟ್ಯಾನ್‌, ರಮಾನಂದ ಪೂಜಾರಿ ಹಾಗೂ ಪಾಲ^ರ್‌ ತಾಲೂಕು ಹೊಟೇಲ್‌ ಓನರ್ಸ್‌ ಅಸೋಸಿಯೇ ಶನ್‌ ಅಧ್ಯಕ್ಷರಾದ ರಘುರಾಮ ರೈ, ಸ್ಥಳೀಯ ಉದ್ಯಮಿಗಳು, ತುಳು-ಕನ್ನ ಡಿಗರು ಹಾಗೂ ಭಕ್ತಾ ದಿಗಳು ಅಧಿಕ ಸಂಖ್ಯೆಯಲ್ಲಿ  ಭಾಗವಹಿಸಿದ್ದರು. 

ಚಿತ್ರ-ವರದಿ : ಪಿ. ಆರ್‌. ರವಿಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next