Advertisement

ಲ್ಯಾಂಡಿಂಗ್‌ ವೇಳೆ ನದಿಗೆ ಇಳಿದ 137 ಪ್ರಯಾಣಿಕರಿದ್ದ ವಿಮಾನ!

10:01 AM May 05, 2019 | Vishnu Das |

ಫ್ಲೋರಿಡಾ: 137 ಜನರು ಪ್ರಯಾಣಿಸುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್‌ ವೇಳೆ ನದಿಗೆ ಇಳಿದ ಘಟನೆ ಶುಕ್ರವಾರ ರಾತ್ರಿ  ನಡೆದಿದೆ.

Advertisement

ಕ್ಯೂಬಾದಿಂದ ಆಗಮಿಸಿದ ಬೋಯಿಂಗ್‌ 737 ವಿಮಾನ ರಾತ್ರಿ 9.30 ರ ವೇಳೆಗೆ ಅಮೆರಿಕದ ಗ್ವಾಂಟಾನಾಮೋದ ನೌಕಾ ನೆಲೆಯಲ್ಲಿ ಇಳಿಯುವಾಗ ಆಯ ತಪ್ಪಿನದಿಗೆ ಇಳಿದಿದೆ.

ವಿಮಾನದಲ್ಲಿದ್ದ ಎಲ್ಲರೂ ಜೀವಂತವಾಗಿದ್ದು, ಸಿಬಂದಿಗಳು ಜೆಟ್‌ ಇಂಧನವನ್ನು ನಿಯಂತ್ರಿಸಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಾಕ್ಸನ್‌ವಿಲ್ಲೆಯ ಮೇಯರ್‌ ಅವರು ಟ್ವೀಟ್‌ ಮಾಡಿ ದ್ದಾರೆ.

ವಿಮಾನ ಮುಳುಗಡೆಯಾಗಿಲ್ಲ ಎಂದು ಜಾಕ್ಸ್‌ ಶರೀಫ್ಸ್‌ ಕಚೇರಿ ಟ್ವೀಟ್‌ ಮಾಡಿದೆ.

ಮುಳುಗುತಜ್ಞರು ಸೇರಿದಂತೆ ರಕ್ಷಣಾ ಪಡೆಗಳು ಆಗಮಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

Advertisement

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next