Advertisement

flights; ಭಾರತದಲ್ಲಿ ಬೋಯಿಂಗ್‌ 737 ಬಿಡಿಭಾಗ ಕಾಣೆೆ: 1,300 ಫ್ಲೈಟ್‌ ಪರಿಶೀಲನೆ

01:05 AM Jan 10, 2024 | Team Udayavani |

ಹೊಸದಿಲ್ಲಿ: ಭಾರತದ ವಿಮಾನಗಳ ತಪಾಸಣೆ ವೇಳೆ ಬೋಯಿಂಗ್‌ ಕಂಪೆನಿಯ 737 ಮ್ಯಾಕ್ಸ್‌ ವಿಮಾನವೊಂದರ ವಾಷರ್‌ ಮತ್ತು ನಟ್‌ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಅಮೆರಿಕದ ವೈಮಾನಿಕ ದಿಗ್ಗಜ ಬೋಯಿಂಗ್‌, ವಿಶ್ವಾದ್ಯಂತ ಕಾರ್ಯಾಚರಿಸುತ್ತಿರುವ ತನ್ನ ಎಲ್ಲ 737 ಮ್ಯಾಕ್ಸ್‌ ವಿಮಾನಗಳನ್ನು 24 ಗಂಟೆಗಳೊಳಗಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದೆ. ಹಾರ್ಡ್‌ವೇರ್‌ಗಳು ಲೂಸ್‌ ಆಗಿದ್ದರೆ ಕೂಡಲೇ ಸರಿಪಡಿಸಿ ಎಂದೂ ನಿರ್ದೇಶನ ನೀಡಿದೆ.

Advertisement

ಭಾರತದ ಯಾವ ವೈಮಾನಿಕ ಸಂಸ್ಥೆಯಲ್ಲಿನ ವಿಮಾನದಲ್ಲಿ ವಾಷರ್‌ ಕಾಣೆಯಾಗಿದೆ ಎಂಬುದನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಸ್ಪಷ್ಟಪಡಿಸಿಲ್ಲ. ಭಾರತದಲ್ಲಿ ಮೂರು ವೈಮಾನಿಕ ಸಂಸ್ಥೆಗಳು ಒಟ್ಟು 40 ಬೋಯಿಂಗ್‌ನ 737 ಮ್ಯಾಕ್ಸ್‌ ವಿಮಾನಗಳನ್ನು(ಆಕಾಶಾ ಏರ್‌, ಜೆಟ್‌ ಏರ್‌ವೇಸ್‌, ಏರ್‌ಇಂಡಿಯಾ ಎಕ್ಸ್‌ಪ್ರಸ್‌) ಬಳಸುತ್ತಿವೆ. ವಿಶ್ವಾದ್ಯಂತ ಬೋಯಿಂಗ್‌ ಸಂಸ್ಥೆಯ 1300ರಷ್ಟು 737 ಮ್ಯಾಕ್ಸ್‌ ವಿಮಾನಗಳು ಕಾರ್ಯಾಚರಿಸುತ್ತಿವೆ. ಈಗ  ಇವೆ ಲ್ಲವೂ ಪರಿಶೀಲನೆಗೆ ಒಳಗಾಗ ಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next