Advertisement

DRDO ದಿಂದ ತಯಾರಾಯಿತು ವೈದ್ಯರ ಸುರಕ್ಷಾ ಉಡುಪು

10:11 AM Apr 01, 2020 | sudhir |

ಹೈದರಬಾದ್‌: ಕೋವಿಡ್‌ 19 ವಿರುದ್ಧ ಸೆಣಸಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಕಾರ್ಯಾಚರಣೆ ಬಗ್ಗೆ ಸಾಕಷ್ಟು ಜನರು ವೀಡಿಯೊಗಳ ಮೂಲಕ, ಟ್ರೋಲ್‌ ಪೇಜ್‌ಗಳ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Advertisement

ಇದರೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಡಿಆರ್‌ಡಿಒ) ಸಂಸ್ಥೆಯು ಒಂದು ಹೆಜ್ಜೆ ಮಂದಕ್ಕೆ ಯೋಚಿಸುತ್ತಿದ್ದು, ವೈದ್ಯರಿಗೆ‌ ಅನುಕೂಲವಾಗುವಂತಹ ಉಡುಪು (ಬಾಡಿ ಸೂಟ್‌) ಅಭಿವೃದ್ಧಿಪಡಿಸಿದೆ.

ಅವರ ಸುರಕ್ಷತೆಯೂ ಆದ್ಯತೆ ಆಗಬೇಕು
ಕೋವಿಡ್‌ -19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬಂದಿಯ ಸುರಕ್ಷತೆಯೂ ಆದ್ಯತೆ ಆಗಬೇಕು. ಈ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಈ ಉಡುಪನ್ನು ಸಿದ್ಧಪಡಿಸಿದ್ದು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಸ್ವತ್ಛತಾ ಕಾರ್ಮಿಕರಿಗೆ ರಕ್ಷಣೆ ಒದಗಿಸಲಿದೆ ಎಂದು ಡಿಆರ್‌ಡಿಒ ತಿಳಿಸಿದೆ.

ವೈದ್ಯರಿಗೆ ನೆರವು ನೀಡಲು ಬಂದ ಯಂತ್ರ ಮಾನವ
ತಮಿಳುನಾಡು: ತಮಿಳುನಾಡಿನಲ್ಲಿ ಕೋವಿಡ್‌ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ರೊಬೋಟ್‌ ಗಳನ್ನು ಬಳಸಲು ಪ್ರಯತ್ನಿಸಲಾಗುತ್ತಿದೆ.
ಕೋವಿಡ್‌- 19 ನಿಂದ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಔಷಧಗಳನ್ನು ಈ ರೊಬೋಟ್‌ಗಳು ನೀಡಲಿವೆ.

ತಿರುಚ್ಚಿಯ ಖಾಸಗಿ ಸಾಫ್ಟ್‌ವೇರ್‌ ಕಂಪನಿಯೊಂದು ನಗರದ ಸರಕಾರಿ ಆಸ್ಪತ್ರೆಗೆ ರೊಬೋಟ್‌ಗಳನ್ನು ದೇಣಿಗೆ ರೂಪದಲ್ಲಿ ನೀಡಿದೆ.

Advertisement

ಈ 4 ರೋಬೋಟ್‌ಗಳು ಪ್ರಸ್ತುತ ಬಳಕೆಗೆ ಸಿದ್ಧವಾಗಿದ್ದು, ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿದರೆ ರೊಬೋಟ್‌ಗಳನ್ನು ಬಳಸುತ್ತೇವೆ ಎಂದು ಆಸ್ಪತ್ರೆಯ ಡೀನ್‌ ತಿಳಿಸಿದ್ದಾರೆ.

ಉಪಯೋಗಕ್ಕೆ ಸೂಕ್ತ
ಇದು ತೊಳೆಯಬಹದಾದ ಉಡುಪಾಗಿದ್ದು, ಹಲವು ಪರೀಕ್ಷೆಗಳಿಗೆ ಒಳಪಟ್ಟು, ಉಪಯೋಗಕ್ಕೆ ಸೂಕ್ತವೇ ಎಂದು ಪರಿಶೀಲಿಸಲಾಗಿದೆ. ಪ್ರಾಯೋಗಿಕವಾಗಿ ದೃಢವಾದ ಮೇಲೆ ಇದರ ಬಳಕೆಗೆ ಮುಂದಾಗಿದ್ದೇವೆ ಎಂದು ಸಂಸ್ಥೆ ಹೇಳಿದೆ. ಉಡುಪಲ್ಲದೇ, ವೆಂಟಿಲೇಟರ್‌, ಎನ್‌ 99 ಮಾÓR… ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಗಳನ್ನೂ ಸಂಸ್ಥೆಯು ಅಭಿವೃದ್ಧಿ ಪಡಿಸಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next