ನವದೆಹಲಿ:ದೆಹಲಿ ಬಾರ್ ಅಸೋಸಿಯೇಶನ್ ನ ಉದ್ಯೋಗಿಯೊಬ್ಬನ ಶವ ತೀಸ್ ಹಜಾರಿ ಕೋರ್ಟ್ ನೊಳಗೆ ಗುರುವಾರ ಪತ್ತೆಯಾಗಿರುವ ಘಟನೆ ನಡೆದಿದೆ. ವ್ಯಕ್ತಿಯನ್ನು 35 ವರ್ಷದ ಮನೋಜ್ ಎಂದು ಗುರುತಿಸಲಾಗಿದೆ. ನ್ಯಾಯಾಲಯದ ಪಶ್ಚಿಮ ಭಾಗದ 192ನೇ ಕೊಠಡಿಯ ಹೊರಭಾಗದಲ್ಲಿ ಶವ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬ್ಯಾಂಕ್ ಮಾಹಿತಿ ಕೊಡದಿದ್ರೂ ಹಣ ಕಳವು : ಸಾರ್ವಜನಿಕರೇ ಎಚ್ಚರ,112 ಗೆ ಕರೆ ಮಾಡಿ
ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ದೇಹದ ಹೊರಭಾಗದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಮನೋಜ್ ಟಿಬಿ ರೋಗಿಯಾಗಿದ್ದು, ವಿಪರೀತ ಮದ್ಯವ್ಯಸನಿಯಾಗಿರುವುದಾಗಿ ವರದಿ ಹೇಳಿದೆ.
ಕೋರ್ಟ್ ಒಳಗಿನ ಕಸದ ಬುಟ್ಟಿಯಲ್ಲಿ ರಕ್ತದ ವಾಂತಿ ಮಾಡಿಕೊಂಡಿರುವುದು ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮನೋಜ್ ಬಾರ್ ಅಸೋಸಿಯೇಶನ್ ನ ಗುತ್ತಿಗೆ ಆಧಾರದ ಉದ್ಯೋಗಿದ್ದು, ಕೋರ್ಟ್ ನಲ್ಲಿ ರಾತ್ರಿ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಎಂದು ವರದಿ ಹೇಳಿದೆ.