Advertisement

ಎಸ್.ಎಂ.ಕೆ. ಅಳಿಯ ಸಿದ್ದಾರ್ಥ ಮೃತದೇಹ ಪತ್ತೆ : ಊಹಾಪೋಹಕ್ಕೆ ತೆರೆ

09:52 AM Aug 01, 2019 | Nagendra Trasi |

ಮಂಗಳೂರು: ಕಳೆದ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ ಅವರ ಮೃತದೇಹ ನೇತ್ರಾವತಿ ನದಿ ನೀರಿನ ಹೊಯಿಗೆ ಬಜಾರ್ ಬಳಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಇದರೊಂದಿಗೆ ಸಿದ್ದಾರ್ಥ ನಾಪತ್ತೆ ಪ್ರಕರಣದ ಗೊಂದಲಕ್ಕೆ ತೆರೆ ಬಿದ್ದಿದೆ.

Advertisement

ನೇತ್ರಾವತಿ ಸಮೀಪ ಸೋಮವಾರ ಸಂಜೆಯಿಂದ ಸಿದ್ದಾರ್ಥ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರನ್ನು ಅಪಹರಿಸಲಾಗಿತ್ತೇ ಅಥವಾ ಆತ್ಮಹತ್ಯೆಗೆ ಶರಣಾಗಿದ್ದರೇ ಎಂಬಿತ್ಯಾದಿ ಅನುಮಾನಗಳು ವ್ಯಕ್ತವಾಗಿದ್ದವು. ಅಗ್ನಿಶಾಮಕ ದಳ, ಹೋವರ್ ಕ್ರಾಫ್ಟ್ ಎನ್ ಡಿಆರ್ ಎಫ್ ಸತತ ಶೋಧ ಕಾರ್ಯಾಚರಣೆ ನಡೆಸಿದ್ದವು.

ಪೊಲೀಸರು ಕೂಡಾ ಸಿದ್ದಾರ್ಥ ಕಾರು ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಏತನ್ಮಧ್ಯೆ ಕಾಫಿ ಡೇ ಸಂಸ್ಥೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಇಂದು ಬೆಳಗ್ಗೆ ನೇತ್ರಾವತಿ ನದಿಯ ಹೊಯ್ಗೆ ಬಜಾರ್ ಕಡಲ ತೀರದಲ್ಲಿ ಮೃತದೇಹವನ್ನು ಮೀನುಗಾರರ ಗಮನಕ್ಕೆ ಬಂದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

Latest Updates:

– ಸಿದ್ದಾರ್ಥ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಅವರ ಜನ್ಮಸ್ಥಳ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿ ಎಸ್ಟೇಟ್ ಗೆ ಕೊಂಡೊಯ್ಯಲಾಗುವುದು.

Advertisement

– ಮೃತದೇಹವನ್ನು ಇದೀಗ ನಗರದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಸಿದ್ದಾರ್ಥ್ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.

– ಕೊನೆಗೂ ಫಲನೀಡದ ನಿರಂತರ 36 ಗಂಟೆಗಳ ಶೋಧ ಕಾರ್ಯಾಚರಣೆ.

– ಮಂಗಳೂರಿನ ಹೊಯ್ಗೆ ಬಝಾರ್ ಸಮುದ್ರ ಕಿನಾರೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆ ಆಯ್ತು ಸಿದ್ದಾರ್ಥ್ ಅವರ ಶವ.

– ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದಾರೆ. ಸಿದ್ದಾರ್ಥ್ ಪ್ಯಾಂಟ್ ಜೇಬಿನಲ್ಲಿ ಅವರ ಹಳೆಯ ಮೊಬೈಲ್ ಕೂಡಾ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next