Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ
Team Udayavani, Jan 16, 2025, 8:58 AM IST
ಹೊಸದಿಲ್ಲಿ: ಹಲವಾರು ದಶಕಗಳಿಂದ ಮನುಷ್ಯನ ದೇಹದ ಬೊಜ್ಜಿನ ಪ್ರಮಾಣ ಅಳೆಯಲು “ಬಾಡಿ ಮಾಸ್ ಇಂಡೆಕ್(ಬಿಎಂಐ)’ ಎಂಬ ಪರೀಕ್ಷೆಯನ್ನೇ ಅವಲಂಬಿಸಲಾಗಿದೆ. ಅದರಂತೆ ದೇಹದ ತೂಕ, ಎತ್ತರ, ವ್ಯಕ್ತಿಯ ವಯಸ್ಸು ಇತರ ಅಂಶಗಳ ಸರಾಸರಿಯಿಂದ ವ್ಯಕ್ತಿಯ ಬೊಜ್ಜಿನ ಪ್ರಮಾಣ ಲೆಕ್ಕ ಹಾಕಲಾಗುತ್ತದೆ.
ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ಈ ಪರೀಕ್ಷೆಯಲ್ಲಿ ಬೊಜ್ಜಿನ ನಿಖರತೆ ಪ್ರಮಾಣ ಕಡಿಮೆಯಿದೆ ಎನ್ನಲಾಗಿದೆ. “ಲ್ಯಾನ್ಸೆಟ್ ಡಯಾಬಿಟೀಸ್ ಆ್ಯಂಡ್ ಎಂಡೋಕ್ರೈನಾಲಜಿ’ಯಲ್ಲಿ ವರದಿ ಪ್ರಕಟಿಸಲಾಗಿದೆ.
ವ್ಯಕ್ತಿಯೊಬ್ಬನ ಬಿಎಂಐ ಅನ್ನು ಕೆ.ಜಿ/ಎಂ2 ಸೂತ್ರದ ಮೂಲಕ ಕಂಡುಹಿಡಿಯ ಲಾಗುತ್ತದೆ. ಅದರ ಪ್ರಕಾರ ಬಿಎಂಐ ಪ್ರಮಾಣ 30ಕ್ಕಿಂತ ಹೆಚ್ಚು ಬಂದರೆ ಆ ವ್ಯಕ್ತಿಗೆ ಬೊಜ್ಜು ಇದೆ ಎಂದು ಪರಿಗಣಿಸ ಲಾಗುತ್ತಿತ್ತು. ಆದರೆ ಲ್ಯಾನ್ಸೆಟ್ ವಾದ ದಂತೆ ಬೊಜ್ಜು ಇರುವ ಎಲ್ಲ ವ್ಯಕ್ತಿಗಳ ಬಿಎಂಐ 30ಕ್ಕಿಂತ ಹೆಚ್ಚಿರುವುದಿಲ್ಲ. ಅಲ್ಲದೇ ಅದಕ್ಕಿಂತ ಕಡಿಮೆ ಬಿಎಂಐ ಇರುವ ವ್ಯಕ್ತಿಗಳಲ್ಲೂ ಬೊಜ್ಜು ಕಂಡು ಬಂದಿದ್ದು, ಬೊಜ್ಜಿನ ಗುಣ ಲಕ್ಷಣಗಳನ್ನೇ ಹೊಂದಿರುವುದಿಲ್ಲ. ಹಾಗಾಗಿ ವ್ಯಕ್ತಿಯ ಬೊಜ್ಜಿನ ಪ್ರಮಾಣ ಕಂಡುಹಿಡಿಯಲು ಬಿಎಂಐ ಒಂದನ್ನೇ ಅವಲಂಬಿಸಬಾರದು ಎಂಬುದು ಲ್ಯಾನ್ಸೆಟ್ ವಾದವಾಗಿದೆ.
ಇದನ್ನೂ ಓದಿ: Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್ ಅಸ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Invest Karnataka 2025:ವಾಣಿಜ್ಯ ನಗರಿಯ ಉದ್ಯಮ ದಿಗ್ಗಜರ ಜೊತೆ ಸಚಿವ ಎಂ. ಬಿ. ಪಾಟೀಲ ಚರ್ಚೆ
Maha Kumbh Mela: ಮೌನಿ ಅಮಾವಾಸ್ಯೆ ಶಾಹಿ ಸ್ನಾನಕ್ಕಾಗಿ ಜನಸಾಗರ…ಡ್ರೋನ್ ನಲ್ಲಿ ಸೆರೆ!
Mahakumbh Mela:ಬಾಗಿಲು ಲಾಕ್ ಆಗಿದ್ದಕ್ಕೆ ಆಕ್ರೋಶಗೊಂಡು ವಿಶೇಷ ರೈಲಿನ ಮೇಲೆ ಕಲ್ಲುತೂರಾಟ!
Video: ರಿವರ್ಸ್ ತೆಗೆಯುವ ವೇಳೆ ಅವಾಂತರ… ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಕಾರು
Uttar Pradeshದಲ್ಲಿ ಮತ್ತೊಂದು ದುರಂತ: ಲಡ್ಡು ಮಹೋತ್ಸವದಲ್ಲಿ ಕಾಲ್ತುಳಿತ-7 ಮಂದಿ ಸಾ*ವು