ಗಂಗೊಳ್ಳಿ: ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಅಪರಿಚಿತ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಘಟನ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Advertisement
ಹೆಡ್‌ಕಾನ್‌ಸ್ಟೆಬಲ್ ಚಂದ್ರಶೇಖರ್, ಗಂಗೊಳ್ಳಿ 24*7 ಆ್ಯಂಬುಲೆನ್ಸ್‌ನ ಚಾಲಕ ಇಬ್ರಾಹಿಂ, ಕೃಷ್ಣ, ಸ್ವಯಂಸೇವಕರಾದ ನದೀಂ, ಸಫ್ವಾನ್ ಅವರು ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲು ಸಹಕರಿಸಿದರು.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.