Advertisement

ಪುತ್ತೂರು ದೇವಳ ಬಳಿಯ ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

12:02 PM Dec 30, 2021 | Team Udayavani |

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಭಾಗದ ಕಂಬಳಗದ್ದೆಯಲ್ಲಿರುವ ಬಾವಿಗೆ ವ್ಯಕ್ತಿಯೊಬ್ಬರು ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

Advertisement

ಪುತ್ತೂರು ದರ್ಬೆ ನಿವಾಸಿ, ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು (50 ವರ್ಷ) ಮೃತಪಟ್ಟವರು.

ವ್ಯಕ್ತಿಯ ಚಪ್ಪಲಿ, ಸ್ಕೂಟರ್ ಬಾವಿ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಪೊಲೀಸರು ಕೆರೆ ಪರಿಶೀಲನೆ ನಡೆಸಿದರು. ಪುತ್ತೂರು ಅಗ್ನಿಶಾಮಕದಳದ ರುಕ್ಮಯ ಗೌಡರವರ ನೇತೃತ್ವದಲ್ಲಿ ಕೃಷ್ಣ ಜಾಲಿಬೇರ, ತೌಸಿಪ್ ಯಾನೆ ಮುಲ್ಲಾ ಅವರು ಗರುಡಪಾತಾಳದ ಮೂಲಕ ಪತ್ತೆಮಾಡಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

ಇದನ್ನೂ ಓದಿ:ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಮತ್ತೆ ಜಯಭೇರಿ

ಮನೋಹರ್ ಪ್ರಭು ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪತ್ನಿ, ಮತ್ತು ಎರಡು ಮಕ್ಕಳು ಬಂಧುಬಳಗವನ್ನು ಅಗಲಿದ್ದಾರೆ

Advertisement

ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next