Advertisement

ಶ್ರೀನಿವಾಸ ಸಾಗರ ಜಲಾಶಯ ಬಳಿ ನೀರುಪಾಲಾಗಿದ್ದ ಯುವಕರ ಮೃತದೇಹಗಳು ಪತ್ತೆ

05:55 PM Sep 11, 2022 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಬಳಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ಯುವಕನ  ಮೃತದೇಹಗಳು ಪತ್ತೆಯಾಗಿದೆ.

Advertisement

ಇದನ್ನೂ ಓದಿ:ಬನಹಟ್ಟಿ ಕಾಡಸಿದ್ಧೇಶ್ವರ ರಥಕ್ಕೆ 153 ವರ್ಷದ ಇತಿಹಾಸ…!

ಶನಿವಾರದಂದು ಶ್ರೀನಿವಾಸ ಸಾಗರ ಜಲಾಶಯವನ್ನು ವೀಕ್ಷಣೆ ಮಾಡಲು ತೆರಳಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಈಜಾಡಲು ಹೋಗಿ ಮುಳುಗಿದ್ದಾರೆ. ಆತನನು ರಕ್ಷಣೆ ಮಾಡಲು ಹೋಗಿದ್ದ ಗೌರಿಬಿದನೂರು ತಾಲೂಕಿನ ಯುವಕ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಸಂಜೆ 7 ಗಂಟೆವರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಕಾರ್ಯಚರಣೆ ನಡೆಸಿದ್ದರು ಆದರೆ ಮೃತದೇಹಳು ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದ ತಂಡವು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಮೃತದೇಹಗಳು ಪತ್ತೆಆಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ತಿಳಿಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ಯುವಕನೋರ್ವ ಇದೇ ಶ್ರೀನಿವಾಸ ಸಾಗರ ಕೆರೆ ಕೋಡಿಹರಿಯುತಿದ್ದ ಕಟ್ಟೆ ಮೇಲೆ ಕೋಡಿಹರಿದ ನೀರಿನ ವಿರುದ್ದ ದಿಕ್ಕಿಗೆ ಕೋತಿರಾಮನಂತೆ ಸಾಹಸ ಮಾಡಲುಹೋಗಿ ಪ್ರಪಾತಕ್ಕೆ ಬಿದ್ದು ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದ. ಅದಕ್ಕೂ ಮುನ್ನ ವರ್ಷದ ಹಿಂದೆಯಷ್ಟೆ ಶ್ರೀನಿವಾಸಸಾಗರ ಕೆರೆಯಲ್ಲಿ ಈಜಾಡಲೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಹೀಗೆ ಶ್ರೀನಿವಾಸ ಸಾಗರದ ಕೆರೆಯಂಗಳ  ಸಾವುಗಳ ಸೂತಕದ ಜಾಗ ಎಂಬಂತಾಗಿದೆ.

Advertisement

ಚಿಕ್ಕಬಳ್ಳಾಪುರ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಇದೀಗ ಸಮೃದ್ದಿ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯುತಿದ್ದು, ಅವುಗಳ ಪೈಕಿ ಕೇತೇನಹಳ್ಳಿಯ ಜರಮೊಡಗು, ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮೊಡಗು ಶ್ರೀನಿವಾಸಸಾಗರ, ನಗರಕ್ಕೆ ಹೊಂದಿಕೊಂಡ ಕಂದವಾರ ಕೆರೆ  ಹೀಗೆ ನಾನಾ ಕೆರೆ-ಕುಂಟೆಗಳು ತುಂಬಿ ಕೊಡಿ ಹರಿಯುತಿದ್ದು ನೀರಿನ ರಭಸಗಳನ್ನು ನೋಡಲು ಜನ ತಂಡೋಪತಂಡವಾಗಿ ಬರತೊಡಗಿದ್ದು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಥವಾ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next