Advertisement
ಹೀಗಾಗಿ, ಅವನು ಬಚಾವಾದ. ಅವನಿಗೆ ರಾಜಕೀಯ ಜೀವನದಲ್ಲಿ ಆಸಕ್ತಿ ಇರಲಿಲ್ಲ. ಬುದ್ಧನ ಬೋಧನೆ ಈ ಬಾಲಕನ ಮನಸ್ಸನ್ನು ಏಳನೆಯ ವಯಸ್ಸಿನÇÉೇ ಆಕರ್ಷಿಸಿತ್ತು. ಈ ಬಾಲಕನಿಗೆ ಒಬ್ಬ ಗುರು ದೊರೆತ. ಆತ ಒಬ್ಬ ಬೌದ್ಧಮಾರ್ಗದಲ್ಲಿ ನುರಿತ ಗುರು. ಅವನ ಹೆಸರು ಪ್ರಜ್ಞಾತಾರ. ಗುರುವಿನ ಪ್ರಭಾವದಿಂದ ರಾಜವಂಶದ ಬಾಲಕ ಬೌದ್ಧಭಿಕ್ಷುವಾದ, ಅವನಿಗೆ “ಬೋಧಿಧರ್ಮ’ ಎಂಬ ಹೆಸರು ಬಂತು. ಕ್ಷತ್ರಿಯ ತಂದೆಯ ಮರಣದ ಬಳಿಕ ಬೋಧಿಧರ್ಮ ಬುದ್ಧನ ಜೀವನ, ಸಂದೇಶವನ್ನು ದೇಶವಾಸಿಗಳ ನಡುವೆ ಹರಡತೊಡಗಿದ. ಗುರು ಅವನಿಗೆ, “ಚೀನಾ ದೇಶಕ್ಕೆ ಹೋಗಿ ಬೌದ್ಧಧರ್ಮದ ತತ್ವಗಳನ್ನು ಪ್ರಚಾರ ಮಾಡು’ ಎಂದಿದ್ದ. ಬೋಧಿಧರ್ಮ ಗುರುವಿನ ಆಣತಿ ಪಾಲಿಸಿದ. ಅವನಿಂದಾಗಿ ಬೌದ್ಧಧರ್ಮ ಚೀನಾದಲ್ಲಿ ಬೇರು ಬಿಟ್ಟಿತು.
ಬುದ್ಧನ ಒಂದು ಸುಂದರ ಹೋಲಿಕೆಯನ್ನು ಓಶೋ ಉಪನಿಷತ್ತಿನ ಬಳಿಕದ ಸಂದರ್ಭದಲ್ಲಿ ನೀಡಿ¨ªಾರೆ. ವೇದ ಒಳಗಿನ ನಿಗಿನಿಗಿ ಅಗ್ನಿಕುಂಡವನ್ನು ಸದಾ ಉರಿಸಿ ಎಂದು ಹೇಳಿಕೊಂಡಿತು. ನಂತರದ ಉಪನಿಷತ್ತಿನ ಆಚಾರ್ಯರು ಹಾಗೆಯೇ ತಮ್ಮೊಳಗೆ ಜ್ಞಾನದ ಬೆಂಕಿ ಹಚ್ಚಿಕೊಂಡು ವೇದದ ಬೆಳಕು ಹೊತ್ತು ಕುಣಿದಾಡಿದರು. ನಂತರ ಬುದ್ಧ ಕಾಣಿಸಿಕೊಂಡ, ಆ ವೇಳೆಗಾಗಲೇ ಬೆಂಕಿ ನಂದಿ ಹೋಗಿತ್ತು. ಬೂದಿ ಉಳಿದಿತ್ತು. ಕರ್ಮಕಾಂಡದ ಹೆಸರಿನಲ್ಲಿ ಈ ಬೂದಿಯನ್ನೇ ಜನ ಮುಖ್ಯ ಎಂದುಕೊಂಡಿದ್ದರು. ಬುದ್ಧ ಮತ್ತೆ ಒಳಗಿನ ಅಗ್ನಿಕಾರ್ಯದ ಸೂತ್ರ ತಿಳಿಸಿಕೊಡಲು ಹೋದ. ಆಗಿನ ಬುದ್ಧಿವಂತ ಜನ ಅವನನ್ನು “ವೇದಾಂತದ ವಿರೋಧಿ’ ಎಂದು ಕರೆದರು. ಬೂದಿ ಪಕ್ಷ ಮತ್ತು ಬೆಂಕಿ ಪಕ್ಷ ಎರಡೂ ನಮ್ಮಲ್ಲಿ ಇವೆ. ಎರಡು ಬೆಂಕಿ ಪಕ್ಷಗಳ ನಡುವೆ ಬಂದ ಬೂದಿ ಪಂಥದವರು ಒಳಗಿನ ದರ್ಶನವನ್ನು ಮರೆತು ಆಚರಣೆಗೆ ಮಾತ್ರ ಮಹತ್ವ ನೀಡಿದ್ದರು, ಗ್ರಂಥಗಳಿಗೆ ಮಹಣ್ತೀ ನೀಡಿದ್ದರು. ಚೀನಾದಲ್ಲಿ ಆದದ್ದೂ ಅದೇ. ಬೌದ್ಧಧರ್ಮದ ಕೆಲವು ಹಾಳೆಗಳು ಚೀನೀಯರ ಕೈಗೆ ಸಿಕ್ಕಿಬಿಟ್ಟಿದ್ದವು. ಅವರು ಆ ಹಾಳೆಗಳನ್ನೇ ಬೌದ್ಧಧರ್ಮ ಎಂದು ಭ್ರಮೆಗೆ ಒಳಗಾಗಿದ್ದರು. ಬೋಧಿಧರ್ಮ ಬಂದವನೇ “ಆ ಹಾಳೆಗಳು ಇರುವುದು ಬೆಳಕು ಕಾಣಲು’ ಎಂದ. ಸಾಂಕೇತಿಕವಾಗಿ ಆ ಹಾಳೆಗಳನ್ನು ಸುಟ್ಟು ಬೆಳಕಿನ ಸೂಡಿ ಮಾಡಿಕೊಟ್ಟ, ಅದೇ ಧ್ಯಾನಮಾರ್ಗ. ಥಟ್ಟನೆ ನಮ್ಮೊಳಗೆ ಗೋಚರಿಸುವ ಝೆನ್ ದಾರಿ. ಝೆನ್ ದಾರಿಯೂ ಅಲ್ಲ , ಅದೇ ಜೀವನ.
Related Articles
Advertisement
ಚೀನಾದ ರಾಜ ಮತ್ತು “ದ ಮೊ’ ನಡುವಿನ ಮಾತುಕತೆ ನೈಜ ಅಧ್ಯಾತ್ಮ ಎಷ್ಟು ನೇರಾನೇರ ಎಂಬುದರ ಜೀವಂತ ನಿದರ್ಶನ. ಚಕ್ರವರ್ತಿ “ವೊ’ ನನ್ನು “ದ ಮೊ’ ಅವನ ಅರಮನೆಯಲ್ಲಿ ಭೇಟಿಯಾದ. “ವೊ’ ಬೌದ್ಧಧರ್ಮಕ್ಕೆ ಅಂದರೆ ಮಹಾಯಾನಕ್ಕೆ ದಾನ ದತ್ತಿ ನೀಡಿದ್ದ. ಅವನು ವಿಹಾರ, ಬುದ್ಧನ ವಿಗ್ರಹಗಳನ್ನು ಕೆತ್ತಿಸಿದ್ದ. ತಾನು ದೊಡ್ಡ ಕೆಲಸ ಮಾಡಿದ್ದೇನೆ ಎಂಬುದು ಚಕ್ರವರ್ತಿಗಿದ್ದ ಭಾವನೆ. “ನಾನು ಸರಿಯಾದ ಕೆಲಸ ಮಾಡಿದ್ದೇನೆಯೆ?’ ಎಂದು ಬೋಧಿಧರ್ಮನನ್ನು “ವೊ’ ಕೇಳಿದ. ಇವನು, “ಇಲ್ಲ’ ಎಂದುಬಿಟ್ಟ. ಈ ಜಗತ್ತಿನಲ್ಲಿ ಬುದ್ಧ ಇರುವನೆ ಎಂದು ಕೇಳಿದ್ದಕ್ಕೆ ಬೋಧಿಧರ್ಮ “ಇಲ್ಲ’ ಎಂದು ಉತ್ತರಕೊಟ್ಟ. ತಾನು ಮಾಡಿದ ಕೆಲಸ ಇವನು ಮೆಚ್ಚಲಿ ಎಂಬುದು “ವೊ’ ಭಾವನೆ, ಅದೇನು ಮಹಾರಾಜನಾದವನ ಕರ್ತವ್ಯ ಇದು ಎಂಬುದು “ದ ಮೊ’ವಿನ ದೃಷ್ಟಿ. ಬುದ್ಧ ಇ¨ªಾನೋ ಇಲ್ಲವೋ ಎಂಬುದು ಅವರವರ ಶ್ರದ್ಧೆ ನಂಬಿಕೆಗೆ ಸಂಬಂಧಪಟ್ಟದ್ದು. ಚಕ್ರವರ್ತಿಗೆ ಬುದ್ಧನ ಇರುವಿಕೆಯಲ್ಲಿ ಶ್ರದ್ಧೆ ಇಲ್ಲ ಎಂಬುದು ನಕಾರದ ಮೂಲಕ “ದ ಮೊ’ ಕಾಣಿಸಿದ ಉತ್ತರ. ಚಕ್ರವರ್ತಿಗೆ ಇದೆಲ್ಲ ಹಿಡಿಸಲಿಲ್ಲ. ಸಾಮ್ರಾಜ್ಯದ ಆಚೆ ಹೋಗುವಂತೆ ಅಪ್ಪಣೆ ಮಾಡಿದ, ನಸುನಗುತ್ತ ಬೋಧಿಧರ್ಮ ಅಲ್ಲಿಂದ ಹೊರಟ.
ಅನುಭವ ಪ್ರಧಾನಅಧ್ಯಾತ್ಮದಲ್ಲಿ ಅನುಭವಕ್ಕೆ ಅತಿ ಘನಿಷ್ಠ ಸ್ಥಾನ. ಬೋಧಿಧರ್ಮ ಮಾಡಿದ್ದೂ ಇದನ್ನೇ. ಸತ್ಯ ಹೇಳುವವರು ಅನೇಕ ಸಲ ಒಂಟಿ ದಾರಿಗರಾಗುತ್ತಾರೆ. ಬೋಧಿಧರ್ಮನಿಗೂ ಚೀನಾದಲ್ಲಿ ಇದೇ ಅನುಭವವಾಯಿತು. ಅಲ್ಲಿನ ಪುಸ್ತಕವೇ ಜ್ಞಾನ ಎಂದುಕೊಂಡಿದ್ದ ಸಮಾಜ ಅವನನ್ನು ಮೊದಲು ತಿರಸ್ಕರಿಸಿತು. ಪುಸ್ತಕದ ಹಾಳೆಗಳೆಲ್ಲ ಧ್ಯಾನವೇ ಮುಖ್ಯ ಎಂದು ಕಲಿಸಿಕೊಡಲು ಹೋದ ತಪ್ಪಿಗೆ ಬೋಧಿಧರ್ಮ ತಿಂಗಳುಗಟ್ಟಳೆ ಭಿಕ್ಷೆ ಬೇಡಬೇಕಾಗಿ ಬಂತು. ಅಲ್ಲಿಂದ ಬೇರೊಂದು ಪ್ರಾಂತ್ಯಕ್ಕೆ ಹೋಗಿ ಅವನು ಷಾಲಿನ್ ವಿಹಾರದ ಬಳಿ ಹೋದ. ಅಲ್ಲಿ ಅವನಿಗೆ ಪ್ರವೇಶ ದೊರೆಯಲಿಲ್ಲ. ಸಮೀಪ ಒಂದು ಗುಹೆ ಇತ್ತು, ಅದರೊಳಗೆ ಹೋಗಿ ಬೋಧಿಧರ್ಮ ಕೂತು ಬಿಟ್ಟ. ಮಾತಿಲ್ಲ, ಕತೆಯಿಲ್ಲ. ಎದುರಿಗೆ ಒಂದು ಗೋಡೆಯಿತ್ತು. ಅದನ್ನು ನೋಡುತ್ತ ಅವನು ಮೌನವಾಗಿದ್ದ. ಒಂಭತ್ತು ವರ್ಷಗಳು ಉರುಳಿದವು. ಅವನ ಧ್ಯಾನನಿಷ್ಠೆ ಎದುರಿನ ಮಠದವರ ಮನ ಕರಗಿಸಿತು. ಅವರಿಗೆ ಗೋಡೆ ನೋಡುತ್ತ ಧ್ಯಾನ ಮಾಡುವ ಝೆನ್ ಕಲಿಸಿಕೊಡಲು ಹೋದ. ಅವರೂ ಉತ್ಸಾಹ ತೋರಿಸಿದರು. ಧ್ಯಾನ ಬಲಶಾಲಿಗಳ ವಸ್ತು. ಸೋಮಾರಿಗಳು, ತಮ್ಮ ಅನ್ನ ಸಂಪಾದಿಸದವರು, ಬೇಗ ನಿ¨ªೆಗೆ ಜಾರುವವರು ಈ ಮಾರ್ಗದಲ್ಲಿ ಹೋಗುವುದು ಸುಲಭ. ಮಠದಲ್ಲಿ ನಿ¨ªೆ , ಧ್ಯಾನದ ಹೆಸರಿನಲ್ಲಿ ಭಿಕ್ಷುಗಳು ನಿ¨ªೆಗೆ ಹೋಗಿಬಿಡುತ್ತಿದ್ದರು. ಕೆಲವರಿಗೆ ಜ್ವರ ಬರುತ್ತಿತ್ತು. ಈ ಧ್ಯಾನದ ತೀವ್ರತೆ ಸಹಿಸುವ ಕ್ಷಮತೆ ಅವರಿಗೆ ಬರಲಿಲ್ಲ. ಝೆನ್ ಅಂದರೆ ಕೆಲವು ಸುಂದರ ಕತೆಗಳು ಎಂದು ನಂಬಿಕೊಂಡವರಿಗೆ ಈ ಮಾತು. ಬೋಧಿಧರ್ಮ ಕರುಣಾಳು. ಅವರಿಗೆ ಝೆನ್ ದಾರಿ ತೋರಿಸಬೇಕೆಂದಿದ್ದ. ಹೀಗಾಗಿ ಅವರ ಕ್ಷಮತೆ ಹೆಚ್ಚಿಸಲು ದಾರಿ ಕಂಡುಕೊಂಡ. ಭಿಕ್ಷುಗಳ ಸಾಮರ್ಥ್ಯ ಹೆಚ್ಚಿಸಲು ಅವರಿಗೆ ಪ್ರಾಣಾಯಾಮ, ಸಮರ ಕಲೆ ಕಲಿಸಿಕೊಟ್ಟ. ಅವನು ಆ ಮಠದಲ್ಲಿ ಇದ್ದು ಕೊಂಡು ಸಮೀಪಕ್ಕೆ ಬಂದವರಿಗೆಲ್ಲ ಝೆನ್ ಕಲಿಸಿಕೊಟ್ಟ. ಅವನು ನೂರಕ್ಕೂ ಹೆಚ್ಚು ವರ್ಷ ಬದುಕಿದ್ದ. ಅಲ್ಲಿ ಅವನಿಗೆ ಕೆಲವು ಶಿಷ್ಯರು ವಿಷ ಹಾಕಿ ಕೊಂದರು ಎನ್ನಲಾಗುತ್ತದೆ. ಅದು ಕುರ್ಚಿಗಾಗಿ ನಡೆದ ಕೊಲೆ, ಬೋಧಿಧರ್ಮದ ನಂತರ ಯಾರು ಎಂಬುದನ್ನು ಅವನ ಶಿಷ್ಯರು ಮಠದ ಗದ್ದುಗೆಯ ಸ್ಪರ್ಧೆ ಮಾಡಿಕೊಂಡರು. ಹೀಗಾಗಿ, ಅಸಮಾಧಾನಗೊಂಡ ಒಬ್ಬ ಶಿಷ್ಯ ಗುರುವನ್ನು ಮುಗಿಸಿದ. ಬೋಧಿಧರ್ಮ ಬೂದಿಯಾಗಿದ್ದ ಬೌದ್ಧಧರ್ಮಕ್ಕೆ ಮತ್ತೆ ಅಗ್ನಿಸ್ಪರ್ಶ ನೀಡಿದ. ಬಾಹ್ಯಾಚರಣೆ, ಯಾಂತ್ರಿಕತೆ, ಭಯ, ಇವುಗಳ ಜಾಗದಲ್ಲಿ ಸೌಂದರ್ಯ, ಕಾವ್ಯ, ಸತ್ಯದ ನೇರದರ್ಶನ ಇವುಗಳನ್ನು ಮರು ಪರಿಚಯಿಸಿದ. ಸಜಾಗರೂಕತೆಯ ಸಂಕೇತವಾಗಿ ಬೋಧಿಧರ್ಮ ಇಂದಿಗೂ ಗೌರವಕ್ಕೆ ಪಾತ್ರನಾಗುತ್ತ ಇ¨ªಾನೆ. ನಡೆನುಡಿ ಸಿದ್ಧಾಂತ ಎಂಬುದರ ಮುಂದಿನದು ಬರೀ ನಡೆಯ ದಾರಿ, ನುಡಿಗೆ ವಿದಾಯ ಹೇಳಿದ ಚೇರನ ಬೋಧಿಧರ್ಮ. ತ್ರಿಪಿಟಿಕ, ಧಮ್ಮಪದ, ಬುದ್ಧ ಪಾದ, ವಿಗ್ರಹ ಯಾವುದು ಬೇಕಾದರೂ ನಮ್ಮ ಕಣ್ಣಿಗೆ ಬೀಳುವ ಧೂಳಾಗಬಹುದು. ನಾವು ಬುದ್ಧನೇ ಆಗಬೇಕೇ ಹೊರತು ಬೌದ್ಧರಲ್ಲ ಎಂಬುದನ್ನು ಅವನು ನಿರ್ದಾಕ್ಷಿಣ್ಯವಾಗಿ ಝೆನ್ ಮೂಲಕ ನಡೆದು ತೋರಿಸಿದ. – ಜಿ. ಬಿ. ಹರೀಶ