ನವ ದೆಹಲಿ : ದೇಶದ ದೊಡ್ಡ ನಾಗರಿಕ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ 2021 ನೇ ಸಾಲಿನ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.
ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ 511ಕ್ಕೂ ಅಧಿಕ ಹುದ್ದೆಗಳಿಗೆ ಬ್ಯಾಂಕ್ ಆಫ್ ಬರೋಡ ಪ್ರಕಟಣೆ ಹೊರಡಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 29, 2021ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಬ್ಯಾಂಕ್ ಆಫ್ ಬರೋಡದ ಪ್ರಕಟಣೆ ತಿಳಿಸಿದೆ.
ಓದಿ : ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ
ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್, ಟೆರಿಟರಿ ಹೆಡ್ಸ್, ಗ್ರೂಪ್ ಹೆಡ್ಸ್, ಪ್ರಾಡಕ್ಟ್ ಹೆಡ್ ಇನ್ವೆಸ್ಟ್ ಮೆಂಟ್ ಆ್ಯಂಡ್ ರಿಸರ್ಚ್, ಆಪರೇಷನ್ ಆ್ಯಂಡ್ ಟೆಕ್ನಾಲಜಿ ಹೆಡ್, ಡಿಜಿಟಲ್ ಸೇಲ್ಸ್ ಮ್ಯಾನೇಜರ್, ಐಟಿ ಫಂಕ್ಶನಲ್ ಅನಾಲಿಸ್ಟ್ ಮ್ಯಾನೇಜರ್ ಪೋಸ್ಟ್ ಗಳಿಗೆ ಬ್ಯಾಂಕ್ ಆಫ್ ಬರೋಡ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 511 ಹುದ್ದೆಗಳಿಗೆ ಭಾರತದಾದ್ಯಂತವಿರುವ ಬ್ಯಾಂಕ್ ಆಫ್ ಬರೋಡಾ ಗೆ ನೇಮಕಾತಿಯನ್ನು ಈ ಬಾರಿ ಮಾಡಿಕೊಳ್ಳುತ್ತಿದ್ದು, ಏಪ್ರಿಲ್ 29 2021ರೊಳಗೆ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ : ಕನಿಷ್ಠ: 24 ವರ್ಷ, ಗರಿಷ್ಠ: 45 ವರ್ಷ
ಅರ್ಜಿ ಶುಲ್ಕ: ಎಸ್ ಟಿ/ ಎಸ್ ಸಿ/ ದಿವ್ಯಾಂಗ/ಮಹಿಳಾ : 100 ರೂ. ಸಾಮಾನ್ಯ ಅಭ್ಯರ್ಥಿ/ ಒಬಿಸಿ ಅರ್ಜಿ: 600 ರೂ.
ನೇಮಕಾತಿ ಪ್ರಕ್ರಿಯೆ : ವೈಯಕ್ತಿಕ ಸಂದರ್ಶನ, ಗ್ರೂಪ್ ಡಿಸ್ಕಶನ್ ಇನ್ನಿತರ ವಿಧಾನ.
ಓದಿ : ವಿಟ್ಲ: ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಕಾರು; ಓರ್ವನಿಗೆ ಗಾಯ