ಶ್ರೀರಂಗಪಟ್ಟಣ: ಕಾವೇರಿ ಜಲಾನಯನ ಪ್ರದೇಶ ದಲ್ಲಿ ನಿರಂತರ ಸುರಿದ ಮಳೆಯಿಂದ ಕೃಷ್ಣರಾಜ ಸಾಗರ ಅಣೆಕಟ್ಟೆ ತುಂಬಿದ ಹಿನ್ನೆಲೆ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಟ್ಟಿದ್ದರಿಂದ ರಂಗನತಿಟ್ಟು ಪಕ್ಷಿ ಧಾಮಲ್ಲಿ ದೋಣಿವಿಹಾರ ಸ್ಥಗಿತಗೊಳಿಸಲಾಗಿದೆ.
ಕಾವೇರಿ ನದಿಗೆ ಸುಮಾರು 10 ಸಾವಿರ ಕ್ಯುಸೆಕ್ ಹೆಚ್ಚು ನೀರು ಹರಿದು ಬರುತ್ತಿದೆ. ಪ್ರವಾಸಿಗರಿಗೆ ದೋಣಿ ವಿಹಾರ ನಡೆಸಲು ಸಾಧ್ಯವಾಗದೆ ಸುಮಾರು 18 ದೋಣಿಗಳನ್ನು ಸಿಬ್ಬಂದಿಗಳು ಒಂದೆಡೆ ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕಿದ್ದಾರೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಪಕ್ಷಿಧಾಮದ ಮುಂಭಾಗದಲ್ಲೇ ದೋಣಿ ವಿಹಾರ ವನ್ನು ತಾತ್ಕಾಲಿಕ ಸ್ಥಗಿತವಾಗಿರುವ ನಾಮಫಲಕ ಹಾಕಲಾಗಿದೆ. ಈ ಫಲಕ ನೋಡಿ ಅರ್ಥದಷ್ಟು ಪ್ರವಾಸಿಗರು ಅಲ್ಲಿಯೇ ಅವರ ವಾಹನಗಳನ್ನು ವಾಪಸ್ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಪ್ರವಾಸಿಗರಿಗೆ ಬೇಸರ: ಪ್ರವಾಸಿ ತಾಣಗಳು ಕೊರೊನಾದಿಂದ ಬಂದ್ ಆಗಿದ್ದ ಪಕ್ಷಿಧಾಮ ಕೆಲ ತಿಂಗಳಿನಿಂದ ತೆರೆದಿದ್ದು, ಅದರಲ್ಲೂ ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಸಂಭ್ರಮದಿಂದ ಕಳೆ ಕಟ್ಟಿತ್ತು. ಪ್ರತಿದಿನ ಸಾವಿರಾರು ಪ್ರವಾಸಿಗರು ರಂಗನತಿಟ್ಟಿಗೆ ಕುಟುಂಬ ಸಮೇತರಾಗಿ ಪಕ್ಷಿಗಳ ನೋಡಲು ಭೇಟಿ ನೀಡಿ ಖುಷಿ ಪಡುತ್ತಿದ್ದರು. ಈಗ ಮತ್ತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ದೋಣಿ ವಿಹಾರ ಸ್ಥಗಿತಗೋಳಿಸಿರುವುದು ಪ್ರವಾಸಿ ಗರು ಹಾಗೂ ಪಕ್ಷಿ ಪ್ರಿಯರಲ್ಲಿ ಬೇಸರ ತಂದಿದೆ.
ಪಕ್ಷಿಧಾಮಕ್ಕೆ ಬರುವ ಬಹುತೇಕ ಪ್ರವಾಸಿಗರು ದೋಣಿವಿಹಾರ ನಡೆಸಿ, ಸಾಧ್ಯವಾದಷ್ಟು ಹತ್ತಿರ ದಿಂದ ಪಕ್ಷಿಗಳನ್ನು ನೋಡಿ ಕಣ್ತುಂಬಿಕೊಳ್ಳಬೇಕು. ಪಕ್ಷಿಗಳ ವಿವಿಧ ಭಂಗಿಗಳನ್ನು ಸೆರೆಯಿಡಿಯ ಬೇಕು ಎಂಬ ಆಸೆಯಿಂದ ಪಕ್ಷಿಧಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಇದೀಗ ನಿರಾಸೆಯಾಗಿದೆ.
ಬೃಹತ್ ವೀಕ್ಷಣಾಲಯ ನಿರ್ಮಾಣ: ಪಕ್ಷಧಾಮದ ಸಿಬ್ಬಂದಿ ಎರಡು ಬೃಹತ್ ವೀಕ್ಷಣಾಲಯಗಳನ್ನು ನಿರ್ಮಾಣ ಮಾಡಿದ್ದು, ಈ ವೀಕ್ಷಣಾಲಯದಿಂದ ಪಕ್ಷಿಧಾಮದ ನೋಟವನ್ನು ವೀಕ್ಷಿಸಬಹುದಾಗಿದೆ. ಬ್ಯಾಟರಿ ಚಾಲಿತ ವಾಹನದಲ್ಲಿ ಸುಮಾರು 8 ಜನರನ್ನು ಪಕ್ಷಿಧಾಮದ ಸುತ್ತ ಸುತ್ತಾಡಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಿಕೊಂಡಿದೆ. ಇದರಿಂದ ವೃದ್ಧರು ಹಾಗೂ ದಿವ್ಯಾಂಗರು ಈ ಬ್ಯಾಟರಿ ಚಾಲಿತ ವಾಹನದಲ್ಲಿ ಕುಳಿತು ಸುತ್ತಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ದೋಣಿವಿಹಾರಕ್ಕೆ ತೊಂದರೆ: ದೋಣಿವಿಹಾರಕ ತಾತ್ಕಾಲಿಕವಾಗಿ ಸ್ಥಗಿತದಿಂದ ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಳಿಕೆಯಾಗಿದೆ. ಭಾನುವಾರ 1500 ಜನ ಹಾಗೂ ಸೋವವಾರ 2000 ಜನ ಪ್ರವಾಸಿಗರು ರಂಗನತಿಟ್ಟಿಗೆ ಭೇಟಿ ನೀಡಿದ್ದಾರೆ. ಮೊದಲು ದೋಣಿವಿಹಾರ ಸ್ಥಗಿತವಾದರೆ ಬರುವ ಪ್ರವಾಸಿಗರಲ್ಲಿ ಶೇ.75 ಭಾಗ ಪ್ರವಾಸಿಗರ ಸಂಖ್ಯೆ ಯಲ್ಲಿ ಇಳಿಮುಖವಾಗುತ್ತಿತ್ತು. ಆದರೆ, ನಾವು ದೋಣಿ ಹೊರತುಪಡಿಸಿ ರಕ್ಷಣಾ ಗೋಪುರಗಳು, ಬ್ಯಾಟರಿ ಚಾಲಿತ ವಾಹನಗಳು, ಚಿಟ್ಟೆ ಪಾರ್ಕ್ ಹಾಗೂ ಕಾರಂಜಿಗಳಿರುವುದುರಿಂದ ಪಕ್ಷಿಧಾಮಕ್ಕೆ ಬರುವ ಪ್ರವಾಸಿ ಗರು ಮೋàಜು ಮಸ್ತಿ ಮಾಡುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೆ. ಸುರೇಂದ್ರ ತಿಳಿಸಿದರು.