Advertisement

ಬೋಟ್‌ ನಾಪತ್ತೆ: ಇಂದು ಬೆಂಗಳೂರಿನಲ್ಲಿ  ಸಭೆ

12:30 AM Jan 17, 2019 | Team Udayavani |

ಮಲ್ಪೆ: ಬೋಟ್‌ ಸಹಿತ 7 ಮಂದಿ ಮೀನುಗಾರರ ಅಪಹರಣ ಶಂಕೆ ವ್ಯಕ್ತವಾಗುತ್ತಿರುವುದರಿಂದ ಕರಾವಳಿಯ ಭದ್ರತೆಗೆ ಕ್ರಮ ಕೈಗೊಳ್ಳಲು ಜ. 17ರಂದು ಅಪರಾಹ್ನ 4 ಗಂಟೆಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.

Advertisement

ನೌಕಾಪಡೆ, ಕೋಸ್ಟ್‌ಗಾರ್ಡ್‌ ಅಧಿಕಾರಿಗಳು, ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು, ಉಡುಪಿ ಜಿಲ್ಲಾಧಿಕಾರಿ ಮತ್ತು ಮೀನುಗಾರ ಪ್ರತಿನಿಧಿಗಳು ಸಭೆಯಲ್ಲಿರುತ್ತಾರೆ. ಮೀನುಗಾರ ನಾಪತ್ತೆ ಪ್ರಕರಣದ ಬಗ್ಗೆಯೂ ಚರ್ಚಿಸಿ ಮುಂದೇನು ಮಾಡುವುದು ಎಂಬ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

33 ದಿನ ಕಳೆದರೂ …
ನಾಪತ್ತೆಯಾಗಿ 33 ದಿನ ಕಳೆದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಸಮುದ್ರದಲ್ಲಿ ಮತ್ತು ಗೋವಾ-ಮಹಾರಾಷ್ಟ್ರ ಗಡಿಯ ನದಿಗಳಲ್ಲಿ ಮೀನುಗಾರರಿಂದ ಹುಡುಕಾಟ ಮುಂದುವರಿದಿದೆ. ರಾಜ್ಯ, ಕೇಂದ್ರ ಸರಕಾರಗಳ ಪ್ರಯತ್ನವೂ ನಡೆಯುತ್ತಿದೆ.ಸಮುದ್ರದ ಮಧ್ಯೆ ದೋಣಿ ಮುಳುಗಿರಬಹುದೇ ಎಂಬ ಶಂಕೆಯಲ್ಲಿ ಸಮುದ್ರದ ಅಡಿ ಭಾಗವನ್ನು ಶೋಧಿಸ ಬಲ್ಲ ನೌಕಾ ಪಡೆಯ ಸೋನಾರ್‌ ಶಿಪ್‌ ಕಾರ್ಯಾಚರಣೆ ನಡೆಸಿದೆ. ಇದರ ವರದಿ ಇನ್ನಷ್ಟೆ ಬರಬೇಕಿದೆ.

ಪವಮಾನಯಾಗ
ಬುಧವಾರ ಬೆಳಗ್ಗೆ ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಪವಮಾನಯಾಗ, ಮಧ್ವಚಾರ್ಯರು ಅದೃಶ್ಯವಾದ ಜಾಗದಲ್ಲಿ ಪವಮಾನ ಅಭಿಷೇಕ, ಮಂತ್ರೋಚ್ಚಾರಣೆ ನಡೆಸಲಾಯಿತು. ನಾಪತ್ತೆಯಾದ ಮೀನುಗಾರರ ಕುಟುಂಬಗಳು ಪಾಲ್ಗೊಂಡಿದ್ದು ಎಲ್ಲರೂ ಜೀವಂತವಾಗಿ ಮರಳಿ ಬರುವಂತೆ ಪ್ರಾರ್ಥಿಸಲಾಯಿತು. 

ವೈಜ್ಞಾನಿಕವಾಗಿ ಎಲ್ಲ ಪ್ರಯುತ್ನಗಳು ನಡೆಯುತ್ತಿದೆ. ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಬುಧವಾರ ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ಏಳು ಮಂದಿ ಮೀನುಗಾರರು ಮತ್ತು ದೋಣಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಕೇಂದ್ರ ಸರಕಾರ ಸೇನಾ ಪಡೆಯನ್ನು ಬಳಸಿಯಾದರೂ ಮೀನುಗಾರರನ್ನು ಹುಡು ಕುವ ಪ್ರಯತ್ನ ಮಾಡಬೇಕು.
– ಸತೀಶ್‌ ಕುಂದರ್‌ 
ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next