ಕೋಟ: ಮೀನುಗಾರಿಕೆ ದೋಣಿಯೊಂದು ಮರಳು ದಿಬ್ಬಕ್ಕೆ ಢಿಕ್ಕಿಯಾಗಿ ಹಾನಿಗೀಡಾದ ಘಟನೆ ಪಾರಂಪಳ್ಳಿ ಪಡುಕರೆಯಲ್ಲಿ ಗುರುವಾರ ಸಂಭವಿಸಿದೆ.
ಬೆಂಗ್ರೆ ನಿವಾಸಿ ಸಂದೀಪ್ ತೋಳಾರ್ ಮಾಲಕತ್ವದ ದುರ್ಗಾಪರಮೇಶ್ವರೀ ರುಕ್ಮಯ್ಯ ಹೆಸರಿನ ದೋಣಿ ಪಾರಂಪಳ್ಳಿ ಪಡುಕರೆ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಎಂಜಿನ್ ಸ್ತಬ್ಧಗೊಂಡು ದಡಕ್ಕೆ ಅಪ್ಪಳಿಸಿತು. ಅಕ್ಕಪಕ್ಕದ ಬೋಟ್‌ಗಳು ಸಹಾಯಕ್ಕೆ ಧಾವಿಸಿದರೂ ಪ್ರಯೋಜನವಾಗದೆ ಗಾಳಿಯ ರಭಸಕ್ಕೆ ಮರಳು ದಿಬ್ಬಕ್ಕೆ ಬಡಿದು ಮುಳುಗಲಾರಂಭಿಸಿತು.
ಬೋಟಿನಲ್ಲಿದ್ದ ಕಾರ್ಮಿಕರನ್ನು ಬೇರೆ ಬೋಟಿನವರು ದಡಕ್ಕೆ ಸೇರಿಸಿದ್ದಾರೆ.
ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಕ್ಕೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.