ಬಿಹಾರ: ಪಶ್ಚಿಮ ಬಂಗಾಳ ಮಹಾನಂದ ನದಿಯಲ್ಲಿ ದೋಣಿ ಮುಳುಗಡೆಯಾಗಿ ಇಬ್ಬರು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ದೋಣಿಯಲ್ಲಿ 60 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರತಿವರ್ಷ ದುರ್ಗಾ ಪೂಜೆಯ ದಿನದಂದು ಮುಕುಂದಪುರ ಘಾಟ್ ನಲ್ಲಿ ದೋಣಿ ಸ್ಪರ್ಧೆ ನಡೆಯುತ್ತಿತ್ತು. ಇದನ್ನು ವೀಕ್ಷಿಸಿದ ಜನರು ಖಾಸಗಿ ದೋಣಿಯಲ್ಲಿ ಬಿಹಾರದ ಜಗನ್ನಾಥಪುರ ಘಾಟ್ ಕಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ದೋಣಿ ಮಗುಚಿದ ಪರಿಣಾಮ ಹಲವರು ನೀರುಪಾಲಾಗಿದ್ದಾರೆ. ಸಾಮಾರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದೆ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.
ಇಲ್ಲಿಯವರೆಗೂ 28 ಮಂದಿಯನ್ನು ರಕ್ಷಿಸಲಾಗಿದ್ದು , ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್) ಧಾವಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ಕಳೆದ ತಿಂಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿ 47 ಮಂದಿ ಜಲಸಮಾಧಿಯಾಗಿದ್ದರು.
WB: 2 people died, 7 still missing after a boat carrying them from Malda to Bihar’s Katihar, capsized in Mahananda river, earlier tonight. 28 people rescued so far. Search&rescue operation by NDRF (National Disaster Response Force) is underway. Rescued people admitted to hospital
pic.twitter.com/vk45Dyk5hB
— ANI (@ANI)
October 3, 2019