Advertisement

ಅಮೃತ ಮಹೋತ್ಸವಕ್ಕೆ ಬಿಎಂಟಿಸಿ ಬಂಪರ್ ಕೊಡುಗೆ: ಒಂದು ದಿನ ಉಚಿತ ಪ್ರಯಾಣ

01:10 PM Aug 11, 2022 | Team Udayavani |

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಬಿಎಂಟಿಸಿ (ಬೆಂಗಳೂರು ಮೆಟ್ರೊಪೊಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್) ತನ್ನ ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡಿದೆ.

Advertisement

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಂದರೆ ಆಗಸ್ಟ್ 15ರಂದು ವೋಲ್ವೋ ಸೇರಿದಂತೆ ಬಿಎಂಟಿಸಿಯ ಯಾವುದೇ ಬಸ್ ನಲ್ಲಿ ಪ್ರಯಾಣಿಕರು ಇಡೀ ದಿನ ಉಚಿತ ಪ್ರಯಾಣ ಘೋಷಿಸಿದೆ.

ಅದರಂತೆ ಪ್ರಯಾಣಿಕರು ಅಂದು ಸಂಸ್ಥೆಯ ಬಸ್ ಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ:ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!

ಈ ಉಚಿತ ಪ್ರಯಾಣದಿಂದ ಸುಮಾರು ಮೂರೂವರೆ ಕೋಟಿ ರೂ. ಹೊರೆಬೀಳಲಿದೆ. ಸರ್ಕಾರ ಅನುಮತಿ ನೀಡಿದ್ದರಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next